ಟಾಟಾ ಕಂಪೆನಿ ಮಾರುತಿ ಸುಜುಕಿ ಕಂಪೆನಿಯನ್ನು ಮಾರುಕಟ್ಟೆಯಿಂದಾನೆ ಮಾಯ ಮಾಡಿ ಬಿಡುತ್ತಾ ? ಟಾಟಾ ಮಾಡ್ತಿರೋದೆನು ನೋಡಿ - Karnataka's Best News Portal

ಟಾಟಾ ಕಂಪನಿ ಸದ್ಯದಲ್ಲೇ ಮಾರುತಿ ಸುಜೂಕಿ ಕಂಪನಿಯನ್ನು ಮಾರುಕಟ್ಟೆಯಿಂದಾನೆ ಮಾಯ ಮಾಡಿ ಬಿಡುತ್ತಾ.?
ಸುಮಾರು ವರ್ಷಗಳ ಹಿಂದೆ ಭಾರತದಲ್ಲಿ ಯಾರೇ ಕಾರು ಖರೀದಿಸಲಿ ಅವರಿಗೆ ಶುಭ ಕೋರುವ ಸಂದರ್ಭದಲ್ಲಿ ಒಂದೇ ಮಾತು ಹೇಳಲಾಗುತ್ತಿತ್ತು ಅದುವೇ ಕಂಗ್ರಾಜುಲೇಷನ್ ನಿಮ್ಮ ಹೊಸ ಮಾರುತಿ ಕಾರಿಗಾಗಿ ಎಂದು ಹೌದು ಭಾರತದಲ್ಲಿ ಆ ಕಾಲದಲ್ಲಿ ಕಾರು ಎಂದರೆ ಅದು ಕೇವಲ ಮಾರುತಿ ಎನ್ನುವ ಅರ್ಥ ಇತ್ತು.

ಮಾರುತಿ ಭಾರತದಲ್ಲಿ ಎಷ್ಟು ಜನಪ್ರಿಯವಾಗಿತ್ತು ಎಂದರೆ ಅದರ ಬ್ರಾಂಡ್ ಹೆಸರೇ ಪ್ರಾಡಕ್ಟ್ ಹೆಸರಾಗಿ ಗುರುತಿಸಿಕೊಂಡಿತು ಇನ್ನು ಭಾರತದಲ್ಲಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸುಮಾರು 70% ಮಾರುಕಟ್ಟೆಯನ್ನು ಮಾರುತಿ ಸುಜೂಕಿಯೆ ಆಕ್ರಮಿಸಿಕೊಂಡಿದೆ ಒಂದು ಕಾಲದಲ್ಲಿ ಭಾರತದಲ್ಲಿ ಆಟೋಮೊಬೈಲ್ ಮಾರಿಕಟ್ಟೆಯಲ್ಲಿ 50% ಗಿಂತ ಅಧಿಕ ಭಾಗವನ್ನು ಆಕ್ರಮಿಸಿಕೊಂಡ ಈ ಮಾರುತಿ ಕಂಪನಿಯನ್ನು ಒಂದು ಸ್ವದೇಶಿ ಸಂಸ್ಥೆ ಅಂದರೆ ಭಾರತ ಕಂಪನಿ ಹಿಂದೆ ಹಾಕಲು ಸಿದ್ದವಾಗಿ ನಿಂತಿದೆ.


ಈ ರೇಸ್ ಇದೇ ರೀತಿ ನಡೆಯುತ್ತಿದ್ದರೆ ಇನ್ನೂ ಕೆಲವೇ ವರ್ಷಗಳಲ್ಲಿ ಈ ಭಾರತೀಯ ಕಂಪನಿ ಭಾರತೀಯ ಕಾರ್ ಮಾರುಕಟ್ಟೆಯನ್ನು ಪೂರ್ತಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು ಖಂಡಿತ. ಮಾರುತಿ ಕಾರುಗಳು ಪ್ರಾರಂಭದಿಂದ ಇಲ್ಲಿನವರೆಗೂ ಸಹ ತನ್ನ ಅನೇಕ ಬೇರೆ ಬೇರೆ ಮಾಡೆಲ್ ಕಾರುಗಳನ್ನು ಲಾಂಚ್ ಮಾಡಿತ್ತು. ಈ ಮಾರುತಿ ಕಾರುಗಳು ಎಷ್ಟು ಜನಪ್ರಿಯವಾಗಿತ್ತು ಎಂದರೆ ಕಾರು ಎಂದರೆ ಕೇವಲ ಮಾರುತಿ ಎನ್ನುವಷ್ಟು ಸಫಲತೆಯನ್ನು ಪಡೆದಿತ್ತು.

ಮಾರುತಿ ಸುಜೂಕಿ ದೇಶದಲ್ಲಿ ದೊಡ್ಡ ದೊಡ್ಡ ನಗರಗಳಿಂದ ಹಿಡಿದು ಚಿಕ್ಕಪುಟ್ಟ ಹಳ್ಳಿಯವರೆಗು ಸಹ ತನ್ನ ಛಾಪನ್ನು ಹಾರಡಿಸಿಕೊಂಡಿತ್ತು ಮಾರುತಿ ಸುಜುಕಿ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿತ್ತು ಇವತ್ತಿಗೂ ಕೂಡ ಭಾರತದಲ್ಲಿ ಅನೇಕ ಜನರ ಮೊದಲ ಆಯ್ಕೆ ಮಾರುತಿ ಸುಜುಕಿ. ಇಲ್ಲಿಯವರೆಗೂ ಮಾರುತಿ ಸುಜುಕಿ ಭಾರತದಲ್ಲಿ ಅತಿ ಹೆಚ್ಚಾಗಿ ಕಾರು ಮಾರಾಟ ಮಾಡುವ ಕಂಪನಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇತ್ತೀಚೆಗೆ ಮಾರುತಿ ಸುಜುಕಿ ಮಾರುಕಟ್ಟೆಯಿಂದ ಮಾಯವಾಗುವ ಅಂಚಿನಲ್ಲಿದೆ ಎನ್ನುವ ಒಂದು ಮಾತು ಕೇಳಿ ಬರುತ್ತಿದೆ ಅಂದರೆ ಮಾರುತಿ ಸುಜುಕಿ ಜಾಗವನ್ನು ನಿಧಾನವಾಗಿ ಬೇರೆ ಕಂಪನಿಗಳು ಆಕ್ರಮಣ ಮಾಡಿಕೊಂಡು ಬರುತ್ತಿವೆ ಇದರಲ್ಲಿ ಮೊದಲಿಗೆ ಕೇಳುವ ಹೆಸರು ಭಾರತದ ಸ್ವದೇಶಿ ಬ್ರಾಂಡ್ ಅದ ಟಾಟಾ ಕಂಪನಿ.

ಇತ್ತೀಚಿನ ದಿನಗಳಲ್ಲಿ ಮಾರುತಿ ಸುಜುಕಿ ತನ್ನ ಕಾರುಗಳ ಸೇಲ್ಸ್ ವಿಚಾರದಲ್ಲಿ ಬಹಳ ಇಳಿಮುಖ ಕಾಣುತ್ತಿದೆ ಇನ್ನೊಂದು ಕಡೆ ನೋಡುವುದಾದರೆ ಟಾಟಾ ಮೋಟಾರ್ಸ್ ಕಂಪನಿ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಟಾಟಾ ಮೋಟಾರ್ಸ್ ಮಾರುತಿ ಸುಜುಕಿಯನ್ನು ಹಿಂದಿಕ್ಕಿ ಕಾರು ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುವ ದಿನ ದೂರ ಇಲ್ಲ ಎಂದು ಎಕ್ಸ್ಪರ್ಟ್ ಗಳು ತಿಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *