2022 ರಲ್ಲಿ ವಿವಾದಗಳ ಮೂಲಕ ಸುದ್ದಿಯಾದ ಸೀರಿಯಲ್ ಕಲಾವಿದರು ಇವರೆ ನೋಡಿ... - Karnataka's Best News Portal

2022 ರಲ್ಲಿ ವಿವಾದಗಳ ಮೂಲಕ ಸುದ್ದಿಯಾದ ಸೀರಿಯಲ್ ಕಲಾವಿದರು||ಸಿನಿಮಾ ಮತ್ತು ಸೀರಿಯಲ್ ನ ಸೆಲೆಬ್ರಿಟಿಗಳು ಯಾವಾಗಲೂ ಸುದ್ದಿಯಲ್ಲಿ ಇರುವುದು ಸರ್ವೇಸಾಮಾನ್ಯ ಅದು ಒಳ್ಳೆಯ ಸುದ್ದಿ ಆಗಿರಲಿ ಅಥವಾ ಅದು ಕೆಟ್ಟ ಸುದ್ದಿ ಆಗಿರಲಿ 2022 ರಲ್ಲಿ ಕೆಲವೊಂದಷ್ಟು ಸೀರಿಯಲ್ ನ ಸೆಲೆಬ್ರಿಟಿಗಳು ಕಾಂಟ್ರವರ್ಸಿಗಳ ಮೂಲಕ ಹೆಚ್ಚು ಸುದ್ದಿಯಾಗಿದ್ದು ಅಂಥವರ ಕೆಲವೊಂದಷ್ಟು ವಿಷಯಗಳನ್ನು ಈ ದಿನ ತಿಳಿದುಕೊಳ್ಳೋಣ.

ಚಂದನ್ ಕುಮಾರ್ ಸಿನಿಮಾ ಮತ್ತು ಸೀರಿಯಲ್ ಇವೆರಡರಲ್ಲೂ ಕೂಡ ಗುರುತಿಸಿಕೊಂಡಂತಹ ಚಂದನ್ ಕುಮಾರ್ ಅವರು ತೆಲುಗು ಭಾಷೆಯ ಸೀರಿಯಲ್ ಶ್ರೀಮತಿ ಶ್ರೀನಿವಾಸ್ ಸೀರಿಯಲ್ ಶೂಟಿಂಗ್ ಗಾಗಿ ಹೈದರಾಬಾದ್ ಗೆ ತೆರಳಿದ್ದರು ಸೀರಿಯಲ್ ಚಿತ್ರೀಕರಣದ ಸಮಯದಲ್ಲಿ ಚಂದನ್ ಮತ್ತು ಟೆಕ್ನಿಷಿಯನ್ಸ್ ಗಳ ನಡುವೆ ಸಣ್ಣ ಮನಸ್ತಾಪ ಉಂಟಾಗಿ ಸೀರಿಯಲ್ ನ ಟೆಕ್ನಿಷಿಯನ್ಸ್ ಗಳು ಚಂದನ್ ಅವರ ಮೇಲೆ ಕಪಾಳ ಮೋಕ್ಷ ಮಾಡಿ.


ಹಲ್ಲೆ ನಡೆಸಿದ್ದರು ತದನಂತರ ಈ ವಿಷಯದ ಬಗ್ಗೆ ಚಂದನ್ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದು ಚಂದನ್ ಅವರ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದರು ರಾತ್ರಿ ಇಡೀ ನಿದ್ದೆ ಇಲ್ಲದೆ ಅರ್ಧ ಗಂಟೆ ಸಮಯ ತೆಗೆದುಕೊಂಡು ನಿದ್ದೆ ಮಾಡಿದ್ದೆ ಇದನ್ನೇ ಉದ್ದೇಶವಾಗಿಟ್ಟುಕೊಂಡು ಹಲ್ಲೇ ಮಾಡಿದ್ದಾರೆ ಎಂದು ಚಂದನ್ ಅವರು ತಿಳಿಸಿದರು ಯಾವುದೇ ಕಲಾವಿದನಿಗೆ.

ಗೌರವ ಕೊಡುವುದು ಮುಖ್ಯ ಅಂತಹದ್ದರಲ್ಲಿ ಚಂದನ್ ಅವರಿಗೆ ಈ ರೀತಿ ಅವಮಾನ ಮಾಡಿದ್ದು ವಿವಾದವನ್ನು ಸೃಷ್ಟಿಸಿತ್ತು. ದಿವ್ಯ ಶ್ರೀಧರ್ ಆಕಾಶ ದೀಪ ಧಾರವಾಹಿ ಮೂಲಕ ಖ್ಯಾತಿಯನ್ನು ಗಳಿಸಿದ ನಟಿ ದಿವ್ಯಶ್ರೀಧರ್ ಅವರು ಕೆಲವೊಂದು ಕನ್ನಡ ಸಿನಿಮಾಗಳಲ್ಲೂ ಕೂಡ ಅಭಿನಯಿಸಿದ್ದಾರೆ ಯುವ ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ಫೇಮ್ ಗಳಿಸಿಕೊಳ್ಳುತ್ತಿರುವಂತಹ ಸಂದರ್ಭದಲ್ಲಿ ಇವರಿಗೆ ತಮಿಳು ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಗುತ್ತದೆ.

ಆಗ ಅದೇ ಸೀರಿಯಲ್ ನಲ್ಲಿ ನಟಿಸುತ್ತಿದ್ದಂತಹ ನಟ ಅಮ್ಜದ್ ಖಾನ್ ಅವರನ್ನು ದಿವ್ಯ ಅವರು ಪ್ರೀತಿಸಿ ಮದುವೆಯಾಗುತ್ತಾರೆ ಮದುವೆಯ ನಂತರ ದಿವ್ಯ ಅವರು ಈಗ ಅಮ್ಜದ್ ಖಾನ್ ಅವರು ದೈಹಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನಟಿ ಲವ್ ಜಿಹಾದ್ ಗೆ ಬಲಿಯಾದರ ಎಂಬ ಅನುಮಾನ ಮೂಡುವಂತೆ ಮಾಡಿದ್ದು ಕಾಂಟ್ರವರ್ಸಿಯನ್ನು ಸೃಷ್ಟಿಸಿತ್ತು.

ವೈಷ್ಣವಿ ಗೌಡ ಅಗ್ನಿಸಾಕ್ಷಿ ಧಾರಾವಾಹಿಯ ಮುಖಾಂತರ ಪ್ರಖ್ಯಾತಿಯನ್ನು ಗಳಿಸಿದಂತಹ ವೈಷ್ಣವಿ ಗೌಡ ಅವರು ಮದುವೆಯಾಗುತ್ತಿದ್ದಾರೆ ಎಂದು ವೈಷ್ಣವಿ ಹಾಗು ವಿದ್ಯಾಭರಣ ಅವರ ಕೆಲವೊಂದಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದನ್ನು ಮಾಡಿದ್ದವು ಇದಕ್ಕೆ ಪ್ರತಿಕ್ರಿಯಿಸಿದಂತಹ ವೈಷ್ಣವಿ ಗೌಡ ಅವರು ಇದು ಕೇವಲ ಮಾತುಕತೆ ಯಷ್ಟೇ ನಾನಿನ್ನು ಮದುವೆಗೆ ಒಪ್ಪಿಗೆ ಅನುಸೂಚಿಸಿಲ್ಲ ಎಂದು ಹೇಳುವಷ್ಟರಲ್ಲಿ ನಟ ವಿದ್ಯಾಭರಣ್ ಅವರ ಇಲ್ಲಸಲ್ಲದ ಕೆಲವೊಂದಷ್ಟು ಫೋಟೋಗಳು ಹೊರ ಬಂದಿದ್ದವು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *