ಶ್ರೀಮಂತರಿಗೆ ಮನೆ ಬಾಗಿಲಿಗೆ ಬ್ಯಾಂಕ್ ಸಾಲ ಬಡವರಿಗೆ ಬೂಟಿನ ಏಟು ನೀವು ಲೋನ್ ತೆಗೆದುಕೊಂಡಿದ್ದೀರಾ ಹಾಗಾದರೆ ಇಲ್ಲಿ ನೋಡಿ - Karnataka's Best News Portal

ಶ್ರೀಮಂತರಿಗೆ ಮನೆ ಬಾಗಿಲಿಗೆ ಬ್ಯಾಂಕ್ ಸಾಲ ಬಡವರಿಗೆ ಬೂಟಿನ ಏಟು ನೀವು ಲೋನ್ ತೆಗೆದುಕೊಂಡಿದ್ದೀರಾ ಹಾಗಾದರೆ ಇಲ್ಲಿ ನೋಡಿ

ಒಂದು ತಿಂಗಳ ಇಎಂಐ ಕಟ್ಟಲಿಲ್ಲ ಅಂದ್ರೆ ನಿಮ್ಮ ಜನ್ಮ ಜಾಲಾಡುವ ಬ್ಯಾಂಕ್ ಗಳ ಹಣೆಬರಹ ಇಲ್ಲಿದೆ ನೋಡಿ!
ಸುಮಾರು ನೀವು 5 ಲಕ್ಷ ಅಥವಾ 10 ಲಕ್ಷವನ್ನು ಪಡೆಯಬೇಕೆಂದು ಲೋನ್ ಗೆ ಅರ್ಜಿಯನ್ನು ಹಾಕಬೇಕಾದರೆ ಯಾವುದಾದರೂ ಒಂದು ರಾಷ್ಟ್ರೀಕೃತ ಬ್ಯಾಂಕ್ ಗೆ ಹೋಗಿ ನೋಡಿ ಅಲ್ಲಿನ ಸಿಬ್ಬಂದಿ ನಿಮ್ಮ ಜೊತೆ ಯಾವ ರೀತಿ ವ್ಯವಹಾರವನ್ನು ಮಾಡುತ್ತಾರೆ ಎನ್ನುವುದನ್ನು ಗಮನಿಸಿ.

ನಿಮ್ಮ ಬಳಿ ಇರುವ ಎಲ್ಲ ದಾಖಲಾತಿಗಳು ಸರಿ ಇದ್ದರೂ ಕೂಡ ಒಂದಲ್ಲ ಒಂದು ಖ್ಯಾತೆಯನ್ನು ತೆಗೆದು ಲೋನ್ ಕೊಡುವುದಕ್ಕೆ ನಿರಾಕರಿಸುತ್ತಾರೆ. ಒಂದು ರೀತಿ ಕಾಡಿಸಿ ಬೇಡಿಸಿ ಸತಾಯಿಸಿ ಅಂತೂ ಇಂತೂ ಕೊನೆಗೆ ಲೋನ್ ಕೊಟ್ಟರು ಕೂಡ ಅದರ ಒಂದೇ ಒಂದು ಇಎಂಐ ಕಂತು ಕಟ್ಟದೆ ಹೋದಲ್ಲಿ ನಿಮ್ಮ ಮನೆಯ ಹತ್ತಿರ ಬಂದು ನಿಮ್ಮ ಮಾನವನ್ನು ಹರಾಜು ಮಾಡುವ ಕೆಲಸ ಮಾಡುತ್ತಾರೆ.


ಒಂದೇ ಒಂದು ಕಂತನ್ನು ಕಟ್ಟದೆ ಹೋದಲ್ಲಿ ಬಡ ಗ್ರಾಹಕರ ಮನೆ ಮುಂದೆ ನಿಂತು ಜಗಳ ಆಡುತ್ತಾರೆ ಇಂತಹ ಈ ಬ್ಯಾಂಕ್ ಗಳು ಕೋಟಿಗಟ್ಟಲೆ ವ್ಯವಹಾರವನ್ನು ನಡೆಸುವಂತಹ ಉದ್ಯಮಿಗಳಿಗೆ ಅವರು ಕೇಳಿದಷ್ಟು ಹಣವನ್ನು ಸಾಲವಾಗಿ ಕೊಡುತ್ತಾರೆ. ಧನಿಕರ ಸೇವೆಯೇ ತಮ್ಮ ಪರಮೋಚ್ಚ ಧ್ಯೇಯ ಎನ್ನುವ ಹಾಗೆ ಅವರ ಗುಲಾಮರಂತೆ ವರ್ತಿಸುವ ಈ ಬ್ಯಾಂಕ್ ಗಳಿಗೆ.

ಈ ಧನಿಕರು ಹಲವಾರು ಸಾವಿರಾರು ಕೋಟಿಯ ನಾಮವನ್ನು ಹಾಕಿ ಹೊರಟೆ ಹೋಗಿದ್ದಾರೆ ಇವತ್ತು ನೀರವ್ ಮೋದಿ, ವಿಜಯ್ ಮಲ್ಯ ತರದ ಉದ್ಯಮಿಗಳು ಅನೇಕಾರು ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ವಂಚನೆಯನ್ನು ಮಾಡಿ ವಿದೇಶಗಳಲ್ಲಿ ಇವತ್ತು ಆರಾಮಾಗಿ ಜೀವನ ನಡೆಸುತ್ತಿದ್ದಾರೆ. ಸಾಮಾನ್ಯರ ಮೇಲೆ ಇಷ್ಟೆಲ್ಲ ರೂಲ್ಸ್ ಹೇರಿ ದರ್ಪವನ್ನು ತೋರುವoತಹ ಈ ಬ್ಯಾಂಕ್ ಗಳು.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ತಮ್ಮನ್ನು ದಿವಾಳಿ ಎಬ್ಬಿಸಿ ಹೋದವರ ಬಗ್ಗೆ ಯಾವುದೇ ಕಠಿಣ ಕ್ರಮವನ್ನು ತೆಗೆದುಕೊಳ್ಳದೆ ಸುಮ್ಮನೆ ಕುಳಿತಿವೆ ಅವರೆಲ್ಲ ಲೂಟಿ ಮಾಡಿ ಹೋಗಿರುವುದು ಯಾರದ್ದೋ ಕಂಡವರ ಹಣ ಅಲ್ಲ ಅದು ನಮ್ಮ ನಿಮ್ಮೆಲ್ಲರ ತೆರಿಗೆ ಹಣ ನಾವೆಲ್ಲ ಇವತ್ತು ಸಿನಿಮಾಗಳ ಭರಾಟೆಯಲ್ಲಿ ಫ್ಯಾನ್ ವಾರ್ ಗಳ ಗಲಾಟೆಯಲ್ಲಿ ಹಾಗೂ ಈ ರಾಜಕೀಯ ನಾಯಕರುಗಳು ತಮ್ಮ ತಮ್ಮ ಪಕ್ಷವನ್ನು.

ನೆಲೆ ನಿಲ್ಲಿಸುವ ತವಕದಲ್ಲಿ ಇದ್ದರೆ ಕನಿಷ್ಠ ಇಷ್ಟು ದೊಡ್ಡ ಹಗರಣಗಳ ಬಗ್ಗೆ ನಮ್ಮ ಸಂಸತ್ ನಲ್ಲಿ ಈವರೆಗೂ ಸೂಕ್ತ ಚರ್ಚೆ ನಡೆಯುತ್ತಿಲ್ಲ ಯಾಕೆ. ಭಾರತೀಯ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಹಣವನ್ನು ದೋಚಿ ಪರಾರಿಯಾಗಿ ಇವತ್ತು ದುಬೈ ಲಂಡನ್ ಮುಂತಾದ ಕಡೆ ನೆಲೆಗೊಂಡಂತಹ ಧನಿಕರು ನೂರಾರು ಜನ ಇದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]