ಹಸ್ತಸಾಮುದ್ರಿಕ ಶಾಸ್ತ್ರದಿಂದ ಹಣಕಾಸು ರೇಖೆ ಸಂತಾನ ಗಂಡೆ ಅಥವಾ ಹೆಣ್ಣೆ ವ್ಯಾಪಾರ ರೇಖೆ ಸರ್ಕಾರಿ ಉದ್ಯೋಗ ಹೇಗಿರಲಿದೆ ನೋಡಿ - Karnataka's Best News Portal

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಶುಕ್ರ ಪರ್ವದ ಮೇಲೆ ಬರುವ ರೇಖೆಗಳು ಏನು ಹೇಳುತ್ತವೆ ಗೊತ್ತಾ.ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಜೀವನದ ಏಳುಬೀಳು ಎಲ್ಲವನ್ನು ಸಹ ನಾವು ತಿಳಿದುಕೊಳ್ಳಬಹುದು ನಮ್ಮ ಹಸ್ತದ ಶುಕ್ರ ಪರ್ವದಲ್ಲಿ ಬರುವಂತಹ ಗೆರೆಗಳು ಅಥವಾ ಕೆಲವರಿಗೆ ಅಲೆಗಳ ರೀತಿಯಲ್ಲಿ ಇರುತ್ತದೆ ಈ ಗೆರೆಗಳು ಆಯುಷ್ಯ ರೇಖೆಯವರೆಗೂ ಬಂದು ತಲುಪಿದರೆ ನಿಮಗೆ ಒಳ್ಳೆಯ ಆದಾಯವು ಬರುತ್ತಾ ಇರುತ್ತದೆ ರೇಖೆಗಳು ಅಡ್ಡವಾಗಿ ಇರಬಾರದು ಬದಲಾಗಿ ಉದ್ದವಾಗಿ ಆಯುಷ್ಯ ರೇಖೆಗೆ ಹೋಗಿ ಮುಟ್ಟಿದರೆ ನಿಮ್ಮ ಆದಾಯ ಜಾಸ್ತಿ ಆಗುತ್ತದೆ.

ನಿಮ್ಮ ಕೈಯಲ್ಲಿ ಇರುವಂತಹ ಶುಕ್ರ ರೇಖೆಯು ಅಡ್ಡಡ್ಡವಾಗಿ ಇದ್ದರೆ ಅಂತಹವರಿಗೆ ದುಡ್ಡು ಬಂದಿದ್ದು ಅಲ್ಲೇ ಖರ್ಚಾಗಿ ಹೋಗುತ್ತದೆ. ಈ ರೀತಿ ರೇಖೆಗಳು ಇದ್ದರೆ ಅವರಿಗೆ ಹಣದ ಸಮಸ್ಯೆ ಇದ್ದೇ ಇರುತ್ತದೆ ಅವರ ಜೀವನದಲ್ಲಿ ಅದು ಕೊನೆಯ ತನಕ ಬಗೆ ಹರಿಯುವುದಿಲ್ಲ ಆ ರೇಖೆಗಳು ತುಂಬಾ ದಪ್ಪವಾಗಿ ಇದ್ದರೆ ಇನ್ನಷ್ಟು ಕಷ್ಟದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಅವರು ಬಹಳಷ್ಟು ಖರ್ಚನ್ನು ಸಹ ಮಾಡುತ್ತಾರೆ.


ಕೆಲವರು ಒಳ್ಳೆಯದಕ್ಕೆ ಖರ್ಚು ಮಾಡುತ್ತಾರೆ ಇನ್ನೂ ಕೆಲವರು ಕೆಟ್ಟದ್ದಕ್ಕೆ ಖರ್ಚು ಮಾಡುತ್ತಾರೆ. ಅದೇ ರೀತಿಯಾಗಿ ಅಡ್ಡ ಮತ್ತು ಉದ್ದದ ರೇಖೆಗಳು ಇದ್ದರೆ ಇವರಿಗೆ ಕಾಮದಾಸೆಗಳು ಜಾಸ್ತಿ ಇರುತ್ತದೆ ಮತ್ತು ಈ ರೇಖೆಗಳು ಇದ್ದಾಗ ಆಧ್ಯಾತ್ಮದ ಜ್ಞಾನ ಜಾಸ್ತಿ ಇರುತ್ತದೆ. ಶುಕ್ರ ಪರ್ವದ ಮೇಲೆ ಅಡ್ಡಡ್ಡ ಮತ್ತು ಉದ್ದದ್ದ ರೇಖೆಗಳು ಆಧ್ಯಾತ್ಮದ ಮೇಲೆ ಒಲವು ಜಾಸ್ತಿ ಇರುತ್ತದೆ ಅವರು ಸನ್ಯಾಸಿಗಳು ಸಹ ಆಗಬಹುದು.

ನಮಗೆ ಹುಟ್ಟುವಂತಹ ಸಂತಾನ ಗಂಡು ಅಥವಾ ಹೆಣ್ಣು ಎಂದು ಹೇಗೆ ತಿಳಿದುಕೊಳ್ಳಬೇಕು ಎಂದರೆ ಶುಕ್ರದ ಪರ್ವದ ಮೇಲೆ ಹೆಬ್ಬೆರಳಿನ ತಳಭಾಗದಲ್ಲಿ ಸರಪಳಿಯ ರೀತಿಯಲ್ಲಿ ಇದ್ದರೆ ಗಂಡು ಸಂತಾನ ಅಥವಾ ಜಿಗ್ ಜಾಗ್ ಟೈಪ್ ನಲ್ಲಿದ್ದಾಗ ಅದು ಹೆಣ್ಣು ಸಂತಾನ ಎರಡು ಇದ್ದವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಎರಡು ಸಹ ಆಗುತ್ತದೆ.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದುಕೊಂಡಿದ್ದರೆ ಹೃದಯ ರೇಖೆಯ ಮೇಲೆ ಅಥವಾ ಬುದ್ಧಿ ರೇಖೆಯ ಮೇಲೆ ತ್ರಿಭುಜಾಕಾರದ ರೇಖೆಗಳು ಮೂಡಿರುತ್ತವೆ ಅಥವಾ ಮೂಡುತ್ತವೆ. ಸೂರ್ಯನ ಬೆರಳಿನ ಕಡೆ ಒಂದು ರೇಖೆ ಹೃದಯ ರೇಖೆಯನ್ನು ಟಚ್ ಮಾಡಿದರೆ ಅಂದರೆ ಸಂಧಿಸಿದರೆ ಅಂತಹವರಿಗೆ ಸರ್ಕಾರಿ ಕೆಲಸಗಳು ದೊರೆಯುತ್ತದೆ ಮತ್ತು ರಾಜಕೀಯದಲ್ಲಿ ಇರುತ್ತಾರೆ ಸರ್ಕಾರಿ ಕೆಲಸಗಳಿಗೆ ಸಂಬಂಧ ಪಟ್ಟಂತೆ ಯಾವುದೇ ಒಂದು ಕೆಲಸಗಳನ್ನು ಮಾಡುತ್ತಾ ಇರುತ್ತಾರೆ.

ಪ್ರತಿಯೊಂದು ಶಾಸ್ತ್ರವು ಸಹ ನಿಜ, ರೇಖೆಯು ಸೂರ್ಯನ ಬೆರಳಿನಿಂದ ಹೃದಯದ ರೇಖೆಗಳ ಹೃದಯದ ರೇಖೆಗೆ ಕಡೆಗೆ ಒಂದು ಗೆರೆ ಬಂದಿದ್ದರು ಸಹ ಅದು ಕವಲೊಡೆದಿದ್ದರೆ ಅಥವಾ ಮಧ್ಯದಲ್ಲಿ ಕಟ್ಟಾಗಿದ್ದರೆ ನಿಮಗೆ ಸರ್ಕಾರಿ ಕೆಲಸವು ದೊರೆಯುವುದಿಲ್ಲ. ಈ ರೀತಿಯಾಗಿ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ಜೀವನದ ಬಗೆಗೆ ಸಾಕಷ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದು.

Leave a Reply

Your email address will not be published. Required fields are marked *