ಅದ್ಬುತ ಪ್ರತಿಭೆ ಇದ್ರೂ ಸೋತು ಹೋದ ನಟರು ಇವರು ಈ ಲಿಸ್ಟಲ್ಲಿ ಯಾರೆಲ್ಲ ಇದ್ದಾರೆ ಗೊತ್ತಾ ಒಂದು ಕಾಲದ ಟಾಪ್ ಹೀರೋಗಳ ಇವತ್ತಿನ ಸ್ಥಿತಿ ನೋಡಿ. » Karnataka's Best News Portal

ಅದ್ಬುತ ಪ್ರತಿಭೆ ಇದ್ರೂ ಸೋತು ಹೋದ ನಟರು ಇವರು ಈ ಲಿಸ್ಟಲ್ಲಿ ಯಾರೆಲ್ಲ ಇದ್ದಾರೆ ಗೊತ್ತಾ ಒಂದು ಕಾಲದ ಟಾಪ್ ಹೀರೋಗಳ ಇವತ್ತಿನ ಸ್ಥಿತಿ ನೋಡಿ.

ಅದ್ಭುತ ಪ್ರತಿಭೆ ಇದ್ದರು ಕೂಡ ಗೆಲ್ಲಲಾಗದ ಸಿನಿಮಾ ನಾಯಕರು, ಇವರು ಎಡವಿದ್ದಲ್ಲಿ.ಬಣ್ಣದ ಲೋಕವನ್ನು ಜೂಜಿನ ಅಡ್ಡ ಎಂದೇ ಕರೆಯಲಾಗುತ್ತದೆ ಇಲ್ಲಿ ಯಾರ ಯಾರ ಅದೃಷ್ಟ ಹೇಗಿರುತ್ತದೆ ಎನ್ನುವುದು ಖಚಿತವಾಗಿ ತೀರ್ಮಾನ ಮಾಡುವುದು ಕಷ್ಟ ಇಲ್ಲಿ ಯಾರು ಬೇಕಾದರೂ ಹೇಗೆ ಬೇಕಾದರೂ ಏಕೇಕಿ ಸ್ಟಾರ್ ಆಗಲು ಸಾಧ್ಯವಿದೆ ಆದರೆ ಈ ಒಂದು ಸ್ಟಾರ್‌ಡಮ್ ಅನ್ನು ಕಾಯ್ದುಕೊಳ್ಳುವುದು ಅತ್ಯಂತ ಸವಾಲಿನ ಹಾಗೂ ಅನಿಶ್ಚಿತತೆಯ ಕೆಲಸ ಅನೇಕರು ಹತ್ತಾರು ವರ್ಷಗಳ ಕಾಲ ಇಲ್ಲಿ ದುಡಿದರು ಕೂಡ ಅಭಿಮಾನಿಗಳ ಹೃದಯದಲ್ಲಿ ಗಟ್ಟಿಯಾದ ಒಂದು ಸ್ಥಾನವನ್ನು ಪಡೆದುಕೊಳ್ಳಲು ಸೋಲುತ್ತಾರೆ.

WhatsApp Group Join Now
Telegram Group Join Now

ಅಂತಹ ಒಂದಷ್ಟು ನಟರುಗಳ ಬಗ್ಗೆ ನೋಡುವುದಾದರೆ ಅಂತಹ ನಟರಲ್ಲಿ ಮೊದಲನೆಯವರು ನಟ ವಿಜಯ್ ರಾಘವೇಂದ್ರ ಒಬ್ಬರು ರಾಜವಂಶಕ್ಕೆ ನೇರವಾಗಿ ಸಂಬಂಧ ಪಟ್ಟ ವಿಜಯ್ ರಾಘವೇಂದ್ರ ಕನ್ನಡದಲ್ಲಿ ಹತ್ತಾರು ವರ್ಷಗಳಿಂದಲೂ ಕೂಡ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರತಿಭಾವಂತ ನಟ. ಕನ್ನಡದ ಬಹುತೇಕರಿಗೆ ವಿಜಯ್ ರಾಘವೇಂದ್ರ ಯಾರು ಎಂದು ಗೊತ್ತು ಇವರು ಶ್ರೀಮತಿ ಪಾರ್ವತಮ್ಮನವರ ಸಹೋದರರಾದ ಎಸ್ಎ ಚಿನ್ನೆಗೌಡರ ಹಿರಿಯ ಮಗ.


ಇನ್ನು ಇವರ ಸಹೋದರರು ಮುರುಳಿ ಕನ್ನಡದ ಸ್ಟಾರ್ ಹೀರೋಗಳ ಪೈಕಿ ಅವರು ಕೂಡ ಪ್ರಮುಖವಾದ ಸ್ಥಾನವನ್ನು ಪಡೆದಿದ್ದಾರೆ ವಿಜಯ್ ರಾಘವೇಂದ್ರ ಅದ್ಭುತ ಪ್ರತಿಭಾವಂತ ನಟ ನೃತ್ಯಗಾರ ಹಾಗೂ ಗಾಯಕ ಕೂಡ ಹೌದು ಮೇಲಾಗಿ 90ರ ದಶಕದಷ್ಟು ಹಿಂದೆಯೇ ಬಾಲ ಕಲಾವಿದರಾಗಿ ಚಿನ್ನಾರಿ ಮುತ್ತ ಹಾಗೂ ಕೊಟ್ರೇಶಿ ಕನಸು ಎಂಬ ಚಿತ್ರದಲ್ಲಿ ಅಭಿನಯಿಸಿ, ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಂತಹ ನಟ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

2002 ರಲ್ಲಿ ನಿನಗಾಗಿ ಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ಕರಿಯರನ್ನು ಶುರು ಮಾಡುತ್ತಾರೆ ಡಾನ್ಸ್ ಡೈಲಾಗ್ ಡೆಲಿವರಿ ನಟನೆ ಹಾಸ್ಯ ಹೀಗೆ ನಟನೆಯ ಎಲ್ಲಾ ಆಯಾಮಗಳಲ್ಲಿ ಪಳಗಿರುವ ವಿಜಯ್ ಅನೇಕ ಕ್ಲಾಸ್ ಹಾಗೂ ಮಾಸ್ ಹೀಗೆ ಎರಡು ವಿಧದ ಪಾತ್ರಗಳಲ್ಲಿ ನಟಿಸುತ್ತಾ ಬಂದಂತಹ ಕಲಾವಿದ.

2007 ಇವರ ಸೇವಂತಿ ಸೇವಂತಿ ಚಿತ್ರ ಸೂಪರ್ ಹಿಟ್ ಪಡೆದುಕೊಂಡಿತು 2005-06ಇವರ ರಿಷಿ ಚಿತ್ರದ ಪಾತ್ರ ಹಾಗು ಅಭಿನಯ ಆ ಚಿತ್ರದ ಬಹುಪಾಲು ಯಶಸ್ಸಿಗೆ ಕಾರಣವಾಯಿತು. ಕಲ್ಲರಳಿ ಹೂವಾಗಿ ಎಂಬ ಐತಿಹಾಸಿಕ ಚಿತ್ರದಲ್ಲಿ ಇವರ ನಟನೆ ಮನೋಘ್ನವಾಗಿತ್ತು ಆದರೆ 2014 ರಿಂದ ಈಚೆಗೆ ಇವರ ಚಿತ್ರಗಳು ಕ್ವಾಲಿಟಿ ಕುಸಿಯುತ್ತಾ ಹೋಯಿತು.

2013ರಲ್ಲಿ ಕನ್ನಡದ ಬಿಗ್ ಬಾಸ್ ಮೊದಲ ಸೀಸನ್ ಆಯ್ಕೆಯಾಗಿ ವಿನ್ನರ್ ಕೂಡ ಆದರೂ ಹೀಗಾದರೂ ಕೂಡ ಇವರ ಕರಿಯರ್ ಹಿಮ್ಮರಳಲಿಲ್ಲ ಮತ್ತೆ ವಿಜಯ್ ನಾಯಕರಾಗಿ ಬ್ರೇಕ್ ಪಡೆಯಬಹುದು ಎಂದು ಕಾದು ಕುಳಿತ ಅಭಿಮಾನಿಗಳಿಗೆ ಅಂತಹ ಯಾವ ಸುಳಿವು ಕೂಡ ಸಿಗಲಿಲ್ಲ ಇಷ್ಟೆಲ್ಲ ಪ್ರತಿಭೆ ಪುರಸ್ಕಾರ ಇದ್ದರು ಕೂಡ ವಿಜಯ್ ರಾಘವೇಂದ್ರ ಜನರಿಗೆ ತಕ್ಕ ಹಾಗೂ ಆ ಕಾಲಕ್ಕೆ ಒಪ್ಪುವಂತಹ ಕಥೆಗಳಲ್ಲಿ ಅಭಿನಯಿಸಲಿಲ್ಲ.

[irp]


crossorigin="anonymous">