ಈ ಮಷಿನ್ ಒಂದು ನಿಮಿಷಕ್ಕೆ ಇಡ್ಲಿ ವಡಾ ಚಟ್ನಿ ಸಾಂಬಾರ್ ಮಾಡುತ್ತೆ.ಬೆಂಗಳೂರಿಗೆ ಬಂದ ಇಡ್ಲಿ ವಡಾ ಎಟಿಎಂ » Karnataka's Best News Portal

ಈ ಮಷಿನ್ ಒಂದು ನಿಮಿಷಕ್ಕೆ ಇಡ್ಲಿ ವಡಾ ಚಟ್ನಿ ಸಾಂಬಾರ್ ಮಾಡುತ್ತೆ.ಬೆಂಗಳೂರಿಗೆ ಬಂದ ಇಡ್ಲಿ ವಡಾ ಎಟಿಎಂ

ಈ ಮಿಷನ್ ಒಂದು ನಿಮಿಷಕ್ಕೆ ಇಡ್ಲಿ ವಡಾ ಚಟ್ನಿ ಸಾಂಬಾರ್ ಮಾಡತ್ತೆ!! ಬೆಂಗಳೂರಿಗೆ ಬಂದ ಇಡ್ಲಿ ವಡಾ ಎಟಿಎಂ!!
ಕರ್ನಾಟಕದ ಬೆಂಗಳೂರಿನಲ್ಲಿ ಸೃಷ್ಟಿಯಾಗಿದೆ ಇಡ್ಲಿ ವಡಾ ಎಟಿಎಂ! ಎಟಿಎಂ ಯಾವ ರೀತಿ ಕೆಲಸ ಮಾಡುತ್ತದೆಯೋ ಅದೇ ರೀತಿಯಲ್ಲಿ ಈ ಇಡ್ಲಿ ವಡಾ ಎಟಿಎಂ ಕೆಲಸ ಮಾಡುತ್ತದೆ. ಏನಿದು ಆಶ್ಚರ್ಯ ಎನಿಸಬಹುದು! ಹೌದು ಎಟಿಎಂ ನಲ್ಲಿ ಎಟಿಎಂ ಕಾರ್ಡ್ ಹಾಕಿದರೆ ಹೇಗೆ ದುಡ್ಡು ಬರುತ್ತದೆಯೋ.

WhatsApp Group Join Now
Telegram Group Join Now

ಅದೇ ರೀತಿಯಲ್ಲಿ ಈ ಮಷೀನ್ ನಲ್ಲಿ ದುಡ್ಡು ಹಾಕಿದರೆ ಇಡ್ಲಿ ವಡಾ ಚಟ್ನಿ ಸಾಂಬಾರ್ ಬರುತ್ತದೆ ಅದರಲ್ಲೂ ಹೋಟೆಲ್ ನಲ್ಲಿ ಬಿಸಿ ಬಿಸಿ ಇಡ್ಲಿ ವಡೆ ಸಾಂಬಾರ್ ಹೇಗೆ ಸಿಗುತ್ತದೆಯೋ ಅದೇ ರೀತಿಯಲ್ಲಿ ಈ ಮಷೀನ್ ಮುಖಾಂತರ ನಮಗೆ ಬಿಸಿಬಿಸಿಯಾದ ಇಡ್ಲಿ ವಡಾ ಸಾಂಬಾರ್ ಸಿಗುತ್ತದೆ.


ಈ ಒಂದು ಮಿಷಿನ್ ಅನ್ನು ಬಸ್ಟ್ಯಾಂಡ್ ರೈಲ್ವೆ ಸ್ಟೇಷನ್ ಮೆಟ್ರೋ ಸ್ಟೇಷನ್ ಗಳಲ್ಲಿ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ಹಾಗಾದರೆ ಅಷ್ಟಕ್ಕೂ ಇಡ್ಲಿ ವಡಾ ಸಾಂಬಾರ್ ಚಟ್ನಿ ಬರುವಂತಹ ಮೆಷಿನ್ ಯಾವ ರೀತಿ ಇದೆ ಇದು ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಹಾಗೂ ಇದನ್ನು ರೈಲ್ವೆ ಸ್ಟೇಷನ್ ಮೆಟ್ರೋ ಸ್ಟೇಷನ್ ಗಳಲ್ಲಿ ಸ್ಥಾಪನೆ ಮಾಡಲು ಹೇಗೆ ಅವಕಾಶವನ್ನು ಕೊಟ್ಟಿದ್ದಾರೆ.

ಹಾಗೂ ಈ ಮಷೀನ್ ಗೆ ಸಂಬಂಧಿಸಿದಂತಹ ಕೆಲವೊಂದು ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ. ಕರ್ನಾಟಕ ಬೆಂಗಳೂರು ಮೂಲದ ಇಬ್ಬರು ಉದ್ಯೋಗಿಗಳು ಈ ಮಶೀನನ್ನು ಆವಿಷ್ಕರಿಸಿದ್ದಾರೆ ಇದೇ ತಿಂಗಳು ಬೆಂಗಳೂರು ಮೆಟ್ರೋ ಸ್ಟೇಷನ್ ಗಳಲ್ಲಿ ಈ ಇಡ್ಲಿ ಎಟಿಎಂ ಮಷೀನ್ ಕಾರ್ಯನಿರ್ವಹಿಸಲಿದೆ ಇದರ ಕಂಪನಿಯ ಹೆಸರು ಫ್ರೆಶ್ ಹಾಟ್ ರೋಬೋಟಿಕ್ಸ್ ಪ್ರೈವೇಟ್ ಲಿಮಿಟೆಡ್ ಈ ಕಂಪನಿಯನ್ನು ಹುಟ್ಟಿ ಹಾಕಿದ್ದು ಶರಣ್ ಹಿರೇಮಠ್ ಮತ್ತು ಸುರೇಶ್ ಚಂದ್ರಶೇಖರ್.

See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

ಇವರ ಈ ಹೊಸ ಆವಿಷ್ಕಾರವೇ ಈ ಇಡ್ಲಿ ವಡಾ ಎಟಿಎಂ ಮಷೀನ್‌ಗಳು ಇವರಿಬ್ಬರೂ ಸೇರಿ ಭಾರತದಲ್ಲಿ ಒಂದು ರವೆಲ್ಯೂಷನ್ ಅನ್ನು ತರಲು ಸಜ್ಜಾಗಿದ್ದಾರೆ ಈ ರೀತಿಯ ಇಡ್ಲಿ ವಡಾ ಎಟಿಎಂ ಮಷೀನ್ ಗಳು ಭಾರತದಲ್ಲಿ ಮೊದಲು ಫ್ರೆಶ್ ಹಾಟ್ ರೋಬೋಟಿಕ್ಸ್ ಪ್ರೈವೇಟ್ ಲಿಮಿಟೆಡ್ ಅವರು ಎರಡು ರೀತಿಯ ಮಷೀನ್ ಮಾಡಿದ್ದಾರೆ ಒಂದು ರೀತಿಯ ಮಷೀನ್ 4 ವಿಧದ ಇಡ್ಲಿಯನ್ನು ಮಾಡಿಕೊಡುತ್ತದೆ.

ಹಾಗೂ ಇನ್ನೊಂದು ಮೆಷಿನ್ ನಲ್ಲಿ ಹತ್ತು ಹಲವಾರು ರೀತಿಯ ಸಾಂಬಾರ್ ಚಟ್ನಿ ಮಾಡುತ್ತದೆ ಮಷೀನ್ ನಲ್ಲಿ ಅಳವಡಿಸಿರುವಂತಹ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನಿಮಗೆ ಬೇಕಿರುವ ಇಡ್ಲಿ ವಡಾ ಸೆಲೆಕ್ಟ್ ಮಾಡಿ ಪೇಮೆಂಟ್ ಮಾಡಿದರೆ ನಿಮ್ಮ ಕಣ್ಣ ಮುಂದೆ ಬಿಸಿ ಬಿಸಿಯಾದ ಇಡ್ಲಿ ವಡಾ ಪ್ಯಾಕ್ ಆಗಿ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">