ಫೆಬ್ರವರಿ 14 ನೇ ತಾರೀಖಿನ ನಂತರ ಶನಿದೇವನ ಸ್ವರಾಶಿಯಲ್ಲಿ ತ್ರಿಗ್ರಹಿ ರಾಜಯೋಗದ ಪ್ರಾರಂಭ ಈ ಮೂರು ರಾಶಿಯವರ ಮೇಲೆ ಅಪಾರ‌ ಧನವೃಷ್ಟಿ. - Karnataka's Best News Portal

ಶನಿಯ ಸ್ವರಾಶಿಯಲ್ಲಿ ತ್ರಿಗ್ರಹಿ ಯೋಗದ ನಿರ್ಮಾಣ|| ಈ ಮೂರು ರಾಶಿಯವರ ಮೇಲೆ ಅಪಾರ ಧನ ವೃಷ್ಟಿಯ ಯೋಗ||ನಮಗೆಲ್ಲರಿಗೂ ಗೊತ್ತಿರುವ ಹಾಗೆ ಎಲ್ಲಾ ನವಗ್ರಹಗಳು ಕೂಡ ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ತಮ್ಮ ತಮ್ಮ ರಾಶಿಗಳಲ್ಲಿ ಪರಿವರ್ತನೆಯನ್ನು ಹೊಂದುತ್ತಿರುತ್ತದೆ ಅಂದರೆ ನಿಗದಿತ ಸಮಯದಲ್ಲಿ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಲೇ ಇರುತ್ತದೆ.

ಹೀಗೆ ಗ್ರಹಗಳು ರಾಶಿ ಸಂಚಾರದ ವೇಳೆಯಲ್ಲಿ ಕೆಲವು ವಿಶೇಷವಾದಂತಹ ಶುಭ ಯೋಗಗಳು ಕೂಡ ನಿರ್ಮಾಣಗೊಳ್ಳುತ್ತದೆ. ಈ ಶುಭಯೋಗಗಳು ಕೆಲವು ಬಾರಿ ಆ ವ್ಯಕ್ತಿ ಆಕಾಶದ ಎತ್ತರಕ್ಕೆ ಬೆಳೆಯುವಂತೆ ಅನುಗ್ರಹಿಸುತ್ತದೆ ಅದೇ ರೀತಿಯಾಗಿ ಈ ತಿಂಗಳು ಅಂದರೆ ಫೆಬ್ರವರಿ ತಿಂಗಳಲ್ಲಿಯೂ ಕೂಡ ಒಂದು ವಿಶೇಷವಾದಂತಹ ಯೋಗ ನಿರ್ಮಾಣಗೊಳ್ಳುತ್ತಿದ್ದು ಇದು ಖಂಡಿತವಾಗಿಯೂ ಎಲ್ಲ ದ್ವಾದಶ ರಾಶಿಗಳ ಜಾತಕದ ಮೇಲೂ ವಿಶೇಷವಾದ ಪ್ರಭಾವವನ್ನು ಬೀರಲಿದೆ.


ಹೌದು, ಶನಿದೇವನ ಸ್ವರಾಶಿ ಕುಂಭ ರಾಶಿಯಲ್ಲಿ ಮೂರು ಗ್ರಹಗಳ ಯುತಿಯಿಂದಾಗಿ ಇಲ್ಲಿ ತ್ರಿಗ್ರಹಿ ರಾಜಯೋಗ ನಿರ್ಮಾಣವಾಗುತ್ತಿದ್ದು ಇದು ವಿಶೇಷವಾಗಿ ಮೂರು ರಾಶಿಗಳ ಮೇಲೆ ಅತ್ಯಂತ ಶುಭಫಲಗಳ ಮಳೆಯನ್ನು ಸುರಿಸಲಿದೆ ಎಂದೇ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾದರೆ ಈ ದಿನ ಶನಿಯ ಗೋಚಾರದಿಂದಾಗಿ ಯಾವ ಮೂರು ರಾಶಿಗಳಿಗೆ ರಾಜಯೋಗ ಬರುತ್ತಿದೆ ಎಂದು ತಿಳಿದುಕೊಳ್ಳೋಣ.

ಪ್ರಸ್ತುತವಾಗಿ ಶನಿದೇವನು ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ವಿರಾಜಮಾನನಾಗಿ ಇದ್ದಾನೆ ಮತ್ತು ಫೆಬ್ರವರಿ ತಿಂಗಳ 14ನೇ ತಾರೀಖಿನಂದು ಸೂರ್ಯನು ಕೂಡ ಮಕರ ರಾಶಿಯಿಂದ ಹೊರಬಂದು ಕುಂಭ ರಾಶಿಯನ್ನೇ ಪ್ರವೇಶಿಸಲಿದ್ದಾನೆ ಇನ್ನೊಂದು ಕಡೆ ಬುಧನು ಕೂಡ ಈ ಅವಧಿಯಲ್ಲಿ ಕುಂಭ ರಾಶಿಯಲ್ಲಿಯೇ ಗೋಚರಿಸಲಿದ್ದಾನೆ ಹೀಗಾಗಿ ಫೆಬ್ರವರಿ ತಿಂಗಳ 14ನೇ ತಾರೀಖಿನ ನಂತರದಲ್ಲಿ ಶನಿದೇವನ ಸ್ವರಾಶಿ ಅಂದರೆ ಕುಂಭ ರಾಶಿಯಲ್ಲಿ ತ್ರಿಗ್ರಹಿ ರಾಜಯೋಗವನ್ನು ಸೃಷ್ಟಿಸುತ್ತದೆ.

ಕುಂಭ ರಾಶಿಯಲ್ಲಿ ಕಾಣಿಸಿಕೊಂಡಂತಹ ಈ ತ್ರಿಗ್ರಹಿ ರಾಜಯೋಗದ ಪರಿಣಾಮದಿಂದಾಗಿ ಎಲ್ಲ ದ್ವಾದಶ ರಾಶಿಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮವನ್ನು ಬೀರಲಿದೆ ಇಲ್ಲಿ ವಿಶೇಷವಾಗಿ ತ್ರಿಗ್ರಹ ರಾಜಯೋಗದ ಪರಿಣಾಮವು ಈ ಮೂರು ರಾಶಿಗಳ ಮೇಲೆ ಅಪಾರ ಧನದ ದೃಷ್ಟಿಯನ್ನು ಭರಿಸಲಿದೆ ಈ ಸಮಯದಲ್ಲಿ ಈ ರಾಶಿಯವರ ಪ್ರಗತಿಯಾಗಲಿದ್ದು ಅಪಾರವಾದ ಧನ ಸಂಪತ್ತು ಹರಿದು ಬರುವ ಸಾಧ್ಯತೆ ಹೆಚ್ಚಾಗಿದೆ.

ಇಲ್ಲಿ ತ್ರಿಗ್ರಹ ರಾಜಯೋಗದ ಪರಿಣಾಮದಿಂದಾಗಿ ಮೊದಲನೆಯದಾಗಿ ಧನದ ಅಭಿವೃದ್ಧಿ ಹೊಂದುತ್ತಿರುವಂತಹ ಮೊದಲನೆಯ ರಾಶಿ ಯಾವುದು ಎಂದರೆ ವೃಷಭ ರಾಶಿ. ಹಾಗೂ ಎರಡನೆಯದಾಗಿ ಅಭಿವೃದ್ಧಿಯನ್ನು ಹೊಂದುತ್ತಿರುವ ರಾಶಿ ಯಾವುದು ಎಂದು ಮಕರ ರಾಶಿ ಹಾಗೂ ಕೊನೆಯದಾಗಿ ತ್ರಿಗ್ರಹ ರಾಜಯೋಗದ ಪರಿಣಾಮ ಬೀರುತ್ತಿರುವoತಹ ಮೂರನೆಯ ರಾಶಿ ಯಾವುದು ಎಂದರೆ ಸಿಂಹ ರಾಶಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *