ಒಂದು ನಿಮಿಷ ಹೀಗೆ ಹಚ್ಚಿ ಬಿಳಿಕೂದಲನ್ನು ಅಷ್ಟು ಕಪ್ಪಾಗಿಸುತ್ತೆ ಅಂದ್ರೆ ಮತ್ತೆ ಯಾವತ್ತೂ ಮೆಹಂದಿ ಡೈ ಹಚ್ಚೋದೆ ಬೇಡ - Karnataka's Best News Portal

ಒಂದು ನಿಮಿಷ ಹೀಗೆ ಹಚ್ಚಿ ಬಿಳಿಕೂದಲನ್ನು ಅಷ್ಟು ಕಪ್ಪಾಗಿಸುತ್ತೆ ಅಂದ್ರೆ ಮತ್ತೆ ಯಾವತ್ತೂ ಮೆಹಂದಿ ಡೈ ಹಚ್ಚೋದೆ ಬೇಡ

ಒಂದು ನಿಮಿಷ ಹಚ್ಚಿ ಬಿಳಿಕೂದಲನ್ನು ಅಷ್ಟು ಕಪ್ಪಾಗಿಸುತ್ತದೆ ಅಂದ್ರೆ, ಮತ್ತೆ ಯಾವತ್ತು ಮೆಹಂದಿ, ಡೈ ಹಚ್ಚೋದೆ ಬೇಡ.
ಸಾಮಾನ್ಯವಾಗಿ ಎಲ್ಲರನ್ನೂ ಇತ್ತೀಚೆಗೆ ಕಾಡುವಂತಹ ಸಮಸ್ಯೆ ಎಂದರೆ ಅದು ಬಿಳಿಕೂದಲಿನ ಸಮಸ್ಯೆ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಒಂದು ಬಿಳಿ ಕೂದಲಿನ ಸಮಸ್ಯೆ ಕಾಡುತ್ತಾ ಇರುತ್ತದೆ ಅದಕ್ಕೋಸ್ಕರ ನಾವಿಲ್ಲಿ ತಿಳಿಸುವಂತಹ ಮನೆಮದ್ದನ್ನು ಉಪಯೋಗಿಸಿದರೆ ಬಿಳಿಕೂದಲಿನಿಂದ ನಿವಾರಣೆಯನ್ನು ಹೊಂದಬಹುದು.

ಎರಡು ಆಲೂವೆರಾ ಎಲೆಗಳನ್ನು ಮುಳ್ಳು ತೆಗೆದು ಚಿಕ್ಕ ಚಿಕ್ಕ ಪೀಸ್ ಗಳನ್ನಾಗಿ ಕಟ್ ಮಾಡಿ ಇಟ್ಟುಕೊಳ್ಳಿ, ಇದರಲ್ಲಿ ಇರುವಂತಹ ವಿಟಮಿನ್ ಮಿನರಲ್ಸ್ ಹಾಗೆ ಇನ್ನು ಅನೇಕ ಪೋಷಕಾಂಶಗಳು ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಆಂಟಿಇನ್ಫ್ಲುಮೇಟರಿ, ಆಂಟಿಫಂಗಲ್ ಪ್ರಾಪರ್ಟೀಸ್ ಇದರಲ್ಲಿ ಇರುವುದರಿಂದ ತುಂಬಾ ಹೇರ್ ಫಾಲ್ ಆಗುವಂತಹವರಿಗೆ ಇದು ತುಂಬಾ ಒಳ್ಳೆಯದು ಇನ್ಫೆಕ್ಸನನ್ನು ತಡೆಗಟ್ಟುತ್ತದೆ.

ನಂತರ ಇದಕ್ಕೆ ಕಪ್ಪು ಜೀರಿಗೆ ಬೇಕಾಗುತ್ತದೆ ಈ ಒಂದು ಕಪ್ಪು ಜೀರಿಗೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ಬಿಳಿಕೂದಲನ್ನು ಕಪ್ಪಾಗಿಸಲು ಇದು ತುಂಬಾ ಸಹಾಯಕ ಈ ಒಂದು ಕಪ್ಪು ಜೀರಿಗೆಯನ್ನು ಚೆನ್ನಾಗಿ ಪೌಡರ್ ಮಾಡಿ ತೆಗೆದುಕೊಳ್ಳಬೇಕು ಕೂದಲು ಬುಡದಿಂದ ಗಟ್ಟಿಯಾಗಿ ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಈ ಒಂದು ಮನೆ ಮದ್ದನ್ನು ಮಾಡಲು ಮೊದಲು ಒಂದು ಪಾತ್ರೆಗೆ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಕಟ್ ಮಾಡಿ ಇಟ್ಟುಕೊಂಡಿರುವಂತಹ ಆಲುವೆರಾ, ಒಂದು ಟೇಬಲ್ ಸ್ಪೂನ್ ನಷ್ಟು ಮೆಂತೆ ಕಾಳು, ಒಂದು ಟೇಬಲ್ ಸ್ಪೂನ್ ನಷ್ಟು ಕಪ್ಪು ಜೀರಿಗೆ ಪೌಡರ್ ಈ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ನಾವು ಹಾಕಿರುವಂತಹ ಎಲ್ಲಾ ಪದಾರ್ಥಗಳು ಎಣ್ಣೆಯಲ್ಲಿ ಚೆನ್ನಾಗಿ ಅಂಶ ಬಿಡುವ ತನಕ ಲೋ ಫ್ಲೇಮ್ ನಲ್ಲಿ ಇಟ್ಟು ಕಾಯಿಸಿಕೊಳ್ಳಿ. ಈ ಒಂದು ಎಣ್ಣೆ ತಣ್ಣಗಾದ ನಂತರ ಇದನ್ನು ಚೆನ್ನಾಗಿ ಶೋಧಿಸಿಕೊಳ್ಳಿ, ಈ ಒಂದು ಎಣ್ಣೆಯನ್ನು ನೀವು ಮೂರು ತಿಂಗಳಗಳ ಕಾಲ ಉಪಯೋಗ ಮಾಡಬಹುದು ಕೂದಲಿನ ಬುಡದಿಂದ ತುದಿಯವರೆಗೂ ಚೆನ್ನಾಗಿ ಮಸಾಜ್ ಮಾಡಿ ನಂತರ ಒಂದು ಗಂಟೆಗಳ ಕಾಲ ಹಾಗೆ ಬಿಟ್ಟು ಸ್ನಾನ ಮಾಡಿಕೊಳ್ಳಬಹುದು.

ನೀವು ತಲೆಗೆ ಯಾವಾಗೆಲ್ಲ ಎಣ್ಣೆ ಹಚ್ಚುತ್ತೀರೋ ಆಗ ಈ ಒಂದು ಎಣ್ಣೆಯನ್ನು ಹಚ್ಚಿ ಉಪಯೋಗ ಮಾಡುವುದರಿಂದ ನಿಮ್ಮ ಕೂದಲು ನ್ಯಾಚುರಲ್ ಆಗಿ ಕಪ್ಪಾಗಲು ಶುರು ಮಾಡುತ್ತದೆ ದಟ್ಟವಾಗಿ ಉದ್ದವಾಗಿ ಮತ್ತು ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಯಾವುದೇ ಕೆಮಿಕಲ್ ಡೈ ಬಳಸುವುದರ ಬದಲು ನೀವೇ ನ್ಯಾಚುರಲ್ ಆಗಿ ಈ ಒಂದು ಮನೆ ಮದ್ದನ್ನು ಉಪಯೋಗಿಸಿ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

[irp]