2023 ಶನಿ ಮಹಾತ್ಮನ ಬದಲಾವಣೆ ಯಾವ ರಾಶಿಗೆ ರಾಜಯೋಗ ಯಾರಿಗೆ ಸಾಡೇಸಾತಿ ಇದೆ ನೋಡಿ.ನಿಮ್ಮ ರಾಶಿಯ ಅದೃಷ್ಟ ನೋಡಿ - Karnataka's Best News Portal

2023 ಶನಿ ಮಹಾತ್ಮನ ಬದಲಾವಣೆ ಯಾವ ರಾಶಿಗೆ ರಾಜಯೋಗ ಯಾರಿಗೆ ಸಾಡೇಸಾತಿ ಇದೆ ನೋಡಿ.ನಿಮ್ಮ ರಾಶಿಯ ಅದೃಷ್ಟ ನೋಡಿ

2023 ಶನಿಮಹಾತ್ಮನ ಬದಲಾವಣೆ ಯಾವ ರಾಶಿಗೆ ರಾಜಯೋಗ, ಯಾರಿಗೆ ಸಾಡೆ ಸಾತಿ||ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ರಾಶಿ ಪರಿವರ್ತನೆ ಆಗುತ್ತಿದ್ದಾನೆ ಅದು ಯಾವ ದಿನ ಎಂದರೆ ಜನವರಿ 17ನೇ ತಾರೀಖು ಶನಿ ಬದಲಾವಣೆಯಾಗುತ್ತಿ ರುವಂಥದ್ದು ಶನಿ ಒಂದೊಂದು ಮನೆಯಲ್ಲು ಕೂಡ ಎರಡುವರೆ ವರ್ಷ ಕುಳಿತುಕೊಂಡಿರುವಂಥದ್ದು. ಅದರಲ್ಲೂ ಶನಿಯ ಸ್ವಂತ ಮನೆಗಳು ಯಾವುದು ಎಂದರೆ.

ಮಕರ ರಾಶಿ ಮತ್ತು ಕುಂಭ ರಾಶಿ ಅದರಲ್ಲಿ ಮಕರ ರಾಶಿ ಗಿಂತ ತುಂಬಾ ಕುಂಭ ರಾಶಿ ಎಲ್ಲಿ ಶನಿ ಇರುವುದರಿಂದ ಒಂದು ರೀತಿಯ ಬಲ ಎನ್ನುವುದು ಹೆಚ್ಚಾಗಿ ಇರುತ್ತದೆ ಮಕರ ರಾಶಿಯು ಶನಿಯ ಸ್ವಂತ ಮನೆಗೆ ಆದರೂ ಕೂಡ ಕುಂಬ ರಾಶಿಯಲ್ಲಿ ಇದ್ದರೆ ಅದರಲ್ಲಿ ಇನ್ನೂ ಹೆಚ್ಚಿನ ಶಕ್ತಿಯುತವಾಗಿರುತ್ತದೆ ಎಂದು ಹೇಳಬಹುದು. ಪ್ರತಿಯೊಬ್ಬರೂ ಶನಿಯ ಬಗ್ಗೆ ತಪ್ಪು ಕಲ್ಪನೆಯನ್ನು ಇಟ್ಟುಕೊಂಡಿದ್ದಾರೆ.


ಏನೆಂದರೆ ಶನಿ ಎಲ್ಲರಿಗೂ ಕೂಡ ತೊಂದರೆಯನ್ನು ಮಾಡುತ್ತಾನೆ ಶನಿಯ ಪ್ರಭಾವ ಏನಾದರೂ ನಮ್ಮ ಮೇಲೆ ಬಿದ್ದರೆ ನಮ್ಮ ಎಲ್ಲಾ ಕೆಲಸ ಕಾರ್ಯಗಳು ನಿಂತು ಹೋಗುತ್ತದೆ ನಮಗೆ ಕಷ್ಟವನ್ನೇ ಕೊಡುತ್ತಾನೆ ಎಂದು ಶನಿಯ ಹೆಸರನ್ನು ಕೇಳಿದರೆ ಎಲ್ಲರೂ ಹೆದರಿಕೊಳ್ಳುತ್ತಾರೆ ಆದರೆ ಶನಿ ಯಾರಿಗೂ ಕೂಡ ಕೆಟ್ಟದ್ದನ್ನು ಮಾಡುವುದಿಲ್ಲ ಬದಲಿಗೆ ನಮ್ಮ ಕರ್ಮಗಳ ಅನುಸಾರವಾಗಿ ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದಂತಹ ಫಲಾನುಫಲಗಳ.

See also  ಪೂಜೆಯ ಮಧ್ಯೆ ದೀಪ ಆರಿ ಹೋದರೆ..ಬತ್ತಿ ಪೂರ್ತಿ ಸುಟ್ಟು ಹೋದರೆ.. ದೀಪ ಚಟಪಟ ಶಬ್ದ ಮಾಡಿದರೆ ಏನರ್ಥ ನೋಡಿ

ನಿಮಿತ್ತ ನಮಗೆ ಒಳ್ಳೆಯ ಫಲಗಳನ್ನು ಮತ್ತು ಕೆಟ್ಟ ಫಲಗಳನ್ನು ಕೊಡುತ್ತಿರುತ್ತಾನೆ. ಅದರಲ್ಲೂ ನಾವು ಬೇರೆಯವರಿಗೆ ಮಾಡುವಂತ ಮೋಸವನ್ನು ಶನಿ ನಮಗೆ ತಿಳಿಸಿಕೊಡುತ್ತಾನೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಕಾರಣಕ್ಕೂ ಯಾವುದೇ ಸಮಯದಲ್ಲೂ ಕೂಡ ಬೇರೆಯವರಿಗೆ ಕಷ್ಟವನ್ನು ಕೊಡುವುದಾಗಲಿ ಬೇರೆಯವರಿಗೆ ಮೋಸ ಮಾಡುವುದಾಗಲಿ ಮಾಡಬಾರದು ಅದೆಲ್ಲದಕ್ಕೂ ಕೂಡ ಶನಿ ನಿಮಗೆ ತಕ್ಕ ಪಾಠ ಕೊಡುತ್ತಾನೆ.

ಅದರಲ್ಲೂ ಹೆಚ್ಚಿನ ಜನ ಶನಿಯ ಸಾಡೆ ಸಾತ್ ಎಂದ ತಕ್ಷಣ ಪ್ರತಿಯೊಬ್ಬರೂ ಕೂಡ ಹೆದರಿಕೊಳ್ಳುತ್ತಾರೆ ಆದರೆ ಯಾವುದೇ ಕಾರಣಕ್ಕೂ ಹೆದರಿಕೊಳ್ಳುವಂತಹ ಅವಶ್ಯಕತೆ ಇಲ್ಲ. ಹಾಗಾದರೆ ಸಾಡೇಸಾತ್ ಎಂದರೆ ಏನು ಎಂದು ನೋಡುವುದಾದರೆ ಏಳುವರೇ ವರ್ಷಗಳ ಕಾಲ ಶನಿ ನಿಮ್ಮನ್ನು ಕಾಡುವುದು ಎಂದರ್ಥ ಯಾವ ಕಾರಣಕ್ಕೆ ಆ ರೀತಿ ಕಾಡುತ್ತಾನೆ.

ಎಂದರೆ ಈಗ ಉದಾಹರಣೆಗೆ ಯಾವ ರಾಶಿಯಲ್ಲಿ ಶನಿಯ ಪ್ರಭಾವ ಇರುತ್ತದೆಯೋ ಅದರ ಹಿಂದಿನ ರಾಶಿ ಮತ್ತು ಮುಂದಿನ ರಾಶಿ ಮಧ್ಯದಲ್ಲಿ ಶನಿ ಇರುತ್ತಾನೆ ಹೀಗೆ ಮೂರು ರಾಶಿಗಳಲ್ಲಿಯೂ ಕೂಡ ಎರಡುವರೆ ವರ್ಷ ಇರುತ್ತಾನೆ. ಈ ಒಂದು ಸಮಯದಲ್ಲಿ ಶನಿ ಯಾವ ಮನೆಯಲ್ಲಿ ಇರುತಾನೋ ಅವರ ಕರ್ಮಗಳ ಅನುಸಾರವಾಗಿ ಶನಿ ಪ್ರಭಾವವನ್ನು ಬೀರುತ್ತಾನೆ ಎಂದೇ ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]