ಹಬ್ಬಹರಿದಿನಗಳಲ್ಲಿ ಪೂಜೆ ನೇಮಾ ನಿತ್ಯ ಮಾಡಿದಾಗ ಮಾಂಸಹಾರ ಸೇವನೆ ಯಾಕೆ ಮಾಡಬಾರದು ಗೊತ್ತಾ ? » Karnataka's Best News Portal

ಹಬ್ಬಹರಿದಿನಗಳಲ್ಲಿ ಪೂಜೆ ನೇಮಾ ನಿತ್ಯ ಮಾಡಿದಾಗ ಮಾಂಸಹಾರ ಸೇವನೆ ಯಾಕೆ ಮಾಡಬಾರದು ಗೊತ್ತಾ ?

ಹಬ್ಬ ಹರಿ ದಿನಗಳಲ್ಲಿ ಪೂಜೆ ನೇಮ ನಿತ್ಯ ಮಾಡಿದಾಗ ಮಾಂಸಹಾರ ಸೇವನೆ ಯಾಕೆ ಮಾಡಬಾರದು.
ಸಸ್ಯಹಾರ ಮಾಂಸ ಆಹಾರ ಎನ್ನುವಂತಹದ್ದು ಅವರವರ ಮನೆತನದಿಂದ ಆರಿಸಿಕೊಂಡು ಬಂದಂತಹ ಆಹಾರ ಪದ್ಧತಿ, ಈ ಪದ್ಧತಿಯನ್ನು ನಾವು ಕೆಲವೊಂದು ವಿಷಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ನಮ್ಮ ದೇಹಕ್ಕೆ ಶರೀರ ಎಂದು ಕರೆಯುತ್ತೇವೆ ಯಾಕೆ ನಮ್ಮ ದೇಹವನ್ನು ನಾವು ಶರೀರ ಎಂದು ಕರೆಯುತ್ತೇವೆ. ನಮ್ಮ ದೇಹದಲ್ಲಿ ಅಗ್ನಿಗಳು ಸಾಕ್ಷಾತ್ ಆಗಿ ಆಶ್ರಯಿಸಿರುವುದರಿಂದ ನಮ್ಮ ದೇಹವನ್ನು ಶರೀರ ಎಂದು ಕರೆಯುತ್ತೇವೆ.

WhatsApp Group Join Now
Telegram Group Join Now

ಅಗ್ನಿಯನ್ನ ಕ್ರಮವಾಗಿ ನಾವು ಜ್ಞಾನಾಗ್ನಿ, ದರ್ಶನಾಗ್ನಿ ಮತ್ತು ಜಠರಾಗ್ನಿ ಎಂದು ಕರೆಯುತ್ತೇವೆ ವಸ್ತುಗಳ ರೂಪಾಧಿಗಳನ್ನು ತೋರಿಸುವುದು ದರ್ಶನಾಗ್ನಿ, ಒಳ್ಳೆಯದು ಕೆಟ್ಟದ್ದು ಅನ್ನುವ ಕರ್ಮಗಳನ್ನು ತಿಳಿಸುವುದೇ ಜ್ಞಾನಾಗ್ನಿ. ಇನ್ನು ಚತುರ್ವಿಧ ಆಹಾರಗಳನ್ನು ಪಚನ ಮಾಡುವ ಅಗ್ನಿ ಇದನ್ನು ಜಠರಾಗ್ನಿ ಎಂದು ಕರೆಯುತ್ತೇವೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾನೆ

ದೇಹದಲ್ಲಿ ಜಠರಾಗ್ನಿ ಅಗ್ನೀವ ರೂಪದಲ್ಲಿ ಇಂದು ನಾವು ಸೇವಿಸುವ ಆಹಾರವನ್ನು ನಾವು ಶಕ್ತಿ ರೂಪವನ್ನಾಗಿ ಪರಿವರ್ತನೆ ಮಾಡುತ್ತೇವೆ ಎಂದು. ಎಲ್ಲಿಯವರೆಗೆ ಈ ಅಗ್ನಿಗಳು ಉರಿಯುತ್ತಾ ಇರುತ್ತದೆ ಅಲ್ಲಿಯವರೆಗೆ ನಮ್ಮ ದೇಹವನ್ನು ನಾವು ಶರೀರ ಎಂದು ಕರೆಯುತ್ತೇವೆ ನಮ್ಮ ದೇಹದಲ್ಲಿರುವ ಅಗ್ನಿಗಳು ಶಾಂತವಾಗುತವೋ ಆಗ ಹೆ’ಣ ಎಂದು ಕರೆಸಿಕೊಳ್ಳುತ್ತದೆ.

ಈ ದೇಹ ರೂಪದಲ್ಲಿ ಭಗವಂತನಿದ್ದಾನೆ ಎಂದು ಕರೆಯುತ್ತೇವೆ ಅದಕ್ಕಾಗಿ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುತ್ತಾರೆ ನಾವು ಮಾಡುವಂತಹ ಆಹಾರ ತೆಗೆದುಕೊಳ್ಳುವಂತಹ ಆಹಾರ ನನ್ನನ್ನು ಬಂದು ಮುಟ್ಟುತ್ತದೆ ಎಂದು ಹೇಳಿದ್ದಾರೆ. ಭಗವಂತನನ್ನು ನಾವು ನೆನೆಸಿ ಊಟವನ್ನು ಮಾಡಿದಾಗ ಜ್ಞಾನರೂಪನಾದ ಭಗವಂತ ಅಗ್ನಿಯಲ್ಲಿ ತಲ್ಲೀನನಾಗಿ ಭಕ್ತಿ ರೂಪದ ಆಹುತಿಯನ್ನು ಸ್ವೀಕರಿಸುತ್ತಾನೆ.

See also  2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..

ಅದಕ್ಕಾಗಿ ನಮ್ಮ ಆಹಾರ ಸಾತ್ವಿಕವಾಗಿ ಇರಬೇಕು ಎಂದು ಶಾಸ್ತ್ರಗಳು ಹೇಳುತ್ತವೆ ನಾವು ನೇಮ ನಿತ್ಯಗಳನ್ನು ಮಾಡಿದರೆ ಮನೆಯಲ್ಲಿ ಪೂಜಾ ಹವನಾದಿಗಳನ್ನು ಮಾಡಿದರೆ, ಶಕ್ತಿ ರೂಪದ ಆರಾಧನೆಯನ್ನು ಮಾಡುತ್ತಿದ್ದರೆ ಕೆಲವೊಂದು ಮಾಸಗಳಲ್ಲಿ ಮಾಂಸಹಾರವನ್ನು ತ್ಯಜಿಸಬೇಕು ಯಾಕೆಂದರೆ ಒಂದು ಸ’ತ್ತ ದೇಹವನ್ನು ನಾವು ಅಗ್ನಿಗೆ ಅರ್ಪಿಸಬೇಕೆಂದರೆ ಅದನ್ನು ಶ’ವ’ಸಂ’ಸ್ಕಾ’ರ ಎನಿಸಿಕೊಳ್ಳುತ್ತದೆ.

ಯಾಕೆಂದರೆ ಹತ್ತು ದಿನಗಳ ಮೈಲಿಗೆಯನ್ನು ಆಚರಣೆ ಮಾಡುತ್ತೇವೆ ಇದೇ ರೀತಿಯಾಗಿ ಈ ಸ’ತ್ತ ಪ್ರಾಣಿಗಳ ದೇಹವನ್ನು ನಾವು ಭಕ್ಷಣೆಯನ್ನು ಮಾಡಿದಾಗ ನಮ್ಮ ದೇಹ ಕೂಡ ಮೈಲಿಗೆ ಆಗುತ್ತದೆ ಎಂದು ಹೇಳಲಾಗುತ್ತದೆ ಅದಕ್ಕಾಗಿ ಆ ಮೈಲಿಗೆಯಲ್ಲಿ ಮಾಡಿದಂತಹ ಪೂಜೆ ಪುನಸ್ಕಾರಗಳು ನಮಗೆ ಯಶಸ್ಸನ್ನು ತಂದು ಕೊಡುವುದಿಲ್ಲ.

ಅದಕ್ಕಾಗಿ ಏನಾದರು ನಿತ್ಯ ನಿಯಮ ಪೂಜೆ ಪುನಸ್ಕಾರಗಳನ್ನು ಮಾಡುವಾಗ ಈ ಮಾಂಸಾಹಾರವನ್ನು ತ್ಯಜಿಸುವುದು ಬಹಳ ಒಳ್ಳೆಯದು ಮನೆಯಲ್ಲಿ ಎಲ್ಲರೂ ತ್ಯಜಿಸಲು ಆಗದೆ ಇದ್ದರೆ ಯಾವ ವ್ಯಕ್ತಿ ವ್ರತ ಪೂಜೆ ನಿಯಮಗಳನ್ನು ಮಾಡುತ್ತಿರುತ್ತಾರೋ ಅಂತಹವರು ತ್ಯಜಿಸುವುದು ಒಳ್ಳೆಯದು.

[irp]


crossorigin="anonymous">