ಏನ್ ಸ್ವಾಮಿ ಹಿಂಗ್ ಬಕ್ರ ಮಾಡ್ತಾರೆ ಇವರಿಗಿಂತ ನಮ್ ಡ್ರೋಣ್ ಎಷ್ಟೋ ಮೇಲು ಬಿಡಿ...ಏನ್ ಮಾಡಿದ್ರು ಗೊತ್ತಾ ಇವರು.. - Karnataka's Best News Portal

ಏನ್ ಸ್ವಾಮಿ ಹಿಂಗ್ ಬಕ್ರ ಮಾಡ್ತಾರೆ ಇವರಿಗಿಂತ ನಮ್ಮ ಡ್ರೋಣ್ ಎಷ್ಟೋ ಮೇಲು ಬಿಡಿ||ಇತ್ತೀಚಿಗೆ ಭಾರತದಲ್ಲಿ ಕ್ರೌಡ್ ಫoಡಿಂಗ್ ಎನ್ನುವುದು ಒಂದು ನೂತನ ದಂಧೆಯಾಗಿ ಬದಲಾಗಿದೆ ಜನರ ಭಾವನೆಗಳನ್ನು ಇಟ್ಟುಕೊಂಡು ಎಲ್ಲರ ಬಳಿ ನಾನೇ ಕಾರಣಗಳನ್ನು ಒಡ್ಡಿ ಹಣವನ್ನು ಪೀಕಿ ಜನರನ್ನು ಏಮಾರಿಸಲಾಗುತ್ತಿದೆ ಯಾರಿಗೂ ವಿದೇಶದಲ್ಲಿ ನೆಲೆಸಿ ಹೋಗಿ ಓದುವುದಕ್ಕೆ ಶಿಕ್ಷಣವನ್ನು ಪಡೆಯುವ ಹಂಬಲ ಇರುತ್ತದೆ.

ಇನ್ಯಾರಿಗೊ ತಮ್ಮ ಕ್ಯಾನ್ಸರ್ ಚಿಕಿತ್ಸೆಗೆ ಹಣ ಬೇಕಾಗಿರುತ್ತದೆ ಇಂತಹ ಕಾರಣಗಳನ್ನು ಒಡ್ಡಿ ಜನರ ಬಳಿ ಹಣವನ್ನು ಲೂಟಿ ಮಾಡಲಾಗುತ್ತಿದೆ ಇದೊಂದು ವಿಧದ ದಂಧೆಯಾಗಿ ಬದಲಾಗಿ ವಿವಿಧ ಈ ಬಗೆಯ ಆಡ್ ಕ್ಯಾಂಪೇನ್ ಗಳನ್ನು ಹಮ್ಮಿಕೊಂಡು ಜನರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಈ ರೀತಿಯ ಎಲ್ಲ ಕ್ರೌಡ್ ಫಂಡಿಂಗ್ ಗಳು ಕೂಡ ಸ್ಕ್ಯಾಮ್ ಎಂದು ಹೇಳುತ್ತಿಲ್ಲ.


ಇಂತಹ ಬಹುತೇಕ ಕ್ರೌಡ್ ಫಂಡಿಂಗ್ ಟ್ರಿಕ್ ಗಳು ಫೇಕ್ ಎಂದು ಯಾವುದೇ ಮುಜುಗರ ಇಲ್ಲದೆ ಹೇಳಬಹುದು ಇವುಗಳಲ್ಲಿ ಯಾವುದು ಸ್ಕ್ಯಾಮ್ ಹಾಗೂ ಯಾವುದು ಶಾಶ್ವತ ಎಂದು ಪತ್ತೆ ಹಚ್ಚುವುದು ಇತ್ತೀಚಿನ ದಿನಗಳಲ್ಲಿ ಬಹು ಕಷ್ಟವಾಗಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕ್ರೌಡ್ ಫಂಡಿಂಗ್ ಗಳ ಇತಿಹಾಸವನ್ನು ಇವುಗಳ ಕರಾಳ ಮುಖದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿಯೋಣ.

ನೀವು ಈಗಾಗಲೇ ಕೆಲವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಕೆಲವೊಂದಷ್ಟು ವಿಡಿಯೋಗಳನ್ನು ನೋಡಿರಬಹುದು ಉದಾಹರಣೆಗೆ ಯಾರೋ ರಸ್ತೆ ಬದಿಯಲ್ಲಿ ಯಾರೋ ಒಬ್ಬ ದಿನಗೂಲಿ ವ್ಯಾಪಾರಿ ಹಣ್ಣನ್ನೋ ಸೊಪ್ಪು ತರಕಾರಿಯನ್ನೋ ಮಾರುತ್ತಾ ನಿಂತಿರುತ್ತಾನೆ ಆದರೆ ಆತನಿಗೆ ಅವತ್ತು ನಿರೀಕ್ಷಿತ ಮಟ್ಟದ ವ್ಯಾಪಾರವೇನು ನಡೆಯುವುದಿಲ್ಲ ಈ ಸಮಯದಲ್ಲಿ ಯಾರೋ ಒಬ್ಬ ಆತನ ಬಳಿ ಬಂದು ಆತನ ಬಳಿ ಇದ್ದ ನಿರ್ದಿಷ್ಟ ವಸ್ತುವೊಂದನ್ನು.

ನಿರ್ದಿಷ್ಟ ಪ್ರಮಾಣದಲ್ಲಿ ಖರೀದಿ ಮಾಡಿ ಆ ವ್ಯಾಪಾರಿಗೆ ತನ್ನ ಬಳಿ ಇದ್ದ ಎಲ್ಲಾ ಹಣವನ್ನು ಕೊಡುತ್ತಾನೆ ಆಗ ಆ ವ್ಯಾಪಾರೀ ಅಷ್ಟು ಹಣವನ್ನು ಒಟ್ಟಿಗೆ ನೋಡಿ ಎಮೋಷನಲ್ ಆಗಿ ಕಣ್ಣೀರನ್ನು ಹಾಕುತ್ತಾನೆ ಈ ವಿಡಿಯೋ ಎಷ್ಟ ನಿಜ ಹಾಗೂ ಎಷ್ಟು ಸುಳ್ಳು ಎನ್ನುವುದು ಆಮೇಲಿನ ಲೆಕ್ಕಾಚಾರ ಆದರೆ ಇದನ್ನು ಕೊಂಚ ಎಡಿಟ್ ಮಾಡಿ.

ಅದಕ್ಕೆ ಒಂದು ಸ್ಯಾಡ್ ಬ್ಯಾಗ್ರೌಂಡ್ ಮ್ಯೂಸಿಕ್ ಅನ್ನು ಹಾಕಿ ಫೇಸ್ ಬುಕ್ ಹಾಗೂ ಯೂಟ್ಯೂಬ್ ಹೊಂದಿರುವಂತಹ ಅದರ ಖಾತೆದಾರರು ಈ ಒಂದು ವಿಡಿಯೋವನ್ನು ಅಪ್ಲೋಡ್ ಮಾಡುತ್ತಾರೆ ಈ ವಿಡಿಯೋಗಾಗಿ ಒಂದು ಸಾವಿರ ಅಥವಾ ಎರಡು ಸಾವಿರ ಹಣವನ್ನು ಖರ್ಚು ಮಾಡುವ ಇವರು ಮುಂದೆ ಇದೆ ವಿಡಿಯೋಗೆ ಲಕ್ಷಾಂತರ ಹಣವನ್ನು ಕಬಳಿಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *