ಮಕರ ರಾಶಿ ಫೆಬ್ರವರಿಯಲ್ಲಿ ಹೀಗೆಲ್ಲಾ ನಡೆಯುತ್ತೆ ಅಂದ್ರೆ ನೀವು ಆಶ್ಚರ್ಯ ಪಡ್ತೀರ..ಮಕರ ರಾಶಿ ಮಾಸ ಫಲ - Karnataka's Best News Portal

ಮಕರ ರಾಶಿ ಫೆಬ್ರವರಿಯಲ್ಲಿ ಹೀಗೆಲ್ಲಾ ನಡೆಯುತ್ತೆ ಅಂದ್ರೆ ನೀವು ಆಶ್ಚರ್ಯ ಪಡ್ತೀರ..ಮಕರ ರಾಶಿ ಮಾಸ ಫಲ

ಮಕರ ರಾಶಿ ಫೆಬ್ರವರಿ ಮಾಸ ಭವಿಷ್ಯ||ಮಕರ ರಾಶಿಗೆ ಶನಿಯ ಪ್ರಭಾವ ಬಹಳ ದಿನ ಇತ್ತು ಆದರೆ ಈಗ ಸ್ವಲ್ಪ ದಿನದ ಮಟ್ಟಿಗೆ ಅದು ಇನ್ನೇನು ನಿಮ್ಮ ರಾಶಿಯನ್ನು ಬಿಟ್ಟು ಹೋಗುವಂತಹ ಸಮಯ ಬಂದಾಗಿದೆ ಅಂದರೆ ಈ ತಿಂಗಳೇ ನಿಮ್ಮನ್ನು ಬಿಟ್ಟು ಹೋಗಬಹುದು ಅಥವಾ ಫೆಬ್ರವರಿ ತಿಂಗಳಲ್ಲಿ ನಿಮ್ಮ ರಾಶಿಯನ್ನು ಬಿಟ್ಟು ಶನಿ ಹೋಗಬಹುದು. ಹಾಗೂ ಈ ವಿಷಯ ಪ್ರತಿಯೊಬ್ಬರಿಗೂ ತಿಳಿದಿರುವಂತೆ.

ಅವರವರ ಕರ್ಮಾನುಸಾರಕ್ಕೆ ತಕ್ಕಂತೆ ಅವರಿಗೆ ಶನಿಯು ತನ್ನ ಪ್ರಭಾವವನ್ನು ತೋರುತ್ತಾನೆ ಹಾಗೂ ಅದರಂತೆ ಎಷ್ಟು ದಿನಗಳವರೆಗೆ ಇರಬೇಕು ಎಂಬುದನ್ನು ಕೂಡ ಶನಿ ನಿರ್ಧಾರ ಮಾಡುತ್ತಾನೆ. ಕೆಲವೊಬ್ಬರು ಶನಿಯ ಪ್ರಭಾವ ಶನಿ ನಮಗೆ ಯಾವಾಗಲೂ ಕೆಟ್ಟದ್ದನ್ನೇ ಮಾಡುತ್ತಾನೆ ಎಂದುಕೊಳ್ಳುವುದು ತಪ್ಪು ಬದಲಿಗೆ ನಿಮ್ಮ ಕರ್ಮಗಳಿಗೆ ಅನುಸಾರವಾಗಿ.


ಅವೆಲ್ಲವೂ ಕೂಡ ಮುಗಿದ ನಂತರ ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಅಂದರೆ ನೀವು ಕೆಲವೊಂದಷ್ಟು ವಿಷಯಗಳಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತೀರಿ. ಈ ಶನಿಯಿಂದ ನಿಮಗೆ ಹಿಂದಿನ ದಿನಗಳಲ್ಲಿ ಏನು ಶತ್ರುಭಾಧೆ ಉಂಟಾಗಿತ್ತೋ ಅವೆಲ್ಲವೂ ಕೂಡ ಫೆಬ್ರವರಿ ತಿಂಗಳಲ್ಲಿ ನಾಶವಾಗಿ ಈ ಒಂದು ಗ್ರಹ ನಿಮಗೆ ಶತ್ರುನಾಶವನ್ನು ಮಾಡುತ್ತಾನೆ ಆ ಭಯಗಳೆಲ್ಲವನ್ನು ಕೂಡ ತೆಗೆದು ಹಾಕುತ್ತಾನೆ.

ಅದಕ್ಕೂ ಮುನ್ನ ನಿಮಗೆ ಕೆಲವೊಂದಷ್ಟು ಒಳ್ಳೆಯ ವಿಚಾರವಾಗಿ ಯಾವುದೆಲ್ಲ ಘಟನೆಗಳು ನಡೆಯುತ್ತವೆ ಮುಂದೆ ನಡೆಯುತ್ತದೆ ಎಂಬ ವಿಷಯವನ್ನು ನೋಡುವುದಾದರೆ 7ನೇ ತಾರೀಖು ನಿಮ್ಮ ವ್ಯಯ ಭಾವದಲ್ಲಿ ಇದ್ದಂತಹ ಬುಧ ಗ್ರಹ ನಿಮ್ಮ ರಾಶಿಗೆ ಬರುತ್ತದೆ. ಇದರಿಂದ ನಿಮಗೆ ಏನಾದರೂ ಒಂದಷ್ಟು ಅವಮಾನ ನೋವುಗಳನ್ನು ಅನುಭವಿಸುತ್ತಿದ್ದರೆ ಅಥವಾ ಏನಾದರೂ ಸೋಲಿನ ಭೀತಿ ಕಾಡುತ್ತಿದ್ದರೆ ಅವೆಲ್ಲವುಗಳಿಂದ ನಿಮಗೆ ಮುಕ್ತಿ ಸಿಗುತ್ತದೆ.

See also  ಕಲಶದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೋ ಅಶುಭವೋ ಯಾವ ರೀತಿ ಫಲ ನೋಡಿ

ಇದರಿಂದ ನಿಮಗೆ ಸ್ವಲ್ಪ ಹಣ ಖರ್ಚಾದರೂ ಕೂಡ ಅದರಿಂದ ಒಳ್ಳೆಯ ಬೆಳವಣಿಗೆ ನಿಮಗೆ ಉಂಟಾಗುತ್ತದೆ. ಹಾಗೂ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ತೊಂದರೆಗಳು ಉಂಟಾಗಿದ್ದರೆ ಅಂದರೆ ನೆಗಡಿ ಶೀತ ಜ್ವರ ಏನಾದರೂ ಉಂಟಾಗಿದ್ದರೆ ಹಾಗೂ ಅತಿಯಾದ ಉಷ್ಣ ಏನಾದರೂ ಅನುಭವಿಸುತ್ತಿದ್ದರೆ ಅದು ಕೂಡ ದೂರವಾಗುತ್ತದೆ ಸೂರ್ಯ ನಿಮ್ಮ ರಾಶಿಯಿಂದ ಎರಡನೇ ಮನೆಗೆ ಹೋದಾಗ ಆ ಬೆಳವಣಿಗೆ ನಡೆಯುವುದು ಫೆಬ್ರವರಿ 13 ನೇ ತಾರೀಖಿಗೆ.

ಮಕರ ರಾಶಿಯವರಿಗೆ ಸೂರ್ಯ ಸ್ವಲ್ಪಮಟ್ಟಿಗೆ ಒಳ್ಳೆಯದಲ್ಲ ಆದರೆ ಬುಧ ಸ್ವಲ್ಪ ಮಟ್ಟಿಗೆ ಶುಭಗ್ರಹ ಒಂದು ಮಟ್ಟಿಗೆ ಸೂರ್ಯ ದೂರ ಹೋಗುವುದು ಸ್ವಲ್ಪ ಬುಧ ಮಿತ್ರನಾಗಿ ಹತ್ತಿರ ಬರುವುದು ಇವೆರಡೂ ಕೂಡ ನಿಮಗೆ ಒಂದು ರೀತಿಯ ಧನಾತ್ಮಕ ವಿಷಯಗಳನ್ನು ತರುತ್ತದೆ ಎಂದೇ ಹೇಳಬಹುದು. ನಿಮ್ಮ ಮಾತಿನಿಂದ ನಡೆಯಬೇಕಾದಂತ ಕೆಲಸಗಳು ಫೆಬ್ರವರಿ 15ರ ತನಕ ಮಾಡುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]