ಮಕರ ರಾಶಿ ಶನಿ ಗೋಚಾರ ಫಲ 2023 ಸಾಡೇಸಾತಿ ಕೊನೆಯ ಹಂತ ಕಳೆದುಕೊಂಡ ಎಲ್ಲವೂ ಮರಳಿ ಪಡೆಯುವ ಯೋಗ ಸಿಗಲಿದೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಕರ ರಾಶಿ ಶನಿ ಗೋಚಾರ ಫಲ 2023//
ಕಳೆದ ಐದು ವರ್ಷಗಳಿಂದ ಹೆಚ್ಚು ಕಷ್ಟಗಳನ್ನು ತೊಂದರೆಗಳನ್ನು ನಷ್ಟಗಳನ್ನು ಅನುಭವಿಸಿದಂತಹ ರಾಶಿ ಯಾವುದು ಎಂದರೆ ಅದು ಮಕರ ರಾಶಿ ಅದು ಯಾಕೆ ಎಂದರೆ ಕಳೆದ ಐದು ವರ್ಷಗಳಿಂದ ನಿಮಗೆ ಸಾಡೇಸಾತಿ ನಡೆಯುತ್ತಿತ್ತು ಆದರೆ ಈಗ ಅದು ಕೊನೆಯ ಹಂತಕ್ಕೆ ಬಂದಿದೆ ಅಂದರೆ ಧನ ಸ್ಥಾನಕ್ಕೆ ಕುಂಭ ರಾಶಿ ರಾಶಿ ಪ್ರವೇಶವನ್ನು ಮಾಡುತ್ತಿದ್ದಾರೆ.

ಅದರಲ್ಲೂ ಶನಿ ಮೂಲ ತ್ರಿಕೋನ ರಾಶಿಯಲ್ಲಿ ಒಳ್ಳೆಯ ಫಲವನ್ನು ಕೊಡುತ್ತಾರೆ ಹಾಗೆಯೇ ಶನಿ ನಿಮ್ಮ ರಾಶಿಯನ್ನು ಬಿಟ್ಟು ಹೋಗಬೇಕಾದರೆ ಶನಿ ನಿಮಗೆ ಏನನ್ನಾದರೂ ಕೊಟ್ಟು ಹೋಗುತ್ತಾನೆ ಎನ್ನುವಂತಹ ವಾಡಿಕೆ ಇದೆ ಅದರಂತೆ ಹಂತ ಹಂತವಾಗಿ ನೀವು ನಿಮ್ಮ ವ್ಯಾಪಾರ ವ್ಯವಹಾರಗಳನ್ನಾಗಿರಬಹುದು ನಿಮ್ಮ ಕೆಲಸ ಕಾರ್ಯಗಳನ್ನು ಮಾಡುವಂತಹ ಕಾರ್ಯಕ್ಷೇತ್ರಗಳಲ್ಲಾಗಿರಬಹುದು ಅವೆಲ್ಲದರಲ್ಲಿಯೂ ಕೂಡ ಅಭಿವೃದ್ಧಿಯನ್ನು ಹೊಂದುತ್ತೀರಿ.


ಹಾಗಾದರೆ ಹೇಗೆ ಎಂದು ಈ ಕೆಳಗಿನಂತೆ ತಿಳಿಯೋಣ ಅದರಲ್ಲೂ ಧನ ಸ್ಥಾನಕ್ಕೆ ಶನಿ ಬಂದಾಗ ಕಳೆದ ಐದು ವರ್ಷಗಳಿಂದ ಅನುಭವಿಸಿದಂತಹ ಹಣಕಾಸಿನ ತೊಂದರೆಗಳಲ್ಲಾಗಿರಬಹುದು ಹಾಗೂ ಆ ಸಮಯದ ಲ್ಲಿ ತೆಗೆದುಕೊಂಡಂತಹ ತಪ್ಪು ನಿರ್ಧಾರಗಳಾಗಿರ ಬಹುದು ಅವೆಲ್ಲವನ್ನು ಕೂಡ ಸರಿಪಡಿಸಿಕೊಳ್ಳುವಂಥ ಒಳ್ಳೆಯ ಶುಭ ಸಮಯವನ್ನು ಕೊಡುತ್ತಾನೆ ಜೊತೆಗೆ ಮೇಲೆ ಹೇಳಿದಂತೆ ಹಣಕಾಸಿನ ವಿಚಾರದಲ್ಲಿ ಹಂತ ಹಂತವಾಗಿ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತೀರಿ.

ಹಾಗೆಯೇ ಕುಟುಂಬದಲ್ಲಿ ಇದ್ದಂತಹ ಕಿರಿಕಿರಿ ಹಾಗೂ ಕುಟುಂಬದ ನಡುವೆ ಇದ್ದಂತಹ ಅಸಮಾಧಾನತೆ ಎಲ್ಲವೂ ಕೂಡ ಸರಿಯಾಗುತ್ತಾ ಬರುತ್ತದೆ. ಹಾಗೆಯೇ ಶನಿಯ ಪ್ರಭಾವದಿಂದ ನಿಮಗೆ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ತಿಳಿಸಿಕೊಡುತ್ತಾ ಹೋಗುತ್ತಾನೆ. ಅದರಲ್ಲೂ ಉಪನ್ಯಾಸ ವೃತ್ತಿಯಲ್ಲಿರು ವವರು ಜೊತೆಗೆ ಮಾತುಕತೆಯಿಂದ ಯಾರೆಲ್ಲಾ ಕೆಲಸವನ್ನು ಮಾಡುತ್ತಿರುತ್ತೀರೋ ಅಂದರೆ ರೇಡಿಯೋ ಮಾಧ್ಯಮಗಳಲ್ಲಿ ಕೆಲಸ ಮಾಡುವಂಥವರು ಇವರೆಲ್ಲರಿಗೂ ಕೂಡ ಉತ್ತಮವಾದಂತಹ ಕೆಲಸ ಸಿಗುವಂತಹ ಒಳ್ಳೆಯ ಸಮಯವಾಗಿರುತ್ತದೆ ಜೊತೆಗೆ.

ನಿಮಗೆ ವೇತನವು ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಶನಿಯ ಮೂರನೇ ಭಾವದ ದೃಷ್ಟಿಯು ಚತುರ್ಥ ಭಾವದಲ್ಲಿ ಬೀಳುತ್ತಿರುವುದರಿಂದ ನಿಮ್ಮ ತಾಯಿಯ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡುವುದು ಮುಖ್ಯ, ಹಾಗೂ ನಿಮ್ಮ ಬಳಿ ಇರುವಂತಹ ವಾಹನಗಳನ್ನು ಸರಿಯಾದ ಕ್ರಮದಲ್ಲಿ ಇಟ್ಟುಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ಅವುಗಳು ಹಾಳಾಗುವ ಸಾಧ್ಯತೆ ಇರುತ್ತದೆ.

ಜೊತೆಗೆ ನಿಮ್ಮ ಮನೆಯಲ್ಲಿರುವಂತಹ ಕೆಲವೊಂದಷ್ಟು ಉಪಕರಣಗಳು ಹಾಳಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಅವೆಲ್ಲವುಗಳನ್ನು ಕೂಡ ಸರಿಪಡಿಸಿಕೊಳ್ಳು ವುದರ ಮುಖಾಂತರ ಜೀವನವನ್ನು ಮುಂದೆ ನಡೆಸಿಕೊಂಡು ಹೋಗುವುದು ಮುಖ್ಯ. ಜೊತೆಗೆ ಮಕರ ರಾಶಿಯವರು ಹಿಂದಿನ ಐದು ವರ್ಷಗಳಲ್ಲಿ ಅನುಭವಿಸಿದಂತಹ ಎಲ್ಲಾ ಕಷ್ಟವನ್ನು ಕೂಡ ಈ ಒಂದು ಸಮಯದಲ್ಲಿ ಕಳೆದುಕೊಳ್ಳುತ್ತಿರುವುದರಿಂದ ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ಶಾಂತತೆ ಎನ್ನುವುದು ಹೆಚ್ಚಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *