ನನಗೂ ಹಾರ್ಟ್ ಅಟ್ಯಾಕ್ ಆಗಿತ್ತು ದೊಡ್ಡ ದೊಡ್ಡ ನಟರೇ ಅಭಿಮಾನಿಗಳ ಸಲುವಾಗಿ ಹೊಡೆದಾಟ ಬೇಕಾ? - Karnataka's Best News Portal

ದೊಡ್ಡ ದೊಡ್ಡ ಸ್ಟಾರ್ ನಟರೆ ಅಭಿಮಾನಿಗಳಿಗಾಗಿ ಹೊಡೆದಾಟ ಬೇಕಾ?ನಟ ವಿನೋದ್ ರಾಜ್ ಅವರು ಜೀವನದ ಬಗ್ಗೆ ಕೆಲವೊಂದಷ್ಟು ಸ್ವಾರಸ್ಯಕರವಾದ ಮಾಹಿತಿಗಳನ್ನು ತಮ್ಮ ಮನಸ್ಸಿನಲ್ಲಿ ಇರುವಂತಹ ಸಾಕಷ್ಟು ಮಾತುಗಳನ್ನು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದರು. ಪ್ರತಿಯೊಬ್ಬ ಸ್ಟಾರ್ ನಟರನ್ನು ನೋಡಿ ನಾವು ಕಲಿಯುವುದು ಇದ್ದೇ ಇರುತ್ತದೆ ಪುನೀತ್ ರಾಜ್‌ಕುಮಾರ್ ಅವರು ಆಹಾರ ಪ್ರಿಯರು ಇದು ಕರ್ನಾಟಕದ ಜನತೆ ಎಲ್ಲರಿಗೂ ಸಹ ಗೊತ್ತು.

ಹಾಗೆ ವಿನೋದ್ ರಾಜ್ ಅವರು ಸಹ ಚಿಕ್ಕ ವಯಸ್ಸಿನಿಂದ ಲೀಲಾವತಿಯವರು ಚೆನ್ನಾಗಿ ತಿನ್ನಿಸುತ್ತಿದ್ದರು ಬೇಕಾದಂತಹ ಎಲ್ಲಾ ಆಹಾರಗಳನ್ನು ಮಾಡಿಕೊಡುತ್ತಿದ್ದರು ನನಗೆ ಚಿಕ್ಕ ವಯಸ್ಸಿನಿಂದ ತಿಂದು ಅಭ್ಯಾಸ ಆದ್ದರಿಂದ ನಾನು ಚೆನ್ನಾಗಿ ತಿನ್ನಲು ಇಷ್ಟಪಡುತ್ತೇನೆ ನಾನು ದೊಡ್ಡ ದೊಡ್ಡ ಹೋಟೆಲ್ಗಳಿಗೆ ಹೋಗಿ ತಿನ್ನುವುದಕ್ಕಿಂತ ಬೀದಿಬದಿಯಲ್ಲಿ ಮಾಡುವಂತಹ ಆಹಾರ ಪದಾರ್ಥಗಳನ್ನು ಇಷ್ಟಪಡುತ್ತೇನೆ.


ಈಗ ನಮಗೆ ನಮ್ಮ ಹತ್ತಿರ ತಿನ್ನಲು ದುಡ್ಡಿದೆ ಆದರೆ ಅದರ ಜೊತೆಗೆ ಸಾಕಷ್ಟು ಮಾತ್ರೆಗಳನ್ನು ಸಹ ತೆಗೆದುಕೊಳ್ಳಬೇಕು ಇದು ಎಂಥ ಜೀವನ ಎಂದು ವಿನೋದ್ ರಾಜ್ ಅವರು ಹೇಳಿದ್ದಾರೆ. ಪುನೀತ್ ಅವರನ್ನು ನೋಡಿ ಕಲಿಯುವುದು ನಮಗೆ ತುಂಬಾ ಇತ್ತು ಹಾಗೆಯೇ ಶಿವಣ್ಣ ಅವರು ತುಂಬಾ ತೂಕದ ಮನುಷ್ಯ ಕಾಲವನ್ನು ಗೆಲ್ಲುವುದರಲ್ಲಿ ಶಿವಣ್ಣ ಏಮಾರಿಲ್ಲ ಯಾವ ಸಿನಿಮಾ ಬಂದರೂ ಸಹ ಒಪ್ಪಿಕೊಂಡು ಅದನ್ನು ಮಾಡುತ್ತಿದ್ದರು.

ಈ ರೀತಿ ಮಾಡಿದ್ದರಿಂದಲೇ ಅವರು ಒಳ್ಳೆಯ ಹೆಸರನ್ನು ಮಾಡಿ ಚೆನ್ನಾಗಿ ಬಾಳುತ್ತಿದ್ದಾರೆ. ಎಲ್ಲಾ ಸ್ಟಾರ್ ನಟರು ಸಹ ಚೆನ್ನಾಗಿ ಇದ್ದಾರೆ ಅಂದರೆ ಯಾವುದೇ ರೀತಿಯಾದಂತಹ ವೈಮನಸ್ಸು ಏನು ಸಹ ಇಲ್ಲದೆ ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಿಕೊಂಡು ಹೋಗುತ್ತಿದ್ದಾರೆ ಆದರೆ ಅಭಿಮಾನಿಗಳು ಹೀರೋಗಳ ಮಧ್ಯೆ ಒಂದು ಗೋಡೆಯನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅಭಿಮಾನಿಗಳನ್ನು ನೋಡಿ ಕಲಾವಿದರು ಕಲಿಯಬೇಕು ಬದಲಿಗೆ ಅಭಿಮಾನಿಗಳನ್ನು ನೋಡಿ ಜಗಳ ಮಾಡುವುದನ್ನು ಕಲಿಯಬಾರದು ಇಲ್ಲಿ ಕಲೆ ಎಲ್ಲಿರುತ್ತದೆ ಅದು ಕೊ’ಲೆ’ಯಾಗಿ ಬಿಡುತ್ತದೆ. ಕಲಾ ಸರಸ್ವತಿಯನ್ನು ಇಟ್ಟುಕೊಂಡು ನಿನಗಿಂತ ನಾ ಹೆಚ್ಚು ನನಗಿಂತ ನೀ ಹೆಚ್ಚು ಎನ್ನುವಂತಹ ಮಾತುಗಳು ಎಂದಿಗೂ ಸಹ ನಮ್ಮ ಕನ್ನಡದ ಸ್ಟಾರ್ ನಟರುಗಳ ಮಧ್ಯೆ ಬರಬಾರದು.

ಯಾವುದು ಸಹ ಅತಿರೇಕಕ್ಕೆ ಹೋಗಬಾರದು ಎಲ್ಲಾ ಸ್ಟಾರ್ ನಟರುಗಳು ಸಹ ನಮ್ಮ ಕನ್ನಡ ಚಲನಚಿತ್ರರಂಗಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಆದ್ದರಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರತಿಯೊಬ್ಬ ನಟರು ಸಹ ಪ್ರಾಮುಖ್ಯತೆ ಹೊಂದಿದ್ದಾರೆ. ಅದರಿಂದ ಎಲ್ಲಾ ಅಭಿಮಾನಿಗಳು ಸಹ ಎಲ್ಲಾ ನಟರನ್ನು ಇಷ್ಟಪಟ್ಟರೆ ನಮ್ಮ ಕನ್ನಡ ಚಿತ್ರರಂಗ ಇನ್ನೂ ಎತ್ತರಕ್ಕೆ ಹೋಗುತ್ತದೆ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಕನ್ನಡದ ಎಲ್ಲಾ ನಟರು ಹಾಗೂ ಅಭಿಮಾನಿಗಳು ಒಂದಾಗಿದ್ದರೆ ನಮ್ಮ ಚಂದನವನವನ್ನು ಮೇಲುಗೈ ಮಾಡಬಹುದು.

Leave a Reply

Your email address will not be published. Required fields are marked *