ಈರುಳ್ಳಿ ಜೊತೆ ಟೂತ್ ಫೇಸ್ಟ್ ಇದು ಇಷ್ಟು ಚೆನ್ನಾಗಿ ವರ್ಕ್ ಆಗುತ್ತದೆ ಅಂತ ನಾನು ಕನಸಿನಲ್ಲೂ ಊಹಿಸಿರಲಿಲ್ಲ... - Karnataka's Best News Portal

ಈರುಳ್ಳಿ ಜೊತೆ ಟೂತ್ ಪೇಸ್ಟ್, ಇದು ಇಷ್ಟು ಚೆನ್ನಾಗಿ ವರ್ಕ್ ಆಗುತ್ತೆ ಅಂತ ನಾನು ಕನಸಿನಲ್ಲೂ ಊಹಿಸಿರಲಿಲ್ಲ!!
ಈ ದಿನ ನಾವು ಹೇಳುವಂತಹ ಈ ಒಂದು ಟಿಪ್ಸ್ ನಿಮಗೆ ಪ್ರತಿಯೊಬ್ಬರಿಗೂ ಕೂಡ ಅನುಕೂಲಕರವಾಗುತ್ತದೆ ಹಾಗೂ ಅಡುಗೆ ಮನೆಗಳಲ್ಲಿ ಯಾವುದೇ ಒಂದು ಪದಾರ್ಥಗಳನ್ನು ಇಟ್ಟರೆ ಅದರಲ್ಲೂ ಬಾಳೆಹಣ್ಣು ಹಾಗೂ ಕೆಲವೊಂದು ಪದಾರ್ಥಗಳನ್ನು ಇಟ್ಟರೆ ಅವುಗಳ ಮೇಲೆ ನೊಣಗಳು ಹಾಗೂ ಸಣ್ಣ ಸಣ್ಣ ಕ್ರಿಮಿ ಕೀಟಗಳು ಓಡಾಡುತ್ತಿರುತ್ತವೆ.

ಅವುಗಳಿಂದ ಆಹಾರವೆಲ್ಲವೂ ಕೂಡ ಹಾಳಾಗುತ್ತಿರುತ್ತದೆ ಹಾಗಾಗಿ ಅಡಿಗೆ ಮನೆಯಲ್ಲಿ ಕಾಣಿಸಿಕೊಳ್ಳುವಂತಹ ಕೆಲವೊಂದು ಸಣ್ಣಪುಟ್ಟ ಕ್ರಿಮಿ ಕೀಟಗಳನ್ನು ಹೇಗೆ ನಾಶಪಡಿಸುವುದು ಹಾಗೂ ಆಹಾರವನ್ನು ಹೇಗೆ ಸುರಕ್ಷಿತವಾಗಿ ಇಡುವುದು ಎನ್ನುವುದೇ ಯೋಚನೆ ಆಗಿರುತ್ತದೆ ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಸಣ್ಣ ಪುಟ್ಟ ಕ್ರಿಮಿ ಕೀಟಗಳನ್ನು ಹೇಗೆ ನಾಶಪಡಿಸುವುದು ಹಾಗೂ ಈ ಒಂದು ವಿಧಾನವನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು.


ಜೊತೆಗೆ ಇದನ್ನು ಇನ್ಯಾವುದೆಲ್ಲ ಕೆಲಸಗಳಿಗೆ ಉಪಯೋಗಿಸಿಕೊಳ್ಳ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಈ ಒಂದು ವಿಧಾನವನ್ನು ಮಾಡುವುದಕ್ಕೆ ಕೇವಲ ಎರಡೇ ಎರಡು ವಸ್ತುಗಳು ಬೇಕು ಈ ಎರಡು ವಸ್ತುಗಳು ಕೂಡ ನಿಮಗೆ ಸುಲಭವಾಗಿ ನಿಮ್ಮ ಮನೆಯಲ್ಲಿ ಯಾವಾಗಲೂ ಇರುವಂತಹ ವಸ್ತುಗಳೇ ಆಗಿದೆ.

ಅವು ಯಾವುವೆಂದರೆ ಈರುಳ್ಳಿ ಹಾಗೂ ನೀವು ಉಪಯೋಗಿಸುವ ಟೂತ್ ಪೇಸ್ಟ್ ಗಳನ್ನು ಉಪಯೋಗಿಸಿ ನೀವು ಇದನ್ನು ಉಪಯೋಗಿಸ ಬಹುದು ಹಾಗಾದರೆ ಇದನ್ನು ಹೇಗೆ ಮಾಡುವುದು ಎಂದು ನೋಡುವುದಾದರೆ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಒಂದು ಚಿಕ್ಕ ಬೌಲ್ ಗೆ ಹಾಕಿಕೊಳ್ಳಬೇಕು ನಂತರ ಅದಕ್ಕೆ ಒಂದು ಲೋಟ ನೀರನ್ನು ಹಾಕಿ ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಈ ರೀತಿ ಮಿಶ್ರಣ ಮಾಡಿಕೊಂಡಂತಹ ನೀರನ್ನು ಅರ್ಧ ಗಂಟೆ ಹಾಗೆ ಬಿಡಬೇಕು ನಂತರ ಈರುಳ್ಳಿ ಮತ್ತು ನೀರನ್ನು ಬೇರ್ಪಡಿಸಿಕೊಳ್ಳಬೇಕು ಹೀಗೆ ಈ ನೀರನ್ನು ಬೇರ್ಪಡಿಸಿ ಇದನ್ನು ಒಂದು ಪಾತ್ರೆಗೆ ಹಾಕಿ ಮೇಲೆ ತೆಳುವಾಗಿರುವಂತಹ ಒಂದು ಪ್ಲಾಸ್ಟಿಕ್ ಕವರ್ ಹಾಕಿ ಬೌಲ್ ಗೆ ಕಟ್ಟಿಕೊಳ್ಳಬೇಕು ಅದರಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ ನಿಮ್ಮ ಅಡುಗೆ ಮನೆ ಹಾಗೂ ನಿಮ್ಮ ಫ್ರೆಡ್ಜ್ ಒಳಗಡೆ ಇಡುವುದರಿಂದ ಫ್ರಿಡ್ಜ್ ಒಳಗಡೆ ಉತ್ಪತ್ತಿಯಾಗುವ ಬ್ಯಾಕ್ಟೀರಿಯಗಳನ್ನು ನಾಶಪಡಿಸುತ್ತದೆ ಹಾಗೂ.

ಅಡುಗೆ ಮನೆಯಲ್ಲಿ ಬ್ಯಾಕ್ಟೀರಿಯಾಗಳು ಇದ್ದರೆ ಅವೆಲ್ಲವನ್ನು ಕೂಡ ನಾಶಪಡಿಸುವಲ್ಲಿ ಇದು ಬಹಳ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ ಹಾಗೂ ಮೇಲೆ ಹೇಳಿದಂತೆ ಫ್ರಿಡ್ಜ್ ಒಳಗೆ ಇದನ್ನು ಇಡುವುದರಿಂದ ಈರುಳ್ಳಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟೀಸ್ ಗುಣವು ಫ್ರಿಡ್ಜ್ ಒಳಗಡೆ ಇರುವ ಎಲ್ಲಾ ಬ್ಯಾಕ್ಟೀರಿಯಗಳನ್ನು ನಾಶಪಡಿಸಿ ಹಾಗೂ ಫ್ರಿಡ್ಜ್ ಒಳಗೆ ಇರುವ ಎಲ್ಲಾ ದುರ್ವಾಸನೆಯನ್ನು ಕೂಡ ಇದು ನಿವಾರಣೆ ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *