ಊಟ ಬಲ್ಲವನಿಗೆ ರೋಗವಿಲ್ಲ ಆಹಾರ/ಊಟ ಹೇಗೆ ಎಷ್ಟು ಯಾವಾಗ ನಿಯಮದ ಪ್ರಕಾರ ಸೇವಿಸಬೇಕು ನೋಡಿ - Karnataka's Best News Portal

ಊಟ ಬಲ್ಲವನಿಗೆ ರೋಗವಿಲ್ಲ ಆಹಾರ/ಊಟ ಹೇಗೆ ಎಷ್ಟು ಯಾವಾಗ ನಿಯಮದ ಪ್ರಕಾರ ಸೇವಿಸಬೇಕು ನೋಡಿ

ಊಟ/ ಆಹಾರ ಯಾವಾಗ/ ಹೇಗೆ/ ಎಷ್ಟು ಮಾಡಬೇಕು?
ಆಹಾರವನ್ನು ಸೇವನೆ ಮಾಡುವ ಕ್ರಮ ಗೊತ್ತಿಲ್ಲ ಎಂದರೆ ರೋಗಗಳು ಕಾಣಿಸಿಕೊಳ್ಳುವುದು ಖಂಡಿತ ಮೌನವಾಗಿ ನಮ್ಮ ಶಕ್ತಿಗೆ ಕಾರಣವಾಗಿರುವಂಥದ್ದು ನಮ್ಮ ಆಹಾರ, ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವ ಆಹಾರವನ್ನು ತಿನ್ನುತ್ತಿದ್ದೀರಾ ಹಾಗೂ ಎಷ್ಟು ಪ್ರಮಾಣದಲ್ಲಿ ತಿನ್ನುತ್ತಿದ್ದೀರಾ ಯಾವ ಸಮಯದಲ್ಲಿ ತಿನ್ನುತ್ತಿದ್ದೀರಾ ಹೀಗೆ ಆಹಾರದ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ಆಹಾರ ಯಾವುದು ಕೆಟ್ಟ ಆಹಾರ ಯಾವುದು ಎನ್ನುವುದು ತಿಳಿದಿದೆ ಆದರೆ ಕೆಲವೊಬ್ಬರು ಈ ಆಹಾರ ಕೆಟ್ಟದ್ದು ಎಂದು ತಿಳಿದಿದ್ದರೂ ಕೂಡ ಅದನ್ನು ತಿನ್ನುತ್ತಿರುತ್ತಾರೆ ಮೊದಲನೆಯದಾಗಿ ನಾವು ಯಾವ ಆಹಾರವನ್ನು ಸೇವನೆ ಮಾಡಬೇಕು ಎನ್ನುವುದನ್ನು ತಿಳಿದುಕೊಂಡಿರುತ್ತೇವೆ ಆದರೆ ಆಹಾರವನ್ನು ಹೇಗೆ ಸೇವನೆ ಮಾಡಬೇಕು ಎನ್ನುವುದನ್ನು ತಿಳಿದುಕೊಂಡಿರುವುದಿಲ್ಲ


ಆಹಾರವನ್ನು ಸೇವನೆ ಮಾಡುವಂತಹ ವಿಧಾನಗಳನ್ನು ನಾವು ತಿಳಿದುಕೊಳ್ಳದೆ ಹೋದರೆ ಅಜೀರ್ಣ, ಮಲಬದ್ಧತೆ, ವಾತ, ಪಿತ್ತ, ಕಫ ವಿಕಾರಗಳು ಪಂಚಪ್ರಾಣವಿಕಾರಗಳು, ಸಪ್ತ ಧಾತುಗಳ ಕ್ಷಯ, ಹೀಗೆ ಇನ್ನೂ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಆಹಾರ ಸೇವನೆ ಮಾಡುವಂತಹ ವಿಧಾನಗಳನ್ನು ತಿಳಿದುಕೊಳ್ಳುವುದು ಅವಶ್ಯಕ

ಹಸಿಯಬೇಡ ಹಸಿದರು ತಿನ್ನದೆ ಇರಬೇಡ ಬಿಸಿ ಅನ್ನ ತಿನ್ನಬೇಡ ತಂಗಳು ತಿನ್ನಬೇಡ ಹೀಗೆಂದು ಸರ್ವಜ್ಞರು ಹೇಳುತ್ತಾರೆ ಅಂದರೆ ಯಾವುದೇ ಒಬ್ಬ ವ್ಯಕ್ತಿ ಹಸಿದು ತಿಂದರೂ ಕೂಡ ಮಲಬದ್ಧತೆ ಉಂಟಾಗುತ್ತದೆ ಹಸಿಯದೆ ತಿಂದರೂ ಕೂಡ ಮಲಬದ್ಧತೆ ಉಂಟಾಗುತ್ತದೆ ಎಂದೇ ಹೇಳಬಹುದು ಅದರಂತೆ ಬಿಸಿ ಬಿಸಿ ಅನ್ನವನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಅಲ್ಸರ್ ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ತಂಗಳನ್ನು ತಿನ್ನುವುದರಿಂದ ದೇಹದಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತದೆ ಎಂದೇ ಸರ್ವಜ್ಞರು ಅಂದಿನ ಕಾಲದಲ್ಲಿ ನಮಗೆಲ್ಲರಿಗೂ ತಿಳಿಸಿಕೊಟ್ಟಿದ್ದಾರೆ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಆದರೆ ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ನಾವು ಯಾವುದೇ ಆಹಾರವನ್ನು ಸೇವನೆ ಮಾಡಬೇಕು ಎಂದರೆ ನಮ್ಮ ದೇಹದ ಶಾಖ ಎಷ್ಟು ಇರುತ್ತದೆಯೋ ಅಷ್ಟು ಬಿಸಿ ಇರುವಂತಹ ಆಹಾರವನ್ನು ಮಾತ್ರ ಸೇವನೆ ಮಾಡಬೇಕು ಎಂದೇ ಹೇಳುತ್ತಾರೆ ಜೊತೆಗೆ ಪ್ರತಿ ಸಮಯ ಆಹಾರ ಸೇವನೆ ಮಾಡುವಾಗ ಕೆಳಗಡೆ ಕುಳಿತು ಪೂಜನೀಯ ಭಾವದಲ್ಲಿ ನಮಗೆ ಸಿಕ್ಕಿರುವಂತಹ ಆಹಾರವನ್ನು ದೇವರಿಗೆ ಅರ್ಪಿಸುತ್ತಾ ದೇವರನ್ನು ನೆನೆಯುತ್ತ ಆಹಾರವನ್ನು ಸೇವನೆ ಮಾಡಬೇಕು

ಆಗ ನಮಗೆ ಯಾವುದೇ ರೀತಿಯಾದಂತಹ ತೊಂದರೆ ಬರುವುದಿಲ್ಲ ಹಿಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಆಹಾರ ಸೇವನೆ ಮಾಡುವಂತಹ ಸಮಯದಲ್ಲಿ ಸ್ವಚ್ಛವಾಗಿ ಕೈಕಾಲು ಮುಖ ತೊಳೆದು ದೇವರನ್ನು ಧ್ಯಾನಿಸುತ್ತಾ ಆಹಾರವನ್ನು ಸೇವನೆ ಮಾಡುತ್ತಿದ್ದರು ಆದರೆ ಕಾಲ ಈಗ ತುಂಬಾ ಬದಲಾಗಿದೆ ಆದ್ದರಿಂದಲೇ ಈ ರೀತಿಯ ತೊಂದರೆಗಳನ್ನು ಕೂಡ ಅನುಭವಿಸುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]