ಎಷ್ಟೇ ವರ್ಷವಾದರೂ ಮಿಕ್ಸಿ ಕೆಟ್ಟು ಹೋಗೊಲ್ಲ ಹೊಸಮಿಕ್ಸಿ ಆಗಿರುತ್ತೆ ಮಿಕ್ಸಿಗೊಸ್ಕರ ಸೂಪರ್ ಟಿಪ್ಸ್..! - Karnataka's Best News Portal

ಎಷ್ಟೇ ವರ್ಷವಾದರೂ ಮಿಕ್ಸಿ ಕೆಟ್ಟು ಹೋಗಲ್ಲ! ಹೊಸ ಮಿಕ್ಸಿ ಯಾಗಿಯೇ ಇರುತ್ತದೆ!!ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಹೇಗೆ ಸರಿಯಾಗಿ ಇಟ್ಟುಕೊಳ್ಳಬೇಕು ಅವುಗಳು ಹಾಳಾಗದಂತೆ ಯಾವ ಒಂದು ವಿಧಾನ ವನ್ನು ಅನುಸರಿಸಬೇಕು ಎನ್ನುವುದರ ಬಗ್ಗೆ ಹಲವಾರು ವಿಷಯಗಳನ್ನು ಹುಡುಕುತ್ತಲೇ ಇರುತ್ತಾರೆ ಹೌದು ಅವರಿಗೆಲ್ಲರಿಗೂ ಕೂಡ ಈ ದಿನ ನಾವು ಹೇಳುವಂತಹ ಈ ಒಂದಷ್ಟು ವಿಧಾನಗಳು ಉಪಯೋಗವಾಗುತ್ತದೆ.

ಜೊತೆಗೆ ಈ ವಿಧಾನವನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ತಪ್ಪದೇ ಮಾಡುತ್ತಾರೆ ಎಂದು ಹೇಳಬಹುದು ಏಕೆಂದರೆ ಮಹಿಳೆಯರು ಯಾವುದೇ ಒಂದು ಪದಾರ್ಥವನ್ನಾಗಲಿ ಅವುಗಳನ್ನು ಹಾಳಾಗದಂತೆ ಜೋಪಾನವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ ಆದ್ದರಿಂದ ಅಂಥವರಿಗೆ ಈ ದಿನ ಹೇಳುವಂತಹ ಈ ವಿಧಾನ ಇಷ್ಟವಾಗುತ್ತದೆ ಜೊತೆಗೆ ಇವುಗಳನ್ನು ಅನುಸರಿಸುತ್ತಾರೆ ಎಂದು ಹೇಳಬಹುದು.

ಅದರಲ್ಲೂ ಅಡುಗೆ ಮನೆಯಲ್ಲಿರುವಂತಹ ಮಿಕ್ಸಿ ಮಹಿಳೆಯರಿಗೆ ಎಷ್ಟು ಪ್ರಮುಖವಾದಂಥ ಸಹಾಯ ವನ್ನು ಮಾಡುತ್ತದೆ ಎಂದರೆ ಬೇರೆ ಯಾರಾದರೂ ಇದ್ದರೆ ಎಷ್ಟು ಸಹಾಯ ಮಾಡುತ್ತಾರೋ ಅಷ್ಟೇ ಸಹಾಯವನ್ನು ಈ ಮಿಕ್ಸಿ ಮನೆಯಲ್ಲಿರುವಂತಹ ಮಹಿಳೆಯರಿಗೆ ಸಹಾಯಮಾಡುತ್ತದೆ ಎಂದೇ ಹೇಳಬಹುದು ಆದ್ದರಿಂದ ಮಿಕ್ಸಿಗಳು ಹಾಳಾಗುವು ದನ್ನು ತಪ್ಪಿಸುವಂತಹ ವಿಧಾನ ಈ ದಿನದ ಮಾಹಿತಿ ಯಾಗಿದ್ದು ಆ ವಿಧಾನವನ್ನು ಹೇಗೆ ಅನುಸರಿಸುವುದು ಮಿಕ್ಸಿಕೆಟ್ಟು ಹೋಗದ ಹಾಗೆ ಹೊಸ ಮಿಕ್ಸಿ ಯಾಗಿಯೇ ಇರುವಂತೆ ಹೇಗೆ ನೋಡಿಕೊಳ್ಳುವುದು.

ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳೋಣ ಮೊದಲನೆಯ ಟಿಪ್ಸ್ ಯಾವುದು ಎಂದರೆ ಹೆಚ್ಚಾಗಿ ಮಹಿಳೆಯರು ಮಿಕ್ಸಿಯಲ್ಲಿ ಪದಾರ್ಥಗಳನ್ನು ರುಬ್ಬುವುದರಿಂದ ಮಿಕ್ಸಿಯಲ್ಲಿ ಇರುವಂತಹ ಬ್ಲೇಡ್ ಶಾರ್ಪ್ ಇರುವುದಿಲ್ಲ ಆದ್ದರಿಂದ ಅವುಗಳನ್ನು ಹೇಗೆ ಶಾರ್ಪ್ ಮಾಡಬಹುದು ಎಂದರೆ ಕಲ್ಲು ಉಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿದರೆ ಮಿಕ್ಸಿ ಜಾರ್ ಬ್ಲೇಡ್ ಗಳು ಶಾರ್ಪ್ ಆಗುತ್ತದೆ.

ಇನ್ನು ಎರಡನೆಯ ಟಿಪ್ಸ್ ಹೆಚ್ಚಿನ ಜನ ಮಿಕ್ಸಿಯನ್ನು ಒಂದು ಕಡೆ ಇಟ್ಟು ಪ್ಲಗ್ ಇರುವ ಭಾಗಕ್ಕೆ ಎಳೆಯು ತ್ತಾರೆ ಈ ರೀತಿ ಮಾಡುವುದರಿಂದ ಮಿಕ್ಸಿಯ ಕೆಳಭಾಗ ದಲ್ಲಿ ಎಳೆಯುತ್ತಾ ಮೋಟಾರ್ ಇರುವಂತಹ ಸ್ಥಳ ಗಳು ಹಾಳಾಗುತ್ತದೆ ಅದರ ಬದಲು ಮಿಕ್ಸಿಯನ್ನು ಯಾವುದಾದರೂ ದೊಡ್ಡ ಅಳತೆಯ ಪ್ಲಾಸ್ಟಿಕ್ ಅಥವಾ ಫೈಬರ್ ಪ್ಲೇಟ್ ಮೇಲೆ ಇಟ್ಟು ತಟ್ಟೆಯನ್ನು ಎಳೆಯುವುದರಿಂದ ಮಿಕ್ಸಿ ಹಾಳಾಗುವುದಿಲ್ಲ.

ಮತ್ತೊಂದು ಟಿಪ್ಸ್ ಹೆಚ್ಚಿನ ಜನ ಮಸಾಲೆ ಪದಾರ್ಥ ಗಳು ಅಥವಾ ಮಾಂಸಾಹಾರಿ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬುತ್ತಾರೆ ಇದರಿಂದ ಅವುಗಳ ವಾಸನೆ ಹಾಗೆಯೇ ಉಳಿದಿರುತ್ತದೆ ಆಗ ಅಂತಹ ಸಂದರ್ಭ ದಲ್ಲಿ ಮಿಕ್ಸಿ ಜಾರಿಗೆ ನಿಂಬೆಹಣ್ಣನ್ನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಪೇಸ್ಟ್ ಮಾಡುವುದರಿಂದ ಮಿಕ್ಸಿಯಲ್ಲಿ ಇರುವಂತಹ ಯಾವುದೇ ವಾಸನೆ ಹೋಗುತ್ತದೆ ಜೊತೆಗೆ ಒಳ್ಳೆಯ ಪರಿಮಳವೂ ಕೂಡ ಬರುತ್ತದೆ ಹೀಗೆ ಕೆಲವೊಂದು ಮಿಕ್ಸಿಯ ಟಿಪ್ಸ್ ಗಳನ್ನು ಅನುಸರಿಸು ವುದರಿಂದ ಮಿಕ್ಸಿ ಹೆಚ್ಚು ದಿನ ಬಾಳಿಕೆ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *