ಗ್ಯಾಸ್ ಸಿಲಿಂಡರ್ ಬಳಸುವವರೆಲ್ಲಾ ಈ ವಿಡಿಯೋ ನೋಡಲೆಬೇಕು.ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಈ ಸತ್ಯ ಎಷ್ಟೋ ಜನರಿಗೆ ಗೊತ್ತಿಲ್ಲ - Karnataka's Best News Portal

ಗ್ಯಾಸ್ ಸಿಲಿಂಡರ್ ಬಳಸುವ ಮೊದಲು ಈ ಈ ಮಾಹಿತಿಯನ್ನು ತಿಳಿದುಕೊಳ್ಳಿ. ದಿನನಿತ್ಯ ಜೀವನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸಿಲೆಂಡರನ್ನು ಬಳಸೆ ಬಳಸುತ್ತಿವೆ ಅದರಲ್ಲಿಯೂ ವಿಶೇಷವಾಗಿ ಅಡುಗೆ ಮಾಡಲು, ಸ್ನಾನಕ್ಕೆ ನೀರು ಕಾಯಿಸಲು ಅಥವಾ ಕೆಲವೊಂದು ವಾಹನಗಳಿಗೂ ಸಹ ಸಿಲಿಂಡರನ್ನು ಉಪಯೋಗಿಸಬೇಕು ಎನ್ನುವಂತಹ ಮಾಹಿತಿ ಎಲ್ಲರಿಗು ತಿಳಿದಿರುತ್ತದೆ ಆದರೆ ಅದನ್ನು ಹೊರತುಪಡಿಸಿ ಕೆಲವೊಂದು ಮಾಹಿತಿಯನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.

ಮುಖ್ಯವಾಗಿ ನಾವು ಸಿಲಿಂಡರ್ ಗಳಲ್ಲಿ ತಿಳಿದುಕೊಳ್ಳ ಬೇಕಾದಂತಹ ಅಂಶಗಳು ಎಂದರೆ ಮೊದಲನೇದಾಗಿ ಸಿಲಿಂಡರ್ ನ ಎಕ್ಸ್ಪೈರಿ ಡೇಟ್. ಪ್ರತಿಯೊಂದು ಸಿಲಿಂಡರ್ ಗಳಲ್ಲಿಯೂ ABCD ಎಂಬ ಲೆಟರ್ನ ಮುಂದೆ ನಂಬರ್ ಗಳು ಬಂದಿರುತ್ತದೆ ಇದರ ಮೂಲಕ ಹೇಗೆ ಎಕ್ಸ್ಪರಿ ಡೇಟ್ ಆದಂತಹ ಸಿಲಿಂಡರ್ ಗಳನ್ನು ಕಂಡುಹಿಡಿಯುವುದು ಎಂದರೆ A ಎಂದರೆ ಜನವರಿ, ಫೆಬ್ರವರಿ, ಮಾರ್ಚ್.


B ಎಂದರೆ ಏಪ್ರಿಲ್, ಮೇ, ಜೂನ್ ಸC ಎಂದರೆ ಜುಲೈ, ಆಗಸ್ಟ್, ಸೆಪ್ಟೆಂಬರ್ D ಎಂದರೆ ಅಕ್ಟೋಬರ್, ನವೆಂಬರ್, ಡಿಸೆಂಬರ್. ಹೀಗೆ ಒಂದು ವರ್ಷವನ್ನು ನಾಲ್ಕು ಭಾಗಗಳಾಗಿ ಡಿವೈಡ್ ಮಾಡಿ ABCD ಎಂದು ಮೆನ್ಷನ್ ಮಾಡಿರುತ್ತಾರೆ. ಅದರ ಪಕ್ಕದಲ್ಲಿ ಒಂದು ನಂಬರ್ ಕೊಟ್ಟಿರುತ್ತಾರೆ ಅದು ವರ್ಷ ಯಾವ ವರ್ಷಕ್ಕೆ ಎಕ್ಸ್ಪರಿ ಡೇಟ್ ಆಗುತ್ತದೆ ಎನ್ನುವಂತಹದನ್ನು ಆ ಒಂದು ಲೆಟರ್ನ ಮುಂದೆ ಕೊಟ್ಟಿರುತ್ತಾರೆ.

ಆದ್ದರಿಂದ ನಾವು ಸಿಲಿಂಡರ್ ಡೇಟ್ ಎಕ್ಸ್ಪೈರ್ ಆಗಿದಿಯಾ ಎಂದು ಗಮನದಲ್ಲಿ ಇಟ್ಟುಕೊಂಡು ನಂತರದಲ್ಲಿ ಸಿಲಿಂಡರ್ ಗಳನ್ನು ತೆಗೆದುಕೊಳ್ಳಬೇಕು. ಎರಡನೇ ವಿಚಾರಕ್ಕೆ ಬಂದರೆ ನಾವು ಸಿಲಿಂಡರನ್ನು ಡೆಲಿವರಿ ತೆಗೆದುಕೊಳ್ಳುವಾಗ ಮೊದಲು ಗಮನಿಸಬೇಕಾದ ವಿಷಯ ಏನೆಂದರೆ, ಸಿಲಿಂಡರ್ ಗೆ ಸೀಲ್ ಕವರ್ ಆಗಿರುತ್ತದೆ ಆದ್ದರಿಂದ ಡೆಲಿವರಿ ಮಾಡುವವರು ಈ ಒಂದು ಕವರನ್ನು ನಮ್ಮ ಮುಂದೆ ಓಪನ್ ಮಾಡಿ ಆ ಸಿಲಿಂಡರ್ ನಿಂದ ಯಾವುದೇ ಲೀಕ್ ಆಗುತ್ತಿಲ್ಲ ಎನ್ನುವಂತಹದನ್ನು ತೋರಿಸಬೇಕು.

ನಂತರ ನಾವು ಸಿಲಿಂಡರ್ ಲೀಕ್ ಆಗುತ್ತಿದೆಯೇ ಎನ್ನುವುದನ್ನು ನೋಡಿ ಸಿಲಿಂಡರನ್ನು ತೆಗೆದುಕೊಳ್ಳಬೇಕು. ಮನೆಯಲ್ಲಿ ಉಪಯೋಗಿಸುವ ಸಿಲಿಂಡರ್ ಲೀಕ್ ಆಗುತಗತಿರುವ ಅನುಮಾನ ಬಂದರೆ ಅದನ್ನು ಹೇಗೆ ಪರಿಶೀಲಿಸಬೇಕು ಎಂದು ನೋಡುವುದಾದರೆ ಮೊದಲು ಸಿಲಿಂಡರಿಂದ ರೆಗ್ಯುಲೇಟರನ್ನು ತೆಗೆದು ಒಂದು ಲೋಟ ನೀರನ್ನು ತೆಗೆದುಕೊಂಡು ಗ್ಯಾಸ್ ಬರುವಂತಹ ಸ್ಥಳಕ್ಕೆ ನೀರು ಹಾಕಿದರೆ ಬಬ್ಬಲ್ಸ್ ಬರುತ್ತಿದ್ದರೆ ಸಿಲಿಂಡರ್ ಲೀಕೇಜ್ ಆಗಿದೆ ಎಂದು ಅರ್ಥ.

ಯಾವುದೇ ಬಬಲ್ಸ್ ಅಥವಾ ಗುಳ್ಳೆಗಳು ಬರದೇ ಇದ್ದರೆ ಸಿಲಿಂಡರ್ ಲೀಕೇಜ್ ಆಗಿಲ್ಲ ಎಂದು ಅರ್ಥ. ಟೆಸ್ಟ್ ಮಾಡಿದ ನಂತರ ಹಾಕಿರುವ ನೀರನ್ನು ಚೆನ್ನಾಗಿ ಒಂದು ಬಟ್ಟೆಯ ಸಹಾಯದಿಂದ ಡ್ರೈ ಮಾಡಬೇಕು. ಹೀಗೆ ನೀವು ಸಿಲಿಂಡರ್ ಗಳನ್ನು ಬಳಸುವ ಮೊದಲು ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡಿರಬೇಕು.

Leave a Reply

Your email address will not be published. Required fields are marked *