ಮೀನ ರಾಶಿ ಖುಷಿ ತರೋ ಗುರು ಪರಿವರ್ತನೆ..ಹೆಗಿರಲಿದೆ ನೋಡಿ ಮುಂದಿನ ಜೀವನ... - Karnataka's Best News Portal

ಮೀನ ರಾಶಿ ಗುರು ಪರಿವರ್ತನೆ…||ಮೀನ ರಾಶಿಯವರಿಗೆ ಗುರು ಅಧಿಪತಿಯಾಗಿದ್ದು ಏಪ್ರಿಲ್ 22 2023 ರಂದು ಮೇಷ ರಾಶಿಗೆ ಹೋಗುತ್ತಿದ್ದಾನೆ ಹಾಗೂ ಒಂದು ವರ್ಷಗಳ ಕಾಲ ಅಲ್ಲಿಯೇ ಇರುತ್ತಾನೆ. ಆದ್ದರಿಂದ ಮೀನ ರಾಶಿಯವರಿಗೆ ಗುರು ಪರಿವರ್ತನೆಯಾಗುತ್ತಿರುವುದರಿಂದ ಯಾವುದೆಲ್ಲ ರೀತಿಯ ಶುಭಫಲ ಗಳನ್ನು ಪಡೆದುಕೊಳ್ಳಬಹುದು ಹಾಗೂ ಏನೆಲ್ಲ ಬದಲಾವಣೆಗಳು ಉಂಟಾಗುತ್ತದೆ ಎನ್ನುವ ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ.

ಗುರುವಿನ ಪರಿವರ್ತನೆಯಿಂದ ಮೀನ ರಾಶಿಯವರಿಗೆ ಹಣಕಾಸಿನ ಹೊಳೆಯೇ ಹರಿಯುತ್ತದೆ ಎಂದೆ ಹೇಳಬಹುದು. ಅದರಲ್ಲೂ ಗುರು ನಿಮಗೆ ಅಧಿಪತಿಯಾಗಿರುವುದರಿಂದ ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಹಾಗೂ ಮನೆಗೆ ಬೇಕಾಗುವಂತಹ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಳ್ಳುವ ಸಮಯ ಬರುತ್ತದೆ. ಜೊತೆಗೆ ಯಾರಾದರೂ ಕೆಲಸದಲ್ಲಿ ಇದ್ದರೆ ಅಂತವರಿಗೆ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಸಂಬಳ ಹೆಚ್ಚಾಗುವ ಸಾಧ್ಯತೆಯೂ ಕೂಡ ಇದೆ.


ಹಾಗೂ ಒಂದಷ್ಟು ಒಳ್ಳೆಯ ಮೂಲಗಳಿಂದ ನಿಮಗೆ ಹಣ ಬರುತ್ತದೆ. ವ್ಯಾಪಾರ ವ್ಯವಹಾರ ಮಾಡುತ್ತಿರುವವರಿಗೆ ನಿಮ್ಮ ಕೆಲಸದಲ್ಲಿ ಹೆಚ್ಚು ಸೇಲ್ಸ್ ವ್ಯವಹಾರ ನಡೆಯುತ್ತದೆ ಇದರಿಂದ ಉತ್ತಮ ಹಣವನ್ನು ಕೂಡ ಪಡೆಯುತ್ತೀರಿ. ಯಾರಾದರೂ ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರೆ ಅದರಿಂದ ಉತ್ತಮ ಲಾಭವನ್ನು ಕೂಡ ಪಡೆದುಕೊಳ್ಳು ತ್ತೀರಿ. ಅದರಲ್ಲೂ ನೀವು ಯಾವ ಕೆಲಸವನ್ನು ಹೆಚ್ಚು ಶ್ರಮದಿಂದ ಆಸಕ್ತಿಯಿಂದ ಮಾಡುತ್ತೀರೋ ಅದಕ್ಕೆ ತಕ್ಕ ಫಲವನ್ನು ಕೂಡ ಪಡೆದುಕೊಳ್ಳುತ್ತೀರಿ.

ಅದರಲ್ಲೂ ಯಾವ ವ್ಯಕ್ತಿ ಪ್ರಾಮಾಣಿಕವಾಗಿ ದುಡಿಯುತ್ತಾನೋ ಅವನಿಗೆ ಉತ್ತಮವಾದಂತಹ ದಾರಿಯನ್ನು ತೋರಿಸುವ ಗುರು ಆದ್ದರಿಂದ ಗುರು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ! ಹಾಗೆಯೇ ಗುರು ಗಾತ್ರದಲ್ಲಿ ಎಷ್ಟು ದೊಡ್ಡದಾಗಿ ಇದ್ದಾನೋ ಅದೇ ರೀತಿ ಗುರುವಿನ ಒಳ್ಳೆಯ ಫಲಗಳು ಕೂಡ ನಿಮಗೆ ಅಷ್ಟೇ ದೊಡ್ಡದಾಗಿರುತ್ತದೆ. ನೀವೇನಾದರೂ ಬೇರೆ ಕೆಲಸಗಳಿಗೆ ಪ್ರಯತ್ನಿಸುತ್ತಿದ್ದರೆ ಅಲ್ಲಿ ಉತ್ತಮವಾದ ಸ್ಥಾನ ಸಿಗುತ್ತದೆ.

ಜೊತೆಗೆ ಅದರಿಂದ ಹೆಚ್ಚು ಹಣವು ಕೂಡ ಸಿಗುತ್ತದೆ. ನೀವೇನಾದರೂ ಬ್ಯಾಂಕ್ ಗಳಲ್ಲಿ ಲೋನ್ ಗೆ ಅರ್ಜಿಯನ್ನು ಹಾಕಿದ್ದರೆ ಯಾವುದೇ ರೀತಿಯ ತೊಂದರೆ ತಾಪತ್ರಯ ವಿಲ್ಲದೆ ಲೋನ್ ಸುಲಭವಾಗಿ ಆಗುತ್ತದೆ. ಗುರು ನಿಮಗೆ ಎಲ್ಲಾ ರೀತಿಯಲ್ಲೂ ಒಳ್ಳೆಯದನ್ನು ಮಾಡುತ್ತಿದ್ದರೆ ನಿಮಗೆ ಶತ್ರುಗಳ ಸಂಖ್ಯೆಯೂ ಕೂಡ ಹೆಚ್ಚಾಗಬಹುದು, ಆದರೆ ಗುರು ಇವೆಲ್ಲವನ್ನೂ ಕೂಡ ಸರಿಪಡಿಸುವಂತೆ ನಿಮಗೆ ಒಳ್ಳೆಯ ಬುದ್ಧಿಶಕ್ತಿಯನ್ನು ಕೊಡುತ್ತಾನೆ.

ಮೇಷ ರಾಶಿಯವರಿಗೆ 2023 ಹಾಗೂ 2024 ಮೇ1 ರ ತನಕ ಹಣಕಾಸಿನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಗುರು ನಿಮ್ಮನ್ನು ನೋಡಿಕೊಳ್ಳುತ್ತಾನೆ. ಮೇಷ ರಾಶಿಯ ಮಕ್ಕಳ ವಿದ್ಯಾಭ್ಯಾಸ ದಲ್ಲಿ ಏಳಿಗೆಯಾಗುವoತಹ ಸೂಚನೆಗಳು ಬರುತ್ತಿದೆ. ಹಾಗೂ ಕೆಲವೊಬ್ಬರಿಗೆ ಈ ಸಮಯದಲ್ಲಿ ಮಕ್ಕಳ ಭಾಗ್ಯವೂ ಕೂಡ ಕೂಡಿ ಬರಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *