ಲಕ್ಷ ಲಕ್ಷ ಸಂಬಳ ಬಿಟ್ಟು ಕೃಷಿ ಹಿಡಿದ ಈ ಇಂಜಿನಿಯರ್ ಅರ್ದ ಎಕರೆಯಲ್ಲಿ 20 ಲಕ್ಷ ಗಳಿಕೆ ಮೋದಿಯಿಂದ ಮೆಚ್ಚುಗೆ ಪಡೆದ ಈ ರೈತ. » Karnataka's Best News Portal

ಲಕ್ಷ ಲಕ್ಷ ಸಂಬಳ ಬಿಟ್ಟು ಕೃಷಿ ಹಿಡಿದ ಈ ಇಂಜಿನಿಯರ್ ಅರ್ದ ಎಕರೆಯಲ್ಲಿ 20 ಲಕ್ಷ ಗಳಿಕೆ ಮೋದಿಯಿಂದ ಮೆಚ್ಚುಗೆ ಪಡೆದ ಈ ರೈತ.

ಇಂಜಿನಿಯರ್ ಕೆಲಸ ಬಿಟ್ಟು ವ್ಯವಸಾಯ ಆರಂಭಿಸಿದ ಇವರು ಮಾಡಿದ ಐಡಿಯಾ ನೋಡಿ.ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಮಾಡುವವರ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ ಆದರೆ ಇಲ್ಲೊಬ್ಬರು ಓದಿದ್ದರೂ ಸಹ ವ್ಯವಸಾಯವನ್ನು ಅರಸಿ ಬಂದು ವ್ಯವಸಾಯದಲ್ಲಿ ಹೇಳಿಗೆಯನ್ನು ಕಂಡಿದ್ದಾರೆ. ರಾಮನಗರ ತಾಲೂಕಿನ ಮಾಯಗಾನಹಳ್ಳಿಯ ಎಂ ಕೆ ನಾಗರಾಜಯ್ಯ ಅವರು ಮೆಕಾನಿಕಲ್ ಇಂಜಿನಿಯರ್ ಓದಿ ಕೆಲವೊಂದಷ್ಟು ಕಂಪನಿಗಳಲ್ಲಿ ಕೆಲಸವನ್ನು ಸಹ ಕೆಲಸ ಮಾಡಿ ಬೇಸರ ಎನಿಸಿತು.

WhatsApp Group Join Now
Telegram Group Join Now

ನಂತರ ಇರುವಂತಹ ಜಮೀನನ್ನು ಹಾಗೆ ಖಾಲಿ ಬಿಡಲು ಮನಸಾಗದೆ ತಮಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿರುವಂತಹ 10 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಹೋಗುತ್ತಿದ್ದಾರೆ. ಇವರ ತಂದೆಯ ಕಾಲದಲ್ಲಿ ರಾಗಿ ಮತ್ತು ಭತ್ತ ಕೆಲವೊಂದಷ್ಟು ಮಾವಿನ ತೋಟಗಳನ್ನು ಮಾಡಿಕೊಂಡು ಹೋಗುತ್ತಿದ್ದರು


ಇವರು ಅರ್ಧ ಎಕರೆ ಜಮೀನಿನಲ್ಲಿ ಪಾಲಿ ಹೌಸ ಅನ್ನು ನಿರ್ಮಾಣ ಮಾಡಿಕೊಂಡು ಇವರು ವಿಭಿನ್ನ ರೀತಿಯಾದಂತಹ ಬೆಳೆಯನ್ನು ಬೆಳೆಯಲು ಪ್ರಾರಂಭ ಮಾಡಿದರು. ಪ್ರಾರಂಭದಲ್ಲಿ ಇದು ಸ್ವಲ್ಪ ಕಷ್ಟ ಎನಿಸಿದರು ಸಹ ಮುಂದೆ ಇವರಿಗೆ ಇದು ಕೈ ಹಿಡಿದಿದೆ ಬ್ಯಾಂಕ್ ನಲ್ಲಿ ಸ್ವಲ್ಪ ಸಾಲವನ್ನು ಪಡೆದುಕೊಂಡು ಕಲರ್ ಕ್ಯಾಪ್ಸಿಕಂ ಅನ್ನು ಬೆಳೆಯಲು ಪ್ರಾರಂಭ ಮಾಡಿದರು ಮಧ್ಯವರ್ತಿಗೆ ಕಡಿಮೆ ದುಡ್ಡಿಗೆ ತಾವು ಬೆಳೆದಂತಹ ಬೆಳೆಯನ್ನು ಮಾರಾಟ ಮಾಡುತ್ತಿದ್ದರು.

ಆಗಿನ ಕಾಲಕ್ಕೆ ಇವರಿಗೆ ಅದರ ಬೆಲೆ ನಿಖರವಾಗಿ ಗೊತ್ತಿರಲಿಲ್ಲ ಮಧ್ಯವರ್ತಿಗಳು ಇದರಿಂದ ಬಹಳಷ್ಟು ಹಣವನ್ನು ತಿಂದಿದ್ದಾರೆ. ನಾಗರಾಜಯ್ಯ ಅವರು ಹಳ್ಳಿಗೆ ಬಂದು ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ ತಮ್ಮ ಜಮೀನಿಗೆ ಬೋರ್ವೆಲ್ ಅನ್ನು ಹಾಕಿಸಿದರು ಇದರಿಂದ ನೀರು ಚೆನ್ನಾಗಿ ಬರುತ್ತಿತ್ತು ವರ್ಷಗಳು ಕಳೆದಂತೆ ನೀರು ಕಡಿಮೆ ಸಹ ಆಗುತ್ತಿತ್ತು ಇನ್ನು ಹಾಳವಾಗಿ ಬೋರ ಅನ್ನು ತೆಗೆಸಿದರು ಹಾಗೆಯೇ

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ತಮ್ಮ ಜಮೀನಿನಲ್ಲಿ ವಿಭಿನ್ನ ರೀತಿಯಾಗಿ ಬೆಳೆಯನ್ನು ಬೆಳೆಯಬೇಕು ಎಂಬ ಕಾರಣದಿಂದಾಗಿ ಕಲರ್ ಕ್ಯಾಪ್ಸಿಕಂ ಅನ್ನು ಬೆಳೆದರು ಆದರೆ ನಮ್ಮ ಭಾರತದಲ್ಲಿ ಕಲರ್ ಕ್ಯಾಪ್ಸಿಕಂ ಗೆ ಹೆಚ್ಚಿನ ಬೇಡಿಕೆ ಇರಲಿಲ್ಲ ಆದ್ದರಿಂದ ಇವರು ಅಮೆರಿಕ ಅರಬ್ ಕಂಟ್ರಿಗಳು ಹೀಗೆ ಬೇರೆ ಬೇರೆ ಕಡೆಗಳಿಗೆ ರವಾನೆ ಆಗುತ್ತದೆ ಎಂಬುದನ್ನು ತಿಳಿದುಕೊಂಡು ನಂತರದಲ್ಲಿ ಇವರು ವರ್ಷಕ್ಕೆ 20 ಲಕ್ಷದಂತೆ ಈ ಒಂದು ಕ್ಯಾಪ್ಸಿಕಂ ಇಂದ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಪ್ರಾರಂಭದಲ್ಲಿ ಕೆಲವೊಂದಷ್ಟು ಇದರಿಂದ ನಷ್ಟ ಆದರು ಸಹ ಇವರು ಎಲ್ಲವನ್ನು ಸಹಿ ಸರಿದೂಗಿಸಿಕೊಂಡು ಈ ಒಂದು ವ್ಯವಸಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈಗಿನ ಕಾಲದಲ್ಲಿ ಓದಿದವರು ಈ ರೀತಿಯಾದಂತಹ ವ್ಯವಸಾಯವನ್ನು ಮಾಡುವುದು ಅತಿ ಕಡಿಮೆ ಆದರೆ ನಾಗರಾಜಯ್ಯ ಅವರು ಇದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ ಈ ಒಂದು ಕೆಲಸ ಇವರಿಗೆ ತೃಪ್ತಿಯನ್ನು ನೀಡಿದೆ.

[irp]


crossorigin="anonymous">