ನಟ ವಿನೋದ್ ರಾಜ್ ಸಿನಿ ಜರ್ನಿ ..ಅಮ್ಮ ಲೀಲಾವತಿ ಮಗ ವಿನೋದ್ ರಾಜ್ ತೋಟ ಹೇಗಿದೆ ನೋಡಿ ಡ್ಯಾನ್ಸ್ ಗೂ ಸೈ ಫಾರ್ಮರ್ ಗೂ ಸೈ - Karnataka's Best News Portal

ನಟ ವಿನೋದ್ ರಾಜ್ ಸಿನಿ ಜರ್ನಿ||ನಟ ವಿನೋದ್ ರಾಜ್ ಅವರು ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿಯೇ ಮೈಕಲ್ ಜಾಕ್ಸನ್ ಎನ್ನುವಂತಹ ಹೆಸರನ್ನೇ ಪಡೆದುಕೊಂಡಂತಹ ನಟನಾಗಿ ಗುರುತಿಸಿಕೊಂಡಿದ್ದರು ಆದರೆ ಅವರು ಕೇವಲ 20 25 ಸಿನಿಮಾಗಳಲ್ಲಿ ಮಾತ್ರ ಅಭಿನಯ ವನ್ನು ಮಾಡಿದ್ದರು ಕೂಡ ಅವರ ಅತ್ಯುತ್ತಮವಾದ ನಟನೆ ಅಂದರೆ ನೃತ್ಯವನ್ನು ಚೆನ್ನಾಗಿ ಮಾಡುತ್ತಿದ್ದರು ಎನ್ನುವ ಕಾರಣದಿಂದಲೇ.

ಆಗಿನ ಕಾಲದಲ್ಲಿಯೇ ಅತ್ಯಂತ ಹೆಚ್ಚಿನ ಹೆಸರನ್ನು ಪಡೆದಂತಹ ನಮ್ಮ ಕನ್ನಡದ ನಟ ಎಂದು ಹೇಳಿದರೆ ತಪ್ಪಾಗುವುದಿಲ್ಲ ನಮ್ಮ ಕನ್ನಡ ಚಿತ್ರರಂಗದಲ್ಲಿಯೇ ಮೊಟ್ಟಮೊದಲನೆಯ ಬಾರಿಗೆ ಹೊರದೇಶಕ್ಕೆ ಹೋಗಿ ಅಲ್ಲಿ ನೃತ್ಯವನ್ನು ಕಲಿತು ನಮ್ಮ ಕನ್ನಡ ಚಲನಚಿತ್ರರಂಗ ದಲ್ಲಿ ಡ್ಯಾನ್ಸ್ ರಾಜ ಎಂದೇ ಖ್ಯಾತಿಯನ್ನು ನಟ ವಿನೋದ್ ರಾಜ್ ಅವರು ಪಡೆದಿದ್ದರು.

ಆದರೆ ಕೇವಲ ಕಡಿಮೆ ಅವಧಿಯಲ್ಲಿ ಮಾತ್ರ ಅವರು ಸಿನಿಮಾಗಳಲ್ಲಿ ಅಭಿನಯಿಸುವುದರ ಮುಖಾಂತರ ಎಲ್ಲರಿಗೂ ಮನಮೆಚ್ಚಿದ ನಾಯಕನಾಗಿ ಗುರುತಿಸಿ ಕೊಂಡಿದ್ದರು ತದನಂತರದ ದಿನದಲ್ಲಿ ಅವರು ಅವರ ತಾಯಿಯ ಆರೋಗ್ಯವನ್ನು ನೋಡಿಕೊಳ್ಳುವುದರ ಜೊತೆಗೆ ಹಾಗೂ ಅವರ ತಾಯಿಯ ಕನಸಿನಂತೆ ಅವರು ವ್ಯವಸಾಯವನ್ನು ಮುಂದುವರಿಸಿಕೊಂಡು ಹೋಗಬೇಕು ಹಾಗೂ ಯಾರೇ ಇಲ್ಲದಿದ್ದರೂ ಕೂಡ ನಾವು ಭೂಮಿಯನ್ನು ನಂಬಿ ನಮ್ಮ ನೋವನ್ನು ಮರೆಸುವಂತಹ ಶಕ್ತಿ ಇರುವುದು ಕೇವಲ ವ್ಯವಸಾ ಯಕ್ಕೆ ಮಾತ್ರ ಎಂಬ ಮಾತನ್ನು ಕೂಡ.

ಲೀಲಾವತಿ ಅವರು ಮಗನಿಗೆ ತಿಳಿಸಿಕೊಟ್ಟಿದ್ದರು ಅದರಂತೆ ವಿನೋದ್ ರಾಜ್ ಅವರು ತಾಯಿಯ ಮಾತಿನಂತೆ ಅವರ ಎಲ್ಲಾ ಕನಸನ್ನು ಕೂಡ ಈಡೇರಿಸಿ ಕೊಂಡು ಬಂದಿದ್ದಾರೆ ಎಂದು ಹೇಳಿದರೆ ತಪ್ಪಾಗುವು ದಿಲ್ಲ ಹೌದು ವಿನೋದ್ ರಾಜ್ ಅವರು ಇಂದಿಗೂ ಕೂಡ ಒಬ್ಬಂಟಿಯಾಗಿ ಜೀವನವನ್ನು ಸಾಗಿಸುತ್ತಿದ್ದು ಯಾರನ್ನು ಕೂಡ ವಿವಾಹವಾಗಿಲ್ಲ ಅವರ ಒಬ್ಬಂಟಿ ಜೀವನವನ್ನು ವ್ಯವಸಾಯದಲ್ಲಿ ಕಳೆಯುತ್ತಿದ್ದಾರೆ.

ನಟ ವಿನೋದ್ ರಾಜ್ ಅವರು ತಮ್ಮ ತಾಯಿಯ ಬಗ್ಗೆ ಹೆಚ್ಚಿನ ಗೌರವವನ್ನು ಇಟ್ಟುಕೊಂಡಿದ್ದು ಪ್ರತಿಯೊಬ್ಬರೂ ಕೂಡ ನಮ್ಮ ತಾಯಿಯನ್ನು ನೋಡಿ ಕಲಿತುಕೊಳ್ಳ ಬೇಕಾದಂತ ಎಷ್ಟೋ ವಿಷಯಗಳು ಇದೆ ಎಂಬ ಮಾತನ್ನು ಕೂಡ ಹೇಳುತ್ತಾರೆ ಏಕೆಂದರೆ ಯಾವುದೇ ಒಬ್ಬ ತಂದೆ-ತಾಯಿಗಳು ಮಕ್ಕಳು ಅವರ ಮಾತನ್ನು ಕೇಳಲಿಲ್ಲ ಎಂದರೆ ಅವರನ್ನು ಹಿಂಸೆಯಿಂದ ಈ ವಿಷಯದಲ್ಲಿಯೇ ನೀನು ಉನ್ನತಿಯನ್ನು ಪಡೆಯಬೇಕು ಎಂದು ಹೇಳುತ್ತಾರೆ.

ಆದರೆ ನನ್ನ ತಾಯಿ ಆ ರೀತಿ ಇಲ್ಲ ನಿನಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಆ ವಿಷಯದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣು ಎಂಬ ಮಾತನ್ನು ನನ್ನ ತಾಯಿ ನನಗೆ ಹೇಳಿಕೊಟ್ಟಿದ್ದಾರೆ ಅದರಿಂದಲೇ ನಾನು ಈ ದಿನ ಈ ಒಂದು ಮಟ್ಟದಲ್ಲಿ ಇದ್ದೇನೆ ಇದಕ್ಕೆಲ್ಲ ಮೂಲ ಕಾರಣ ನನ್ನ ತಾಯಿ ಎಂದು ಹೇಳುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ವಿನೋದ್ ರಾಜ್ ಹೇಳಿದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *