ಲಲಿತಾ ಸಹಸ್ರನಾಮ ಈ ವಿಧಾನದಲ್ಲಿ ಪಠಿಸಿ ಸಕಲ ಇಷ್ಟಾರ್ಥಗಳು ಫಲಿಸುತ್ತೆ ಹೀಗೆ ತಾಯಿ‌ ಲಲಿತಾಂಬೆಯ ಆರಾಧನೆ ಮಾಡಿದ್ರೆ ಚಮತ್ಕಾರವೆ ನಡೆಯುತ್ತದೆ » Karnataka's Best News Portal

ಲಲಿತಾ ಸಹಸ್ರನಾಮ ಈ ವಿಧಾನದಲ್ಲಿ ಪಠಿಸಿ ಸಕಲ ಇಷ್ಟಾರ್ಥಗಳು ಫಲಿಸುತ್ತೆ ಹೀಗೆ ತಾಯಿ‌ ಲಲಿತಾಂಬೆಯ ಆರಾಧನೆ ಮಾಡಿದ್ರೆ ಚಮತ್ಕಾರವೆ ನಡೆಯುತ್ತದೆ

ಲಲಿತಾ ಸಹಸ್ರನಾಮದಿಂದ ಸಿದ್ದಿಸೋ ಪುಣ್ಯಫಲ ಎಂಥದ್ದು ಗೊತ್ತಾ.? ತಾಯಿಯ ಕರುಣೆಯೇ ಪರಮ ದೈವ.
ನಮ್ಮ ಸಂಕಲ್ಪ ಸಿದ್ದಿಸಬೇಕು ಎಂದರೆ ತಾಯಿ ಲಲಿತಾಂಬೆಯ ಪಾದಾರವಿಂದಗಳಿಗೆ ಶರಣಾಗಬೇಕು ನಂಬಿಕೆ ಇಲ್ಲದೆ ಕೇವಲ ಕಣ್ಣೊರಿಸುವುದಕ್ಕೆ ಪೂಜೆ ಪ್ರಾರ್ಥನೆಯನ್ನು ಮಾಡಿದರೆ ಖಂಡಿತವಾಗಿಯೂ ಫಲ ಸಿಗುವುದಿಲ್ಲ. ತಾಯಿ ಲಲಿತಾಂಬಿಕೆ ನಮ್ಮ ಮನಸ್ಸಿನಲ್ಲಿ ನೆಲೆಸಿದ್ದಾಳೆ ನಮ್ಮ ಆತ್ಮದ ಪ್ರತಿಯೊಂದು ಕೆಲಸ ಕಾರ್ಯಗಳನ್ನು ವೀಕ್ಷಿಸುತ್ತಾ ಇರುತ್ತಾಳೆ.

WhatsApp Group Join Now
Telegram Group Join Now

ಲಲಿತೋಪಾಸಕರು ಇದನ್ನು ನಿತ್ಯವೂ ಪ್ರಯತ್ನಪೂರ್ವಕವಾಗಿ ಮಾಡಬೇಕು ಪ್ರಥಾಕಾಲದಲ್ಲಿ ಸ್ನಾನ ಮಾಡಿ ಸಂಧ್ಯಾದಿ ಕರ್ಮಗಳನ್ನು ವಿಧಿ ಪ್ರಕಾರ ಮುಗಿಸಿ ಶ್ರೀಚಕ್ರದ ಅರ್ಚನೆಯನ್ನು ಮಾಡಬೇಕು ಶ್ರೀ ಚಕ್ರವನ್ನು ಪೂಜಿಸಿದ ನಂತರ ಪಂಚದಶಿ ಮಂತ್ರಗಳನ್ನು 1000 ಸಲ ಆಗಲಿ 300 ಸಲ ಆಗಲಿ ಅಥವಾ 100 ಸಲವಾಗಲಿ ಜಪಿಸಬೇಕು ನಿಗದಿತ ಸಂಖ್ಯೆಯ ಮಂತ್ರ ಜಪದ ಬಳಿಕ ಸಹಸ್ರನಾಮವನ್ನು ಪಠಿಸಬೇಕು ಸಹಸ್ರನಾಮವು ಪೂರ್ಣಗೊಂಡ ಮೇಲೆ ಲಲಿತಾಂಬಿಕೆಗೆ ಪುಷ್ಪಗಳನ್ನು ಸಮರ್ಪಿಸಬೇಕು.


ಒಂದು ವೇಳೆ ಮಂತ್ರ ಜಪ ಅಥವಾ ಶ್ರೀ ಚಕ್ರಪಾಸನೆಯ ದೀಕ್ಷೆಯನ್ನು ಪಡೆಯದಿದ್ದಲ್ಲಿ ಕೇವಲ ಸಹಸ್ರನಾಮ ಒಂದನ್ನೇ ಪಟಿಸಬಹುದು. ನಮ್ಮ ಜೀವಿತಕಾಲದಲ್ಲಿ ಒಂದೇ ಒಂದು ಬಾರಿ ಸಾಹಸ್ರ ನಾಮವನ್ನು ಪಠಿಸಿದರೆ ಉಂಟಾಗುವ ಫಲಗಳು ನಿಜಕ್ಕೂ ಅದ್ಭುತವಾಗಿದೆ ಗಂಗಾದಿ ಸರ್ವತೀರ್ಥಗಳಲ್ಲಿ ಕೋಟಿ ಜನ್ಮಗಳಲ್ಲಿ ಸ್ನಾನ ಮಾಡುವುದರಿಂದ ದೊರೆಯುವ ಫಲಕ್ಕಿಂತ ಅಧಿಕ ಫಲವನ್ನು ಪಡೆಯುತ್ತಾರೆ. ಕಾಶಿಯಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸುವುದಕ್ಕಿಂತ ಹೆಚ್ಚಿನ ಪುಣ್ಯವನ್ನು ಪಡೆಯುತ್ತಾರೆ.

ಸಹಸ್ರನಾಮದಲ್ಲಿನ ಯಾವುದಾದರೂ ಒಂದು ನಾಮವನ್ನು ಉಚ್ಚರಿಸಿದರು ಕೂಡ ಅವನ ಮಹಾ ಪಾಪಗಳು ನಾಶವಾಗುತ್ತದೆ. ಸಹಸ್ರನಾಮವನ್ನು ನಿತ್ಯವೂ ಪಠಿಸಿದರೆ ಲಲಿತಾಂಬಿಕೆಯು ಅವರ ಬಗೆಗೆ ಅತೀವ ಸಂತೋಷವನ್ನು ಹೊಂದಿ ಅವರ ಎಲ್ಲಾ ಆಸೆಗಳನ್ನು ಪೂರೈಸುತ್ತಾರೆ. ಸಹಸ್ರನಾಮವನ್ನು ಯಾರು ನಿತ್ಯ ಪಠಿಸುವುದಿಲ್ಲವೋ ಅವರನ್ನು ಭಕ್ತರೆಂದು ಪರಿಗಣಿಸಲಾಗುವುದಿಲ್ಲ.

ಒಬ್ಬ ಭಕ್ತನೆನಿಸಿಕೊಳ್ಳಬೇಕು ಎಂದರೆ ತಾನು ಪೂಜಿಸುವ ದೈವದ ಬಗ್ಗೆ ಅವನಿಗೆ ಪ್ರೀತಿ ಇರಬೇಕು ಈ ಸಹಸ್ರನಾಮವನ್ನು ಪ್ರತಿನಿತ್ಯವೂ ಸಂಪೂರ್ಣವಾಗಿ ಪಠಿಸಿದಲ್ಲಿ ಮಾತ್ರ ಲಲಿತಾಂಬಿಕೆಯು ಅಂತಹ ಭಕ್ತಿಯನ್ನ ಹುಟ್ಟು ಹಾಕುತ್ತಾಳೆ. ಸಹಸ್ರನಾಮವನ್ನು ನಿತ್ಯವೂ ಪಠಿಸಲು ಆಗದಿದ್ದರೆ ಕಡೆ ಪಕ್ಷ ಹಬ್ಬ ಹರಿದಿನಗಳಲ್ಲಾದರೂ ಪಠಿಸಬೇಕು ಮುಖ್ಯವಾದ ದಿವಸಗಳೆಂದರೆ ಸಂಕ್ರಾಂತಿ ಅಥವಾ ಉತ್ತರಾಯಣ ದಕ್ಷಿಣಾಯನ ಪುಣ್ಯ ಕಾಲ ಮೊದಲಾದವುಗಳು ಸಹಸ್ರನಾಮವನ್ನು ಪಠಿಸಲು ಶ್ರೇಷ್ಠ.

ಇತರೆ ಶುಭದಿನಗಳೆಂದರೆ ಅಷ್ಟಮಿ ನವಮಿ ಮತ್ತು ಚತುರ್ದಶಿ ಥಿತಿಗಳು ಮತ್ತು ಶುಕ್ರವಾರ ಹೆಚ್ಚು ಪ್ರಶಸ್ತವಾದ ಸಮಯ ಎಂದರೆ ಹುಣ್ಣಿಮೆ ಪೂರ್ಣಚಂದ್ರನ ದರ್ಶನವನ್ನು ಪಡೆದ ನಂತರ ಲಲಿತಾಂಬಿಕೆಯನ್ನು ಚಂದ್ರ ಬಿಂಬದಲ್ಲಿ ಧ್ಯಾನಿಸಿ ಪಂಚೋಪಚಾರದಿಂದ ಅಂದರೆ ಗಂದ, ಪುಷ್ಪ, ದೀಪ, ದೂಪ, ನೈವೇದ್ಯಗಳಿಂದ ಶ್ರೀಚಕ್ರವನ್ನು ಪೂಜಿಸಿ ಸಹಸ್ರನಾಮವನ್ನು ಪಠಿಸಿ ದಲ್ಲಿ ಅವರ ಸರ್ವ ರೋಗಗಳು ಪರಿಹಾರವಾಗಿ ಅವರು ದೀರ್ಘಾಯುಷ್ಯವನ್ನು ಪಡೆಯುತ್ತಾರೆ.

[irp]


crossorigin="anonymous">