ಈ ದೇವರಲ್ಲಿ ಬೇಡಿಕೊಂಡರೆ ಸಕ್ಕರೆ ಕಾಯಿಲೆ ಸಂಪೂರ್ಣ ಗುಣವಾಗುತ್ತದೆ‌..ಚಮತ್ಕಾರ ಮಾಡುವ ದೇವರು - Karnataka's Best News Portal

ಮಧುಮೇಹ ಗುಣಪಡಿಸುವ ವಿಸ್ಮಯಕಾರಿ ದೇಗುಲವಿದು||
ನಮ್ಮ ದೇಶದಲ್ಲಿ ಒಂದೊಂದು ದೇವಾಲಯ ಒಂದೊಂದು ವಿಚಾರದಲ್ಲಿ ಪ್ರಸಿದ್ಧಿಯನ್ನು ಪಡೆದಿರುತ್ತದೆ ಕೆಲವು ದೇವಾಲಯಗಳು ಸಂತಾನ ಹೀನತೆಯ ನಿವಾರಣೆಗೆ ಪ್ರಸಿದ್ಧಿಯನ್ನು ಪಡೆದಿದ್ದರೆ ಮತ್ತು ಇನ್ನು ಹಲವಾರು ದೇವಾಲಯಗಳು ಕಂಕಣ ಭಾಗ್ಯವನ್ನು ಕರುಣಿಸುವುದಕ್ಕೆ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಹಾಗೂ ಇನ್ನೂ ಕೆಲವು ದೇವಾಲಯ ಗಳಿಗೆ ತೆರಳಿದರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಹೀಗೆ ಒಂದೊಂದು ದೇವರು ಹಾಗು ಒಂದೊಂದು ದೇವಾಲಯಗಳು ತನ್ನದೇ ಆದಂತಹ ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತದೆ ಅದೇ ರೀತಿ ಇಲ್ಲೊಂದು ವಿಶಿಷ್ಟವಾದ ದೇವಾಲಯವಿದೆ ಈ ದೇವಾಲಯ ತನ್ನದೇ ಆದಂತಹ ವೈಶಿಷ್ಟ್ಯತೆಯಿಂದ ಕೂಡಿದೆ ಈ ದೇವಸ್ಥಾನಕ್ಕೆ ಮಧುಮೇಹ ಅಂದರೆ ಸಕ್ಕರೆ ಕಾಯಿಲೆ ಗುಣಪಡಿಸುವ ಶಕ್ತಿ ಹೊಂದಿದೆಯಂತೆ. ಹಾಗಂತ ನಾವು ಇದನ್ನು ಹೇಳುತ್ತಿಲ್ಲ ಬದಲಿಗೆ ಈ ದೇವಾಲಯಕ್ಕೆ ಹೋಗಿ.

ಅಲ್ಲಿ ದೇವರ ದರ್ಶನವನ್ನು ಮಾಡಿಕೊಂಡು ಬರುವುದರ ಮುಖಾಂತರ ಹಾಗೂ ಸ್ವಲ್ಪ ದಿನಗಳ ನಂತರ ತಮ್ಮ ಸಕ್ಕರೆ ಕಾಯಿಲೆಯನ್ನು ಗುಣ ಪಡಿಸಿ ಕೊಂಡಿರುವವರು ಈ ಒಂದು ವಿಚಾರವನ್ನು ಬಹಿರಂಗಪಡಿಸುತ್ತಿ ದ್ದಾರೆ. ಹಾಗಾದರೆ ಇಷ್ಟೆಲ್ಲ ಚಮತ್ಕಾರಿ ಗುಣಗಳನ್ನು ಹೊಂದಿರುವಂತಹ ಈ ದೇವಾಲಯ ಎಲ್ಲಿದೆ ಹಾಗೂ ಇದರ ವಿಳಾಸ ಏನು ಹಾಗೂ ಯಾವ ವಿಧಾನದಲ್ಲಿ ಈ ಒಂದು ದೇವಸ್ಥಾನಕ್ಕೆ ಹೋಗಿ ತಮ್ಮಲ್ಲಿರುವಂತಹ ಸಕ್ಕರೆ ಕಾಯಿಲೆಯನ್ನು ದೂರ ಮಾಡಿಕೊಳ್ಳ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.

ಈ ವಿಶಿಷ್ಟವಾದoತಹ ಅಪರೂಪವಾದಂತಹ ದೇವಾಲಯ ಇರುವುದು ನಮ್ಮ ಪಕ್ಕದ ರಾಜ್ಯವಾದ ತಮಿಳುನಾಡಿನ ತಾಂಜಾ ಊರಿನ ಸಮೀಪದ ತಿರುವನೂರಿಗೆ ತೆರಳುವಾಗ ಅಲ್ಲಿಂದ ಸುಮಾರು 25 ಕಿ.ಮೀ ಕ್ರಮಿಸುವಾಗ ಕೋವಿಲ್ ವೆನ್ನೈ ಎಂಬ ಪುಟ್ಟ ಗ್ರಾಮ ದೊರೆಯುತ್ತದೆ ಈ ಗ್ರಾಮದಲ್ಲಿ ಒಂದು ಶಿವನ ಹಳೆಯ ದೇವಾಲಯವಿದೆ. ಈ ದೇವಾಲಯ ಸುಮಾರು ಸಾವಿರ ವರ್ಷಗಳ ಪುರಾಣವನ್ನು ಹೊಂದಿದೆ.

ಈ ದೇವಾಲಯದಲ್ಲಿ ನೆಲೆಸಿರುವಂತಹ ಶಿವ ಪರಮಾತ್ಮರನ್ನು ವೆನ್ನಿ ಕರಂಬೇಶ್ವರರ್ ಎಂದು ಕರೆಯಲಾಗುತ್ತದೆ. ವೆನ್ನಿ ಕರಂಬೇಶ್ವರರ್ ದೇವರು ಸಕ್ಕರೆ ಕಾಯಿಲೆಯನ್ನು ಗುಣಪಡಿಸುವ ದೇವರು ಎಂದೇ ಪ್ರಸಿದ್ಧಿಯನ್ನು ಪಡೆದಿದೆ ಈ ದೇವರಿಗೆ ಈ ಹೆಸರು ಬರಲು ಪ್ರಮುಖವಾದಂತಹ ಕಾರಣ ಇದೆ ತಮಿಳು ಭಾಷೆಯಲ್ಲಿ ಕರಂಬು ಎಂದರೆ ಕಬ್ಬು ಎಂದರ್ಥ ದೇವಾಲಯದಲ್ಲಿರುವಂತಹ ಶಿವಲಿಂಗವು ಉದ್ಭವ ಶಿವ ಲಿಂಗವಾಗಿದ್ದು.

ಹಿಂದಿನ ಕಾಲದಲ್ಲಿ ಶಿವಲಿಂಗವು ಕಬ್ಬು ಹಾಗೂ ವೆನ್ನಿ ವೃಕ್ಷಗಳಿಂದ ಮುಚ್ಚಿ ಹೋಗಿತ್ತು ಶಿವಭಕ್ತರಾದಂತಹ ಇಬ್ಬರು ಋಷಿ ವರ್ಯರು ಈ ಸ್ಥಳಕ್ಕೆ ಭೇಟಿ ನೀಡಿ ತಮ್ಮ ದಿವ್ಯ ದೃಷ್ಟಿಯಿಂದ ವೃಕ್ಷದ ಕೆಳಗೆ ಇರುವಂತಹ ಶಿವಲಿಂಗದ ಉಪಸ್ಥಿತಿಯನ್ನು ಕಂಡುಹಿಡಿಯುತ್ತಾರೆ! ನಂತರ ವೃಕ್ಷಗಳನ್ನು ಸರಿಸಿ ನೋಡಿದಾಗ ಋಷಿಗಳಿಗೆ ಶಿವಲಿಂಗ ಗೋಚರಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *