12 ರಾಶಿಗಳಲ್ಲಿ ಯಾವ ರಾಶಿಗೆ ಯಾವ ದಿಕ್ಕುಗಳು ಆಗಿಬರುತ್ತದೆ ಗೊತ್ತಾ ? ಈ ವಿಡಿಯೋ ನೋಡಿ - Karnataka's Best News Portal

ಯಾವ ರಾಶಿಗೆ ಯಾವ ದಿಕ್ಕು…..||
ರಾಶಿ ಚಕ್ರದಲ್ಲಿ 12 ರಾಶಿಗಳು ಇದ್ದು ಒಂದೊಂದು ರಾಶಿಗೆ ಒಂದೊಂದು ರೀತಿಯಾದಂತಹ ಫಲಗಳು ಒಳ್ಳೆಯ ದಿನಗಳು ಹಾಗೆ ಒಳ್ಳೆಯ ದಿಕ್ಕು ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ ಅದಕ್ಕೆ ತಕ್ಕಂತೆ ಆ ರಾಶಿಯವರು ತಮಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದ ಕೆಲವೊಂದಷ್ಟು ಶಾಸ್ತ್ರಗಳನ್ನು ಕೇಳುವುದರ ಮುಖಾಂತರ ಯಾವ ರೀತಿ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೆ ಯಾವ ನಿಯಮವನ್ನು ಅನುಸರಿಸಬೇಕು ಹೀಗೆ ಹಲವಾರು ಮಾಹಿತಿಗಳನ್ನು ತಿಳಿದುಕೊಂಡು ನಂತರ ಕೆಲಸಗಳನ್ನು ಮಾಡುತ್ತಿರುತ್ತಾರೆ.

ಅದೇ ರೀತಿಯಾಗಿ ಪ್ರತಿಯೊಂದು ರಾಶಿಯವರಿಗೂ ಕೂಡ ಯಾವ ದಿಕ್ಕು ಒಳ್ಳೆಯದಾಗುತ್ತದೆ ಹಾಗೂ ಅವರೇನಾದರೂ ಮುಂದಿನ ದಿನಗಳಲ್ಲಿ ಮನೆಯನ್ನು ನಿರ್ಮಿಸಬೇಕಾದರೆ ಅವರು ತಮಗೆ ಎಲ್ಲ ರೀತಿಯಲ್ಲೂ ಲಾಭವನ್ನು ತಂದು ಕೊಡುವಂತಹ ದಿಕ್ಕನ್ನು ತಿಳಿದುಕೊಂಡು ಆದಿಕ್ಕಿನಲ್ಲಿ ಮನೆಯನ್ನು ಕಟ್ಟುವುದಾಗಲಿ ಎಲ್ಲವನ್ನು ಮಾಡಬೇಕು.


ಈ ರೀತಿಯಾಗಿ ನೀವು ನಿಮ್ಮ ರಾಶಿಗೆ ಅನುಗುಣವಾಗುವಂತೆ ಲಾಭವನ್ನು ತಂದು ಕೊಡುವ ದಿಕ್ಕಿನಲ್ಲಿ ಮನೆಯನ್ನು ನಿರ್ಮಿಸುವುದ ರಿಂದ ನಿಮಗೆ ಎಲ್ಲಾ ರೀತಿಯಲ್ಲಿಯೂ ಕೂಡ ಶುಭಕಾರ್ಯಗಳು ಎನ್ನುವುದು ನೆರವೇರುತ್ತದೆ! ಹಾಗಾದರೆ ಯಾವ ರಾಶಿಯವರಿಗೆ ಯಾವ ದಿಕ್ಕು ಒಳ್ಳೆಯ ಫಲಗಳನ್ನು ಕೊಡುತ್ತದೆ, ಹಾಗೂ ಅವರಿಗೆ ಏನಾದರೂ ಆದಿಕ್ಕು ಸರಿ ಹೊಂದುತ್ತಿಲ್ಲ ಎಂದು ಮನೆಯನ್ನು ಒಡೆಸಿ ಹಾಕಿ ಬೇರೆ ದಿಕ್ಕಿನಲ್ಲಿ ಮನೆಯನ್ನು ನಿರ್ಮಾಣ ಮಾಡಿದರೆ ಏನೆಲ್ಲ ತೊಂದರೆಗಳನ್ನು ಅನುಭವಿಸುತ್ತಾರೆ.

ಹೀಗೆ ಈ ವಿಷಯವಾಗಿ ಈ ದಿನ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ, ರಾಶಿ ಚಕ್ರದಲ್ಲಿ 12 ರಾಶಿಗಳಿದ್ದು ಒಂದೊಂದು ರಾಶಿಗೆ ಒಂದೊಂದು ದಿಕ್ಕು ಎಂಬಂತೆ ಇರುತ್ತದೆ ಅದೇ ರೀತಿಯಾಗಿ ಮೊದಲನೆಯದಾಗಿ ಮೇಷ ರಾಶಿ ಪೂರ್ವ ದಿಕ್ಕು,ವೃಷಭ ರಾಶಿ ದಕ್ಷಿಣ ದಿಕ್ಕು, ಮಿಥುನ ರಾಶಿ ಪಶ್ಚಿಮ ದಿಕ್ಕು, ಕರ್ಕಾಟಕ ರಾಶಿ ಉತ್ತರ ದಿಕ್ಕು,.

ಸಿಂಹ ರಾಶಿ ಪೂರ್ವ ದಿಕ್ಕು, ಕನ್ಯಾ ರಾಶಿ ದಕ್ಷಿಣ ದಿಕ್ಕು, ತುಲಾ ರಾಶಿ ಪಶ್ಚಿಮ ದಿಕ್ಕು, ವೃಶ್ಚಿಕ ರಾಶಿ ಉತ್ತರ ದಿಕ್ಕು, ಧನಸ್ಸು ರಾಶಿ ಪೂರ್ವ ದಿಕ್ಕು, ಮಕರ ರಾಶಿ ದಕ್ಷಿಣ ದಿಕ್ಕು, ಕುಂಭ ರಾಶಿ ಪಶ್ಚಿಮ ದಿಕ್ಕು, ಮೀನ ರಾಶಿ ಉತ್ತರ ದಿಕ್ಕು, ಹೀಗೆ ಯಾವ ರಾಶಿಗೆ ಯಾವ ದಿಕ್ಕು ಸರಿ ಹೊಂದುತ್ತದೆ ಎಂದು ನೋಡುವುದಾದರೆ.

ಮೊದಲನೆಯದಾಗಿ ಮೇಷ ರಾಶಿಯಿಂದ ನಾಲ್ಕನೇ ರಾಶಿಯಲ್ಲಿರುವ ದಿಕ್ಕು ಅವರಿಗೆ ಸರಿಹೊಂದುತ್ತದೆ, ಅಂದರೆ ಕರ್ಕಾಟಕ ರಾಶಿಯಲ್ಲಿರುವ ಉತ್ತರ ದಿಕ್ಕು ಅವರಿಗೆ ಸರಿಹೊಂದುತ್ತದೆ. ಈ ರೀತಿಯಾಗಿ ಅವರ ರಾಶಿಯಿಂದ ನಾಲ್ಕನೇ ರಾಶಿಯಲ್ಲಿರುವ ದಿಕ್ಕು ಅವರಿಗೆ ಸರಿಹೊಂದುತ್ತದೆ ಎಂದೇ ಹೇಳಬಹುದು ಆದ್ದರಿಂದ ಇಂಥವರು ಈ ದಿಕ್ಕಿಗೆ ಅನುಗುಣವಾಗಿ ಮನೆಯನ್ನು ಹೊಸದಾಗಿ ನಿರ್ಮಿಸುವುದರಿಂದ ಹೆಚ್ಚಿನ ಒಳ್ಳೆಯ ಫಲ ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *