ಕಾರ್ಮಿಕರ ಕಾರ್ಡ್ ಇದ್ದವರಿಗೆ 6000 ನಿಮ್ಮ ಖಾತೆಗೆ ನೇರವಾಗಿ ಜಮೆ ಮಾಡುತ್ತಾರೆ . - Karnataka's Best News Portal

ಕಾರ್ಮಿಕರ ಕಾರ್ಡ್ ಇದ್ದವರಿಗೆ 6000 ನಿಮ್ಮ ಖಾತೆಗೆ ನೇರವಾಗಿ ಜಮೆ ಮಾಡುತ್ತಾರೆ .

ಕಾರ್ಮಿಕರ ಕಾರ್ಡ್ ಇದ್ದವರಿಗೆ ಒಳ್ಳೆಯ ಅವಕಾಶ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತಾರೆ.ಕಾರ್ಮಿಕರ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಎಂದೇ ಹೇಳಬಹುದು ಕಾರ್ಮಿಕರ ಕಾರ್ಡ್ ಇದ್ದವರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯು ಉಚಿತವಾಗಿ ಹಣವನ್ನು ನೀಡುತ್ತಿದ್ದಾರೆ ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಬೇಕು ಇದನ್ನು ಪಡೆಯಲು ನೀವು ಕಾರ್ಮಿಕರ ಕಾರ್ಡನ್ನು ಮಹಿಳೆಯರು ಹೊಂದಿದ್ದರೆ ಇದರ ಸಂಪೂರ್ಣ ಲಾಭ ಪಡೆಯಬಹುದು. ಕಾರ್ಮಿಕ ಇಲಾಖೆ ಮಂಡಳಿಯಿಂದ 6000 ಹಣವನ್ನು ನಿಮಗೆ ನೀಡಲಾಗುತ್ತದೆ ಸಂಸ್ಥೆಯ ಹೆಸರು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2023.

ಯೋಜನೆಯ ಹೆಸರು ತಾಯಿ ಮಗು ಸಹಾಯಸ್ತ ಈ ಮೂಲಕ ಕೇಂದ್ರ ಸರ್ಕಾರ ಪ್ರಾರಂಭಿಸಿದೆ ಫಲಾನುಭವಿಗಳು ಕಾರ್ಮಿಕ ಮಹಿಳೆಯರಾಗಿದ್ದಾರೆ. ಇದರ ಉದ್ದೇಶ ಏನೆಂದರೆ ಮಗುವಿನ ಜನನ ಸಂದರ್ಭದಲ್ಲಿ ನೆರವಾಗುತ್ತದೆ ಇದರ ಪ್ರಯೋಜನಗಳನ್ನು ನೋಡುವುದಾದರೆ ಆರು ಸಾವಿರದವರೆಗೂ ಇದರಿಂದ ಪ್ರಯೋಜನ ನಮಗೆ ದೊರೆಯುತ್ತದೆ. ಇದಕ್ಕೆ ಹೇಗೆ ಅಪ್ಲಿಕೇಶನ್ ಹಾಕಬೇಕು ಎಂದರೆ ಆನ್ಲೈನ್ ನ ಮೂಲಕ ನೀವು ಈ ಯೋಜನೆಗೆ ಅಪ್ಲಿಕೇಶನ್ ಅನ್ನು ಹಾಕಬೇಕಾಗುತ್ತದೆ.


ಯಾವ ಒಂದು ವೆಬ್ ಸೈಟ್ ಗೆ ಅಪ್ಲಿಕೇಶನ್ ಹಾಕಬೇಕು ಎಂದು ನೋಡುವುದಾದರೆ ಲೇಬರ್ ಕರ್ನಾಟಕ ಗೌರ್ನಮೆಂಟ್ ಇನ್ ಈ ಒಂದು ವೆಬ್ಸೈಟ್ಗೆ ನೀವು ಅಪ್ಲಿಕೇಶನ್ ಅನ್ನು ಹಾಕಿದರೆ ಯೋಜನೆಯ ಸಂಪೂರ್ಣ ಲಾಭ ಪಡೆಯಕೊಳ್ಳಬಹುದು. ತಾಯಿ ಮಗು ಸಹಾಯಹಸ್ತ 2023 ಇದರ ಪ್ರಯೋಜನಗಳನ್ನು ನಾವು ನೋಡುವುದಾದರೆ ಇದರಲ್ಲಿ ಬರುವಂತಹ ಒಟ್ಟು ಮೊತ್ತ 6,000 ಆಗಿರುತ್ತದೆ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ಪ್ರತಿ ತಿಂಗಳು ಕೂಡ ಐದುನೂರು ರೂಪಾಯಿಗಳಂತೆ ನೋಂದಾಯಿತ ಮಹಿಳಾ ಫಲಾನುಭವಿಗಳಿಗೆ ಹಣವನ್ನು ಮಂಜೂರಾತಿ ಮಾಡುತ್ತಾರೆ. ಯೋಜನೆಯ ಲಾಭ ಪಡೆದುಕೊಳ್ಳಲು ಅರ್ಹತೆ ನೋಡುವುದಾದರೆ ನೊಂದಾಯಿತ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಯ ಸಮಯದಿಂದ 3 ವರ್ಷಗಳ ಅವಧಿಯವರೆಗೆ ಮಗುವಿನ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಟಿಕಾಂಶದ ಪೂರೈಕೆಗಾಗಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ನೊಂದಾಯಿತ ಮಹಿಳಾ ಕಾರ್ಮಿಕರು ಎರಡು ಬಾರಿ ಮಾತ್ರ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿಯು ಜನನ ಮತ್ತು ಮರಣ ನೋಂದಾಯಿತ ಅಧಿಕಾರಿಯಿಂದ ಪಡೆದ ಜನನ ಪ್ರಮಾಣ ಪತ್ರವನ್ನು ಒಳಗೊಂಡಿರಬೇಕು, ಅರ್ಹರಾದ ಮಹಿಳಾ ಫಲಾನುಭವಿಯು ಮಂಡಳಿಯ ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕು.

ಇದಕ್ಕೆ ಯಾವ ಯಾವ ದಾಖಲೆಗಳು ಬೇಕು ಎಂದು ನೋಡುವುದಾದರೆ ಮಂಡಳಿ ನೀಡಿರುವ ಗುರುತಿನ ಚೀಟಿ, ಮಕ್ಕಳ ಛಾಯಾಚಿತ್ರ, ಉದ್ಯೋಗ ದೃಢೀಕರಣ ಪತ್ರ, ಬ್ಯಾಂಕ್ ಖಾತೆ ಪುರಾವೆ, ಡಿಸ್ಚಾರ್ಜ್ ಆದ ಪ್ರತಿ ಮತ್ತು ದಾಖಲೆಗಳು ಮಗುವಿನ ಜನನ ಪ್ರಮಾಣ ಪತ್ರ, ಮಗುವಿನ ಜನನದ ಆರು ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು, ಮೂರು ವರ್ಷದ ವರೆಗೂ ಪ್ರತಿ ವರ್ಷ ಅರ್ಜಿ ಸಲ್ಲಿಸಬೇಕು ಮಗುವಿನ ಜೀವಿತ ಕುರಿತು ಪ್ರತಿ ಅಪ್ಡೇಟ್ ಸಲ್ಲಿಸತಕ್ಕದ್ದು.

[irp]