ತಿಮ್ಮಪ್ಪ ಶೆಟ್ಟಿ ಹೋಟೆಲ್ ಒಂದು ದಿನಕ್ಕೆ 40000 ಇಡ್ಲಿಗಳು 18000 ವಡೆಗಳು ಮಾರಾಟ. - Karnataka's Best News Portal

ತಿಮ್ಮಪ್ಪ ಶೆಟ್ಟಿ ಹೋಟೆಲ್ ಒಂದು ದಿನಕ್ಕೆ 40,000 ಇಡ್ಲಿ 18,000 ವಡಾ ಮಾರಾಟ ಇವರು ಭಾರತದ ಇಡ್ಲಿ ರಾಜ!!
ಭಾರತದ ಹೋಟೆಲ್ ಗಳಲ್ಲಿ ಅತಿ ಹೆಚ್ಚು ಸೇವನೆ ಮಾಡುವುದು ಮೂರು ಉಪಹಾರಗಳು ಮೊದಲನೆಯದು ಇಡ್ಲಿ ವಡಾ ಎರಡನೆಯದು ಮಸಾಲ್ ದೋಸೆ ಮೂರನೆಯದು ಉಪ್ಪಿಟ್ಟು. ಭಾರತದಲ್ಲಿ ಪ್ರತಿದಿನ 58 ಕೋಟಿ ಜನರು ಇಡ್ಲಿ ವಡಾ ಸೇವನೆ ಮಾಡುತ್ತಾರೆ. ಪ್ರತಿದಿನ ದೇಶದಾದ್ಯಂತ

322 ಕೋಟಿ ಇಡ್ಲಿ ವಡಾ ತಯಾರಾಗುತ್ತದೆ ಪ್ರಪಂಚದಲ್ಲಿ ಒಂದು ಆಹಾರವನ್ನು ಇಷ್ಟು ದೊಡ್ಡ ಮಟ್ಟಕ್ಕೆ ಇಷ್ಟಪಡುತ್ತಾರೆ ಎಂದರೆ ಅದು ಇಡ್ಲಿಯ ವಿಶೇಷತೆ ಭಾರತದಲ್ಲಿ ಇಡ್ಲಿ ವಡಾ ಫೇಮಸ್ ಆಗುವುದಕ್ಕೆ ಬಲವಾದಂತಹ ಕಾರಣ ಏನಪ್ಪಾ ಅಂದರೆ ಇಡ್ಲಿ ಆರೋಗ್ಯಕ್ಕೆ ಒಳ್ಳೆಯದು ಹಾಗೂ ರುಚಿ ಅದ್ಭುತ ಇಡ್ಲಿ ಮತ್ತು ವಡೆಯನ್ನು ಸೇವನೆ ಮಾಡಲು ಹೋಟೆಲ್ ನಲ್ಲಿ ಕಾಯುವ ಅವಶ್ಯಕತೆ ಇಲ್ಲ.


ಕೇವಲ ಐದು ನಿಮಿಷದಲ್ಲಿ ತಿಂದು ಹೋಟೆಲ್ ನಲ್ಲಿ ದುಡ್ಡು ಕೊಟ್ಟು ಹೋಗಬಹುದು ಆದರೆ ಮಸಾಲ ದೋಸೆ ಆರ್ಡರ್ ಮಾಡಿದರೆ ಅಂದಾಜು 15 ನಿಮಿಷ ಕಾಯಿಲೇ ಬೇಕು. ದೇಶದಲ್ಲಿ ಅತಿ ಹೆಚ್ಚು ಇಡ್ಲಿ ಮಾರಾಟ ಮಾಡುವ ಒಂದು ಹೋಟೆಲ್ ಇದೆ ಇದರ ಜೊತೆ ಇನ್ನೊಂದು ಖುಷಿಯ ವಿಚಾರ ಏನು ಎಂದರೆ ಈ ಹೋಟೆಲ್ ನಡೆಸುತ್ತಿರುವವರು ಕನ್ನಡದವರು.

ಇವರನ್ನು ಭಾರತ ದೇಶದ ಇಡ್ಲಿ ಕಿಂಗ್ ಎಂದು ಕರೆಯುತ್ತಾರೆ ಒಂದು ದಿನದಲ್ಲಿ ಇವರ ಹೋಟೆಲ್ ನಲ್ಲಿ 40,000 ಇಡ್ಲಿ 18,000 ವಡಾ ಮಾರಾಟ ಆಗುತ್ತದೆ.ಈ ಇಡ್ಲಿ ಹೋಟೆಲ್ ಇರುವುದು ನಮ್ಮ ಕರ್ನಾಟಕದ ಪಕ್ಕದಲ್ಲಿ ಇರುವ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ನಗರದಲ್ಲಿ ಸಾಂಗ್ಲಿ ಇರುವುದು ಮಹಾರಾಷ್ಟ್ರ ಕರ್ನಾಟಕ ಬಾರ್ಡರ್ ನಲ್ಲಿ. ಈ ಸಾಂಗ್ಲಿ ನಗರದಲ್ಲಿ ನೆಲೆಸಿರುವ.

ನಮ್ಮ ಕರ್ನಾಟಕದ ತಿಮ್ಮಪ್ಪ ಶೆಟ್ಟಿ ಇವರ ಇಡ್ಲಿ ರುಚಿ ಸವಿಯಲು ಪ್ರಪಂಚದಾದ್ಯಂತ ಜನರು ಬರುತ್ತಾರೆ ಇವರ ಇಡ್ಲಿ ರುಚಿಯನ್ನು ಸವಿಯಲು ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಅತಿ ಹೆಚ್ಚು ಜನರು ಬರುತ್ತಾರೆ ತಿಮ್ಮಪ್ಪ ಶೆಟ್ಟಿ ಇವರ ಹೋಟೆಲ್ ಹೆಸರು ಕೇಳಿದರೆ ಎಂಥವರಿಗೆ ಆದರೂ ಒಂದು ಕ್ಷಣ ಖುಷಿಯಾಗುತ್ತದೆ ಇವರ ಹೋಟೆಲ್ ಹೆಸರು ಇಡ್ಲಿ ವಡಾ ಮಾರ್ಕೆಟ್.

ಜನರು ಮಾರ್ಕೆಟ್ ರೀತಿಯಲ್ಲಿ ಈ ಹೋಟೆಲ್ ನಲ್ಲಿ ತುಂಬಿರುತ್ತಾರೆ ಭಾರತ ದೇಶದಲ್ಲಿ ಲೋಟದ ಆಕಾರ ಇಡ್ಲಿ ಶುರು ಮಾಡಿದ ಏಕೈಕ ವ್ಯಕ್ತಿ ಇವರು ಸಾಂಗ್ಲಿಯಲ್ಲಿ ಇವರನ್ನು ಇಡ್ಲಿ ಸಾಹುಕಾರ ಎಂದೇ ಕರೆಯುತ್ತಾರೆ. ಪ್ರತಿ ದಿನ ಬೆಳಗ್ಗಿನ ಜಾವ 4:30ಕ್ಕೆ ಅಂಗಡಿ ತೆಗೆಯುತ್ತದೆ ಮಧ್ಯರಾತ್ರಿ 11:30ಕ್ಕೆ ಅಂಗಡಿ ಮುಚ್ಚಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *