ಇದನ್ನು ಹಾಕಿ ನೆಲ ಒರೆಸಿ ನೆಲ ಕನ್ನಡಿಯಂತೆ ಫಳ ಫಳ ಅಂತ ಹೊಳೆಯುತ್ತೆ ಒಮ್ಮೆ ತಯಾರಿಸಿ 3 ತಿಂಗಳು ಬಳಸಿ ಪ್ರಿಡ್ಜ್ ನಲ್ಲಿ ಇಡೋದು ಬೇಡ . - Karnataka's Best News Portal

ಹೀಗೆ ಮಾಡಿ ನೆಲ ಒರೆಸಿ ನೋಡಿ ಎಲ್ಲರೂ ಆಶ್ಚರ್ಯ ಪಟ್ಟಿಲ್ಲ ಅಂದ್ರೆ ಆಮೇಲೆ ಹೇಳಿ.ಮನೆಯನ್ನು ಕ್ಲೀನ್ ಮಾಡುವುದು ಪ್ರತಿದಿನದ ಕೆಲಸ ಅದರಲ್ಲಿಯೂ ನೆಲವನ್ನು ಎಷ್ಟು ಸ್ವಚ್ಛವಾಗಿ ಇಟ್ಟರೂ ಕೊಳೆಯಾಗಿ ಆಗುತ್ತದೆ ಇದಕ್ಕೆ ಮಾರ್ಕೆಟ್ ನಲ್ಲಿ ನಾನಾ ರೀತಿಯ ಫ್ಲೋರ್ ಕ್ಲೀನರ್‌ಗಳು ಸಿಗುತ್ತದೆ ಆದರೆ ಇದರಿಂದ ನೆಲದ ಮೇಲೆ ಸೋಪಿನ ಪದರ ನಿಲ್ಲುತ್ತದೆ ನೆಲದಲ್ಲಿ ಶೈನ್ ಇರುವುದಿಲ್ಲ ಆದ್ದರಿಂದ ನಾವು ಮನೆಯಲ್ಲೇ ಒಂದು ಕ್ಲೀನರ್ ಅನ್ನು ತಯಾರಿಸಿಕೊಳ್ಳುವುದು ಉತ್ತಮ.

ಈ ಒಂದು ಕ್ಲೀನರನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂದರೆ ಮೂರು ನಿಂಬೆಹಣ್ಣನ್ನು ತೆಗೆದುಕೊಂಡು ಇದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕಟ್ಟ್ ಮಾಡಿಕೊಳ್ಳಿ ಇದಕ್ಕೆ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ ಹೀಗೆ ಮಾಡುವುದರಿಂದ ಹೆಚ್ಚು ದಿನ ಬಾಳಿಕೆಗೆ ಬರುತ್ತದೆ. ಸುಮಾರು 10 ನಿಮಿಷಗಳ ಕಾಲ ಕುದಿಸಿದ ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ನೈಸ್ ಪೇಸ್ಟ್ ಮಾಡಿಕೊಳ್ಳಿ


ಇದನ್ನು ಚೆನ್ನಾಗಿ ಶೋಧಿಸಿಕೊಳ್ಳಿ ಶೋಧಿಸಿಕೊಂಡ ನಂತರ ಇದಕ್ಕೆ ಎರಡು ಟೇಬಲ್ ಸ್ಪೂನ್ ನಷ್ಟು ಉಪ್ಪನ್ನು ಸೇರಿಸಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ. ಕುದಿಸಿದ ನಂತರ ಇದನ್ನು ತಣ್ಣಗಾಗಲು ಬಿಡಿ ಇದು ತಣ್ಣಗಾದ ನಂತರ ಮೂರು ಟೇಬಲ್ ಸ್ಪೂನ್ ನಷ್ಟು ಅಡುಗೆ ಸೋಡಾ ಹಾಗೆಯೆ ಯಾವುದಾದರೂ ನೀವು ಉಪಯೋಗಿಸುವಂತಹ ಶಾಂಪೂವನ್ನು ಒಂದು ಟೇಬಲ್ ಸ್ಪೂನ್ ನಷ್ಟು ಸೇರಿಸಿ.

ಹೀಗೆ ತಯಾರಿಸಿಕೊಂಡಿರುವಂತಹ ಲಿಕ್ವಿಡ್ ಅನ್ನು ನೀವು ಒಂದು ಬಾಟಲಲ್ಲಿ ತುಂಬಿಸಿ ಇಟ್ಟುಕೊಳ್ಳಬಹುದು ಇದನ್ನು ನೀವು ಮೂರು ತಿಂಗಳು ಕಾಲ ಉಪಯೋಗ ಮಾಡಿಕೊಳ್ಳಬಹುದು. ಪ್ರತಿದಿನ ನೆಲವರಿಸುವ ನೀರಿಗೆ ಇದನ್ನು ಎರಡರಿಂದ ಮೂರು ಟೇಬಲ್ ಸ್ಪೂನ್ ನಷ್ಟು ಹಾಕಿ ನೆಲವನ್ನು ವರಿಸಿದರೆ ಕನ್ನಡಿಯಂತೆ ನೆಲ ಹೊಳೆಯುತ್ತದೆ.

ಯಾವುದೇ ರೀತಿಯಾದಂತಹ ಬ್ಯಾಕ್ಟೀರಿಯ ಹೋಗುತ್ತದೆ ಮನೆಯಲ್ಲಿ ಒಳ್ಳೆಯ ಸುಹಾಸನೆ ಇರುತ್ತದೆ. ಕರೆ ಕಟ್ಟಿರುವಂತಹ ಬಾತ್ರೂಮ್ ಟೈಲ್ಸ್ ಗಳಿಗೆ ಈ ಒಂದು ಕ್ಲೀನರ್ ಅನ್ನು ಹಾಕಿ ಐದು ನಿಮಿಷ ಹಾಗೆ ಬಿಟ್ಟು ನಂತರ ಸ್ಕ್ರಬ್ಬರ್ ನಿಂದ ಉಜ್ಜುವುದರಿಂದ ಎಷ್ಟೇ ಕರೆ ಕಟ್ಟಿರುವಂತಹ ಟೈಲ್ಸ್ ಗಳು ಕೂಡ ನೀಟಾಗಿ ಹೊಳೆಯುತ್ತದೆ. ಹಾಗೆ ನಿಮ್ಮ ಮನೆಯಲ್ಲಿ ಇರುವಂತಹ ಸಿಂಕ್ ಗಳನ್ನು ಸಹ ನೀವು ಈ ಒಂದು ಲಿಕ್ವಿಡ್ ಅನ್ನು ಬಳಸಿ ವಾಶ್ ಮಾಡಿಕೊಳ್ಳಬಹುದು.

ಮಾರ್ಕೆಟ್ ನಿಂದ ತರುವಂತಹ ದುಬಾರಿ ಕ್ಲೀನರ್ ಗಳನ್ನು ಬಳಸುವ ಬದಲು ಈ ರೀತಿಯಾಗಿ ನಾವು ಮನೆಯಲ್ಲಿ ತಯಾರಿಸಿದಂತಹ ಕ್ಲೀನರ್ ಗಳನ್ನು ಬಳಸುವುದು ತುಂಬಾ ಒಳ್ಳೆಯದು ಇದರಿಂದ ಒಳ್ಳೆಯ ಸುಹಾಸನೆಯೂ ಸಹ ಬರುತ್ತದೆ ಹಾಗೆಯೇ ಯಾವುದೇ ರೀತಿಯಾದಂತಹ ಬ್ಯಾಕ್ಟೀರಿಯಗಳು ಇದ್ದರೂ ಇದು ನಾಶ ಮಾಡುತ್ತದೆ.

Leave a Reply

Your email address will not be published. Required fields are marked *