ಮೂವತ್ತು ವರ್ಷಗಳ ಹಳೆಯ ಕಾಯಿಲೆಗಳು ಮೂವತ್ತು ನಿಮಿಷದಲ್ಲಿ ಮಂಗಮಾಯ ಏನಿದು ಮರ್ಮ ಪಾಯಿಂಟ್ ಗಳು ಎಲ್ಲೆಲ್ಲೆ ಇವೆ - Karnataka's Best News Portal

30 ವರ್ಷಗಳ ಕಾಯಿಲೆಯನ್ನು ಕೂಡ 30 ನಿಮಿಷಗಳಲ್ಲಿ ಮಾಯ ಮಾಡುತ್ತದೆ ಈ ಮರ್ಮ ಚಿಕಿತ್ಸೆ…ಈಗಿನ ಕಾಲದಲ್ಲಿ ಎಲ್ಲ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೂ ಒಂದು ಕೆಟ್ಟ ಅಭ್ಯಾಸ ಇದೆ. ಏನೆಂದರೆ ಹಿರಿಯರು ಕಿರಿಯರು ಎನ್ನದೆ ಎಲ್ಲರ ಮುಂದೆ ಕೂಡ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು. ಈಗ ಹೆಣ್ಣುಮಕ್ಕಳು ಕೂಡ ಜೀನ್ಸ್ ಧರಿಸುತ್ತಾ ಇರುವುದರಿಂದ ಕೆಲಸಕ್ಕೆ ಹೋದ ಜಾಗದಲ್ಲಿ ಕಾಲಿನ ಮೇಲೆ ಕಾಲು ಹಾಕಿ ಕಂಪ್ಯೂಟರ್ ಮುಂದೆ ದಿನಗಟ್ಟಲೆ ಕೂತಿರುತ್ತಾರೆ.

ಹುಡುಗರು ಸಹ ಧಿಮಾಕಿನಿಂದ ಅಥವಾ ಅದನ್ನೇ ಒಂದು ಪ್ರತಿಷ್ಟೆ ಎನ್ನುವ ರೀತಿ ಮಾಡುತ್ತಾರೆ. ಪ್ರಶ್ನೆ ಮಾಡಲು ಹೋದವರಿಗೆ ನನ್ನ ಕಾಲು ನನ್ನ ಇಷ್ಟ ಎನ್ನುವ ಉಡಾಫೆ ಉತ್ತರ ಕೊಡುತ್ತಾರೆ. ಆದರೆ ಇದರಿಂದ ಎಷ್ಟು ಕೆಟ್ಟ ಪರಿಣಾಮ ಆರೋಗ್ಯದ ಮೇಲೆ ಬೀಳುತ್ತದೆ ಎಂದರೆ ಈ ರೀತಿ ಅಭ್ಯಾಸ ಇರುವವರಿಗೆ ಹೆಚ್ಚಾಗಿ ಗ್ಯಾಸ್ಟಿಕ್ ಸಮಸ್ಯೆ ಕಾಡುವುದು. ಜೊತೆಗೆ ಗಿಗ್ರಸಿ ಎಂದು ಕರೆಯುವ ನಡುನೋವು ಹಾಗೂ ನಡುವಿನಿಂದ ಕಾಲ ಬೆರಳು ತನಕ ಜೋಮು ಹಿಡಿಯುವ ಸಮಸ್ಯೆ ಬರುತ್ತದೆ.


ಮಹಿಳೆಯರಿಗಂತು ಗರ್ಭಕೋಶದ ಸಮಸ್ಯೆ ಗ್ಯಾರಂಟಿ ಬರುತ್ತದೆ. ಇದು ಕುಳಿತುಕೊಳ್ಳುವ ಸರಿಯಾದ ಭಂಗಿ ಖಂಡಿತಾ ಅಲ್ಲ. ಮಕ್ಕಳು ಏನಾದರೂ ಈ ರೀತಿ ಮಾಡಿದರೆ ಅವರಿಗೆ ಕುತ್ತಿಗೆ ನೋವು, ಹಾಗೂ ವೃದ್ಧರಿಗೆ ಈ ಅಭ್ಯಾಸ ಇದ್ದರೆ ಮಂಡಿ ನೋವು ಕೂಡ ತಪ್ಪದೆ ಕಾಡುತ್ತದೆ. ಈ ರೀತಿ ಎಚ್ಚರಿಕೆಯನ್ನು ಕರ್ನಾಟಕದ ಖ್ಯಾತ ಆಯುರ್ವೇದಿಕ್ ಮತ್ತು ಮರ್ಮ ಚಿಕಿತ್ಸ ತಜ್ಞರು ಆಗಿರುವ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರೇ ಹೇಳಿದ್ದಾರೆ.

ಆಯುರ್ವೇದಿಕ್ ಎಂದರೆ ಎಲ್ಲರಿಗೂ ತಿಳಿದಿದೆ ಮರ್ಮ ಚಿಕಿತ್ಸೆ ಎನ್ನುವುದು ಏನು ಎಂದು ಎಲ್ಲರ ಕುತೂಹಲ. ಮರ್ಮ ಚಿಕಿತ್ಸೆಯ ಫಲಿತಾಂಶ ಏನು ಎಂದರೆ ಅದನ್ನು ಚಿಕಿತ್ಸೆ ಪಡೆದುಕೊಂಡವರ ಬಳಿಯೇ ಕೇಳಬೇಕು. ಯಾಕೆಂದರೆ ಯಾವುದೇ ಸಮಸ್ಯೆ ಇದ್ದರೂ ಕೂಡ ಚಿಕಿತ್ಸೆ ಪಡೆದ ಕ್ಷಣಗಳಿಗೆಯಲ್ಲಿ ನಿವಾರಣೆ ಮಾಡುವ ಶಕ್ತಿ ಇರುವುದು ಈ ಮರ್ಮ ಚಿಕಿತ್ಸೆಗೆ. ಸೊಂಟ ನೋವು, ಮೊಣಕಾಲು ನೋವು, ಕುತ್ತಿಗೆ ನೋವು, ತಲೆನೋವು, ಹೊಟ್ಟೆ ನೋವು, ಗರ್ಭಕೋಶದ ಸಮಸ್ಯೆ ಆಗಲಿ ಅಲ್ಲೇ ಆ ಕ್ಷಣಕ್ಕೆ ಗುಣಪಡಿಸುವ ಚಿಕಿತ್ಸೆಯೇ ಮರ್ಮ ಚಿಕಿತ್ಸೆ.

ಮರ್ಮಸ್ಥಳಗಳು ಎಂದು ನಮ್ಮ ದೇಹದಲ್ಲಿ 108 ಭಾಗಗಳನ್ನು ಗುರುತಿಸಲಾಗಿದೆ. ಅದರಲ್ಲಿ ದೈಹಿಕ ಮರ್ಮಗಳು 107 ಹಾಗೂ 108ನೆಯ ಮರ್ಮ ಮನಸ್ಸು. ಮಾರಣಯಾಂತಿ ಇತಿ ಮರ್ಮಃ ಎನ್ನುವುದನ್ನು ಶುಶ್ರುತ ಸಮಿತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಯಾವ ಪಾಯಿಂಟ್ಗೆ ಹೊಡೆದರೆ ಮನುಷ್ಯ ಮರಣ ಹೊಂದುತ್ತಾನೋ ಅವುಗಳನ್ನೇ ಮರ್ಮ ಸ್ಥಳಗಳು ಎಂದು ಕರೆಯಲಾಗುತ್ತದೆ.

ಈ ಕರಾಟೆ, ಕುನ್ಫು, ಕಳಾರಿ ಪಟ್ಟು ಇತ್ಯಾದಿ ಕಲೆಗಳೆಲ್ಲ ಈ ಮರ್ಮ ಪಾಯಿಂಟ್ ಗಳ ಅಧಾರದ ಮೇಲೆಯೇ ಸೃಷ್ಟಿ ಆಗಿರುವುದು. ಈ ವಿಷಯದ ಕುರಿತ ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ

Leave a Reply

Your email address will not be published. Required fields are marked *