ಕೊಬ್ಬರಿ ಎಣ್ಣೆಯ ಜೊತೆಗೆ ಇದನ್ನು ಸೇರಿಸಿ ವಾರಕ್ಕೆ ಒಂದು ಬಾರಿ ಹಚ್ಚಿ ಕೂದಲು ದಟ್ಟವಾಗಿ ಕಪ್ಪಾಗುತ್ತದೆ..ಅದ್ಬುತ ಮನೆಮದ್ದು - Karnataka's Best News Portal

ಕೊಬ್ಬರಿ ಎಣ್ಣೆಯ ಜೊತೆಗೆ ಇದನ್ನು ಸೇರಿಸಿ ವಾರಕ್ಕೆ ಒಂದು ಬಾರಿ ಹಚ್ಚಿ ಕೂದಲು ದಟ್ಟವಾಗಿ ಕಪ್ಪಾಗುತ್ತದೆ ಉದರಿದ ಕೂದಲು 100% ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಸಹ ಕೂದಲು ಉದುರುವ ಸಮಸ್ಯೆ ಹಾಗೆಯೇ ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆ ಕಂಡು ಬರುತ್ತದೆ ಗಂಡಸರಿಗೆ ಬೇಗ ಕೂದಲು ಉದರಿ ಬೊಕ್ಕ ತಲೆಯಾಗುತ್ತದೆ ನಾವಿಲ್ಲಿ ತಿಳಿಸುವಂತಹ ಒಂದು ಮನೆಮದ್ದನ್ನು ಬಳಸಿದ್ದೆ ಆದಲ್ಲಿ ಕೂದಲು ದಟ್ಟವಾಗಿ ಬೆಳೆಯುತ್ತದೆ.

ಈ ಒಂದು ಮನೆ ಮದ್ದನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಪದಾರ್ಥ ದಾಸವಾಳದ ಹೂವುಗಳು, ದಾಸವಾಳದ ಹೂಗಳು ಅಥವಾ ದಾಸವಾಳದ ಎಲೆಗಳು ಆರೋಗ್ಯಕ್ಕೆ ಹಾಗೂ ನಮ್ಮ ಕೂದಲಿಗೂ ಸಹ ತುಂಬಾ ಒಳ್ಳೆಯದು ಈ ದಾಸವಾಳದ ಹೂವು ನಮಗೆ ವಿಪರೀತವಾದ ಕೂದಲು ಉದುರುತ್ತಿದ್ದರೆ ಅದನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಇದು ಕೂದಲು ಬೆಳೆಯಲು ತುಂಬಾ ಉಪಯುಕ್ತ ಕಾರಿ.


ಐದರಿಂದ ಆರು ದಾಸವಾಳದ ಹೂವುಗಳನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ, ನಂತರ ದಾಸವಾಳದ ಎಲೆಗಳನ್ನು ಸಹ ಚೆನ್ನಾಗಿ ನೀರಿನಲ್ಲಿ ತೊಳೆದುಕೊಂಡು ಅದನ್ನು ಸಹ ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ, ಪೇಸ್ಟ್ ಮಾಡಿಕೊಂಡಿರುವಂತಹ ದಾಸವಾಳದ ಹೂವು ಮತ್ತು ದಾಸವಾಳದ ಎಲೆಯನ್ನು ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಅದೇ ಬೌಲ್ ಗೆ ಒಂದು ಟೇಬಲ್ ಸ್ಪೂನ್ ನಷ್ಟು ಹರಳೆಣ್ಣೆ, ಎರಡು ಟೇಬಲ್ ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿಕೊಂಡಿರುವಂತಹ ಈ ಒಂದು ಮಿಶ್ರಣವನ್ನು ನಮ್ಮ ಕೂದಲಿನ ಬುಡಕ್ಕೆ ಹಾಗೆಯೇ ಪೂರ್ತಿ ಕೂದಲಿಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಬೇಕು ಇದರಿಂದ ಕೂದಲು ಡ್ಯಾಮೇಜ್ ಆಗುವುದನ್ನು ಕೂದಲು ಕವಲಾಗುವುದನ್ನು ತಡೆಗಟ್ಟುತ್ತದೆ.

ಅಷ್ಟೇ ಅಲ್ಲದೆ ಇದರಿಂದ ಕೂದಲು ಸಾಫ್ಟ್ ಆಗುತ್ತದೆ ಇದರಲ್ಲಿ ದಾಸವಾಳದ ಹೂ ಮತ್ತು ದಾಸವಾಳದ ಎಲೆ, ಕೊಬ್ಬರಿ ಎಣ್ಣೆ ಹಾಗೂ ಹರಳೆಣ್ಣೆ ಬಳಸಿರುವುದರಿಂದ ನಮ್ಮ ಕೂದಲಿನ ಬೆಳವಣಿಗೆ ತುಂಬಾ ಸಹಕಾರಿಯಾಗುತ್ತದೆ. ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ ಇದನ್ನು ನಮ್ಮ ತಲೆಗೆ ಹಚ್ಚಿಕೊಂಡ ನಂತರ ಒಂದು ಗಂಟೆಯ ನಂತರ ನೀವು ವಾಶ್ ಮಾಡಿಕೊಳ್ಳಬೇಕು.

ಈ ಒಂದು ಪ್ಯಾಕ್ ಅನ್ನು ಹಾಕಿಕೊಳ್ಳಬೇಕಾದರೆ ನಿಮ್ಮ ತಲೆಯ ಬುಡ ಕ್ಲೀನ್ ಆಗಿ ಇರಬೇಕು ಅಂದರೆ ಸ್ನಾನ ಮಾಡಿದ ನಂತರ ನಿಮ್ಮ ಕೂದಲು ಕ್ಲೀನ್ ಇರುವಂತಹ ಸಂದರ್ಭದಲ್ಲಿ ಈ ಒಂದು ಪೇಸ್ಟನ್ನು ಅಪ್ಲೈ ಮಾಡಬೇಕು ಇದರಿಂದ ನಿಮಗೆ ಒಳ್ಳೆಯ ರಿಸಲ್ಟ್ ಸಿಗುತ್ತದೆ ವಾರದಲ್ಲಿ ಒಂದು ಬಾರಿ ಈ ಒಂದು ಪ್ಯಾಕ್ ಅನ್ನು ಹಾಕಿಕೊಂಡರೆ ನಿಮಗೆ ಉತ್ತಮ ರಿಸಲ್ಟ್ ಸಿಗುತ್ತದೆ.

Leave a Reply

Your email address will not be published. Required fields are marked *