ಮನೆಯಲ್ಲಿ ಯಾವ ತುಳಸಿ ಬೆಳೆಸಿದರೆ ಮನೆಗೆ ಶುಭ ಗೊತ್ತಾ ? ತುಳಸಿ ಗಿಡ ಇಲ್ಲ ಅಂದರೆ ಏನಾಗುತ್ತೆ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮನೆಯಲ್ಲಿ ತುಳಸಿ ಇರಬೇಕು ರಾಮ ತುಳಸಿ ಅಥವಾ ಕೃಷ್ಣ ತುಳಸಿ,? ಮನೆಯಲ್ಲಿ ತುಳಸಿ ಗಿಡ ಬೆಳೆಸಿದರೆ ಏನು ಲಾಭ.
ಬಹಳ ಮುಖ್ಯವಾಗಿ ಮನೆಯ ಮುಂದೆ ತುಳಸಿ ಗಿಡ ಎನ್ನುವಂತಹದ್ದು ಇರಬೇಕು. ವೈಜ್ಞಾನಿಕ, ದೈವಿಕ, ಆಧ್ಯಾತ್ಮಿಕ, ವೈಚಾರಿಕ ಎಲ್ಲಾ ತರಹದರಲ್ಲೂ ಯಶಸ್ಸನ್ನು ಕೊಡುವಂತಹ ಒಂದು ದೈವ ವೃಕ್ಷ ಎಂದರೆ ಅದು ತುಳಸಿ ಗಿಡ, ತುಳಿಸಿ ಗಿಡ ಮನೆಯ ಮುಂದೆ ಇರಬೇಕು. ಹಳ್ಳಿಗಳಲ್ಲಿ ಸಾಮಾನ್ಯವಾಗಿ ತುಳಸಿ ಗಿಡ ಇದ್ದೇ ಇರುತ್ತದೆ ಇದು ಆಯುರ್ವೇದ ಸತ್ವವನ್ನು ಗುಣಗಳನ್ನು ಒಳಗೊಂಡಿರುತ್ತದೆ.

ಮಕ್ಕಳು ಕಫ ಇದ್ದರೆ ಶೀತವಾಗಿದ್ದರೆ ಕೆಮ್ಮು ಇದ್ದರೆ ತುಳಸಿ ಎಲೆಗಳನ್ನು ತೊಳೆದು ಚೆನ್ನಾಗಿ ಹಿಂಡಿ ರಸವನ್ನು ತೆಗೆದು ಅದನ್ನು ಮಕ್ಕಳಿಗೆ ಕೊಡಿಸುವುದರಿಂದ ಸಾಕಷ್ಟು ತೊಂದರೆಗಳು ನಿವಾರಣೆ ಸಿಗುತ್ತದೆ. ಇದೊಂದು ಔಷಧೀಯ ಗುಣಗಳನ್ನು ಹೊಂದಿರುವಂತಹ ಗಿಡ ಔಷಧಕ್ಕೆ ಉಪಯೋಗಿಸುವಂತಹ ಗಿಡವನ್ನು ಪೂಜೆ ಮಾಡಬಾರದು ಯಾವ ಒಂದು ತುಳಸಿ ಗಿಡಕ್ಕೆ ಪೂಜೆ ಮಾಡುತ್ತಾ ಇರುತ್ತೀರೋ ಆ ಒಂದು ಗಿಡದ ಎಲೆಗಳನ್ನು ಕಿತ್ತು ತಿನ್ನಬಾರದು.

ಹಾಗೆಯೇ ಕಿತ್ತು ಅರ್ಚನೆಗೆ ಉಪಯೋಗ ಮಾಡಬಾರದು ಇದು ಬಹಳ ಮುಖ್ಯವಾದುದು. ನಿಮ್ಮ ತುಳಸಿ ಗಿಡದಲ್ಲಿ ಎಲೆಗಳು ಜಾಸ್ತಿ ಇದ್ದರೆ ಅದನ್ನು ಕಿತ್ತು ದೇವಸ್ಥಾನದಲ್ಲಿ ಅರ್ಚನೆಗೆ ಕೊಡಬಹುದು ಮನೆಯಲ್ಲಿ ಪೂಜೆಗೆ ಉಪಯೋಗ ಮಾಡಬಾರದು. ಎರಡು ರೀತಿಯ ತುಳಸಿ ಗಿಡಗಳನ್ನು ನಾವು ನೋಡಬಹುದು ಅಚ್ಚ ಹಸಿರಾಗಿರುವಂತಹ ತುಳಿಸಿ ಇದು ರಾಮ ತುಳಸಿ ಆಗಿರುತ್ತದೆ.

ಹಾಗೆಯೇ ಸ್ವಲ್ಪ ಕಂದು ಬಣ್ಣ ಕಪ್ಪಗೆ ಇರುವಂತಹ ತುಳಸಿಯು ಕೃಷ್ಣ ತುಳಸಿ ಆಗಿರುತ್ತದೆ, ಕೃಷ್ಣ ತುಳಸಿ ಪೂಜೆಗೆ ಅತ್ಯಂತ ಶ್ರೇಷ್ಠವಾದಂತದ್ದು. ಈ ಒಂದು ಕೃಷ್ಣ ತುಳಸಿಯನ್ನು ಚೆನ್ನಾಗಿ ಬೆಳೆಸಬೇಕು ನಿತ್ಯ ಪ್ರದಕ್ಷಣೆ ಮಾಡಬೇಕು ಹಾಗೆಯೇ ಪೂಜೆ ಮಾಡಬೇಕು. ನಮ್ಮ ಸುತ್ತಮುತ್ತಲಿನ ಗಾಳಿ ಕೆಟ್ಟು ಹೋದರೆ ಈ ಒಂದು ತುಳಸಿ ಗಿಡ ಗಾಳಿಯನ್ನು ತಿಳಿಗೊಳಿಸುತ್ತದೆ ಶುದ್ಧ ಮಾಡುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಮನೆಯ ಮುಂದೆ ಹಾಕುವುದನ್ನು ಮರೆಯಬಾರದು ಕೆಲವೊಬ್ಬರ ಮನೆಯಲ್ಲಿ ತುಳಸಿ ಗಿಡಗಳು ಬೆಳೆಯುವುದಿಲ್ಲ. ತುಳಸಿ ಗಿಡಕ್ಕೆ ಚೆನ್ನಾಗಿ ಬಿಸಿಲು ಬರಬೇಕು ಅಂತಹ ಸ್ಥಳಗಳಲ್ಲಿ ತುಳಸಿ ಗಿಡ ತುಂಬಾ ಚೆನ್ನಾಗಿ ಬರುತ್ತದೆ ಚೆನ್ನಾಗಿ ಚಿಗುರುತ್ತದೆ. ಯಾವುದೇ ಕಾರಣಕ್ಕೂ ಪೂಜೆ ಮಾಡುವಂತಹ ತುಳಸಿ ಗಿಡದಿಂದ ಎಲೆಯನ್ನು ತೆಗೆದು ಎಂಜಲು ಮಾಡಬಾರದು ತುಳಸಿಯಲ್ಲಿ ದೇವರನ್ನು ಕಾಣಬೇಕು.

ತುಳಸಿ ಹೇಗೆ ವೃದ್ಧಿಯಾಗುತ್ತಾ ಇರುತ್ತದೆ ಹಾಗೆಯೇ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ವೃದ್ಧಿಯಾಗುತ್ತಾ ಇರುತ್ತದೆ. ಕಾಲಿನ ಧೂಳು ಗಿಡದ ಮೇಲೆ ಬೀಳಬಾರದು ಆದಕ್ಕಾಗಿಯೇ ಯಜಮಾನನ ಮೊಣಕಾಲಿಗಿಂತ ತುಳಸಿ ಗಿಡ ಎತ್ತರದಲ್ಲಿ ಇರಬೇಕು ಎನ್ನುವಂತಹ ಪ್ರತೀತಿಯೂ ಸಹ ಇದೆ. ಹೆಣ್ಣು ಮಕ್ಕಳು ತುಳಸಿ ಗಿಡವನ್ನು ಪ್ರದಕ್ಷಣೆ ಮಾಡುವುದರಿಂದ ಗರ್ಭಕ್ಕೆ ಸಂಬಂಧಪಟ್ಟ ಯಾವುದೇ ರೀತಿಯಾದಂತಹ ತೊಂದರೆಗಳು ಬರುವುದಿಲ್ಲ.

Leave a Reply

Your email address will not be published. Required fields are marked *