ಕಣ್ಣಿನ ದೃಷ್ಟಿ ಸಮಸ್ಯೆ ತಡೆಯಲು ನೆಲ್ಲಿಕಾಯಿ ಪುಡಿಯಲ್ಲಿ ಇದನ್ನು ಬೆರೆಸಿ ಸೇವಿಸಿ protect and maintain eyesight naturally - Karnataka's Best News Portal

ಕಣ್ಣಿನ ಸಮಸ್ಯೆ ತಡೆಯಲು ನೆಲ್ಲಿಕಾಯಿ ಪುಡಿಯಲ್ಲಿ ಇದನ್ನು ಬೆರೆಸಿ ಸೇವಿಸಿ.ನಮ್ಮ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ನಮ್ಮ ಕಣ್ಣುಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ ಆದರೆ ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕಣ್ಣಿನ ದೃಷ್ಟಿ ದುರ್ಬಲತೆ ಸಹ ಒಂದು. ಇದು ವಯಸ್ಸಿನ ಭೇದವಿಲ್ಲದೆ ತುಂಬಾ ಜನರಿಗೆ ತೊಂದರೆ ಕೊಡುತ್ತಿದೆ ಇದರಿಂದ ಕನ್ನಡಕ ಬಳಸುವವರ ಸಂಖ್ಯೆ ಹೆಚ್ಚುತ್ತದೆ.

ಪೋಷಕಾಂಶ ಆಹಾರದ ಕೊರತೆ ಹೆಚ್ಚಾಗಿ ಮೊಬೈಲ್, ಲ್ಯಾಪ್ಟಾಪ್ ಬಳಸುವುದು ಮತ್ತು ಟಿವಿಯನ್ನು ನೋಡುವುದು ಹೆಚ್ಚಿನ ಮಾನಸಿಕ ಒತ್ತಡ ಈ ಎಲ್ಲಾ ಕಾರಣಗಳಿಂದ ಕಣ್ಣುಗಳು ದುರ್ಬಲತೆಗೆ ಒಳಗಾಗುವ ಸನ್ನಿವೇಶಗಳು ಹೆಚ್ಚು. ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುವುದನ್ನು ನೋಡುವುದಾದರೆ ಮೊದಲಿಗೆ ಬಾದಾಮಿ, ಸೋಂಪು, ಕಲ್ಲು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಬಾದಾಮಿ ಸೋಂಪನ್ನು ಬೇರೆ ಬೇರೆಯಾಗಿ ಸಿಮ್ ನಲ್ಲಿ ಉರಿದು ಇಟ್ಟುಕೊಳ್ಳಬೇಕು


ನಂತರ ಮೂರನ್ನು ಬೆರೆಸಿ ಪುಡಿ ಮಾಡಿಕೊಳ್ಳಬೇಕು ಇದನ್ನು ಏರ್ ಟೈಟ್ ಡಬ್ಬದಲ್ಲಿ ಶೇಖರಣೆ ಮಾಡಬೇಕು. ಮಕ್ಕಳಾದರೆ ಈ ಪುಡಿಯನ್ನು ಒಂದು ಟೇಬಲ್ ಸ್ಪೂನ್ ನಷ್ಟು ಬಳಸಬೇಕು ಅದೇ ಹಿರಿಯರಾದರೆ ಈ ಪುಡಿಯನ್ನು ಎರಡು ಟೇಬಲ್ ಸ್ಪೂನ್ ಅಷ್ಟು ಬಳಸಬೇಕಾಗುತ್ತದೆ ಇದನ್ನು ಮೂರು ತಿಂಗಳ ಕಾಲ ತಪ್ಪದೇ ಉಪಯೋಗಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮ ಆಗುತ್ತದೆ.

ಹಾಗೆ ಇದನ್ನು ಆರು ತಿಂಗಳ ಕಾಲ ಉಪಯೋಗಿಸಿದರೆ ಕನ್ನಡಕ ಉಪಯೋಗಿಸುವ ಅಗತ್ಯವೂ ಬರುವುದಿಲ್ಲ ಈ ಪುಡಿಯನ್ನು ಉಪಯೋಗಿಸುವುದರಿಂದ ಕೇವಲ ಕಣ್ಣಿನ ದೃಷ್ಟಿ ಮಾತ್ರ ಉತ್ತಮಗೊಳ್ಳದೆ ಮೂಳೆಗಳು, ಸ್ನಾಯುಗಳು ಸಹ ಬಲವಾಗುತ್ತವೆ. ನೆಲ್ಲಿಕಾಯಿ ಪುಡಿಯನ್ನು ತೆಗೆದುಕೊಂಡು ಇದಕ್ಕೆ ಜೇನುತುಪ್ಪವನ್ನು ಬೆರೆಸಿ ರಾತ್ರಿ ಮಲಗುವ ಸಮಯದಲ್ಲಿ ಒಂದು ಸ್ಪೂನ್ ನಷ್ಟು ಸೇವಿಸಬೇಕು ಹೀಗೆ ಸೇವಿಸುವುದರಿಂದ ಕಣ್ಣಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಇದರಿಂದ ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ.

ಹಸಿರು ತರಕಾರಿ, ಸೊಪ್ಪು, ಕ್ಯಾರೆಟ್, ಕ್ಯಾಬೇಜ್, ಬೀಟರೂಟ್, ನಿಂಬೆರಸ, ಬ್ರೋಕೋಲಿ, ಮೀನು ಈ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಸಹ ಕಣ್ಣಿನ ದೃಷ್ಟಿ ಉತ್ತಮ ವಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ಸೂರ್ಯನ ಕಿರಣಗಳು ಕಣ್ಣಿನ ಮೇಲೆ ಬೀಳುವಂತೆ ನೋಡಿಕೊಳ್ಳುವುದು ಹಾಗೆಯೆ ಸುಲಭವಾಗಿ ಕಣ್ಣಿನ ವ್ಯಾಯಾಮಗಳನ್ನು ಮಾಡುವುದು.

ಕಣ್ಣಿಗೆ ವಿಶ್ರಾಂತಿ ನೀಡುವುದು ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಸಹ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು. ಮೇಲೆ ತಿಳಿಸಿದಂತಹ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರ ಜೊತೆಗೆ ಉತ್ತಮವಾದಂತಹ ನಿದ್ರೆಯು ಸಹ ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಅವಶ್ಯಕ ನಾವು ಚೆನ್ನಾಗಿ ನಿದ್ರೆ ಮಾಡಿದರೆ ನಮ್ಮ ಕಣ್ಣಿನ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ಒಬ್ಬ ಮನುಷ್ಯನು ಸುಮಾರು ಆರು ಗಂಟೆಗಳ ಕಾಲ ನಿದ್ರೆಯನ್ನು ಮಾಡಬೇಕು.

Leave a Reply

Your email address will not be published. Required fields are marked *