ಹೆಣ್ಣು ಮಕ್ಕಳ ರೀತಿಯಲ್ಲಿ ಜಡೆ ಇರುವ ಗಣೇಶ‌.ಪ್ರತಿದಿನ ಗಣಪತಿಯ ಹೊಟ್ಟೆ ಬೆಳೆಯುತ್ತಿದೆ ನೀವೆ ನೋಡಿ - Karnataka's Best News Portal

ಪ್ರತಿ ದಿನ ಗಣಪತಿ ಹೊಟ್ಟೆ ಬೆಳೆಯುತ್ತಿದೆ ನಿಮ್ಮ ಕಣ್ಣಾರೆ ನೋಡಿ ಈ ಗಣಪತಿ ಕೈಯಲ್ಲಿ ನರಸಿಂಹಸ್ವಾಮಿ ಯನ್ನು ನೋಡಬಹುದು.ಈ ದೇವಸ್ಥಾನಕ್ಕೆ ಕುಜ ದೋಷ ನಿವಾರಣೆಗಾಗಿ ದೇಶದ ನಾನಾ ಕಡೆಗಳಿಂದ ಸಾವಿರಾರು ಭಕ್ತರು ಬರುತ್ತಾರೆ ಕುಜ ದೋಷ ನಿವಾರಣೆ ಯಾಗಿರುವ ಸಾವಿರಾರು ಉದಾಹರಣೆಗಳು ಕಂಡುಬರುತ್ತದೆ ಕೋಟೆ ನಾಡು ಚಿತ್ರದುರ್ಗದಿಂದ 34 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ ಹೊಳಲ್ಕೆರೆ ತಾಲ್ಲೂಕು ಬರುತ್ತದೆ ಇದೇ ಹೊಳಲ್ಕೆರೆ ತಾಲೂಕಿನಲ್ಲಿ ನೆಲೆಸಿರುವ ಹೊಟ್ಟೆ ಗಣಪತಿ ಸ್ವಾಮಿ ದೇವಸ್ಥಾನ.

ಈ ಜಡೆ ಗಣಪತಿಯನ್ನು ತುಂಬಾ ಭಕ್ತರು ಹೊಟ್ಟೆ ಗಣಪತಿ ಎಂದೇ ಕರೆಯುತ್ತಾರೆ 1475ರಲ್ಲಿ ಚಿತ್ರದುರ್ಗದ ಪಾಳೇಗಾರರಾದ ಮದಕರಿ ನಾಯಕನ ಮೈದನ ಗುಲ್ಲಪ್ಪ ನಾಯಕ ಎಂಬ ಅವರು ಈ ಗಣಪತಿ ವಿಗ್ರಹವನ್ನು ಬಯಲಿನಲ್ಲಿ ಪ್ರತಿಷ್ಠಾಪಿಸಿದ್ದಾರೆ ಹಾಗಾಗಿ ಇದನ್ನು ಬಯಲು ಗಣಪತಿ ಎಂದೇ ಕರೆಯುತ್ತಿದ್ದರು ನಂತರ ಇತ್ತೀಚಿನ ಸಮಯದಲ್ಲಿ ಬಯಲು ಗಣಪತಿಗೆ ದೇವಾಲಯ ನಿರ್ಮಾಣ ಮಾಡಲಾಗಿದೆ ಈ ಗಣಪತಿ ದೇವರನ್ನು ಅತ್ಯಂತ ವಿಸ್ಮಯಕಾರಿ ಗಣಪತಿ ಎಂದೇ ಭಕ್ತರು ಕರೆಯುತ್ತಾರೆ.

ಈ ಜಡೆಗಣಪತಿಯು ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಹೊಟ್ಟೆ ಗಣಪತಿಯೋ ಬರೋಬ್ಬರಿ 17 ಅಡಿ ಎತ್ತರ ಇದೆ ಭಾರತದ ನಾಲ್ಕನೇ ಅತಿ ದೊಡ್ಡ ಗಣಪತಿ ಎಂದು ಪ್ರಸಿದ್ಧಿ ಪಡೆದುಕೊಂಡಿದೆ ಈ ಜಡೆ ಗಣಪತಿಯು ಒಂದೇ ಶಿಲೆಯಲ್ಲಿ ನಿರ್ಮಿತವಾಗಿದೆ ಮತ್ತೊಂದು ವಿಶೇಷತೆ ಎಂದರೆ ಈ ಗಣಪತಿ ದೇವರು ಜಡೆಯನ್ನು ಹೊಂದಿದೆ.

ಎಡ ಕೈ ಭಾಗದಲ್ಲಿ ಶ್ರೀ ನರಸಿಂಹ ಸ್ವಾಮಿ ಮುಖದ ಆಕೃತಿಯನ್ನು ನೋಡಬಹುದು. ಗಣಪತಿ ದೇವರು ಶ್ರೀ ನರಸಿಂಹ ಸ್ವಾಮಿಯ ಜೊತೆ ನೆಲೆಸಿರುವುದರಿಂದ ಕುಜ ದೋಷ ಪರಿಹಾರಕ್ಕೆ ಈ ಗಣಪತಿ ದೇವರು ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ ಈ ಗಣಪತಿ ಮೂರ್ತಿಯನ್ನು ಪಾಳೆಗಾರರು ಪ್ರತಿಷ್ಠಾಪಿಸಿದಾಗ ಗಣಪತಿಯ ಎತ್ತರ 4 ಅಡಿ ಇತ್ತು.

ಆದರೆ ಪ್ರತಿದಿನ ಗಣಪತಿ ಬೆಳೆದು 4 ಅಡಿಯಿಂದ 17 ಅಡಿ ಎತ್ತರವಾಗಿದೆ ಗಣಪತಿ ದೇವರು ಇನ್ನೂ ಬೆಳೆಯದ ಹಾಗೆ ಬಯಲು ಪ್ರದೇಶದಲ್ಲಿ ಇದ್ದ ಗಣಪತಿ ಬಿಗ್ ಬಂದನ ಮಾಡಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ದೇವಸ್ಥಾನ ನಿರ್ಮಾಣ ಮಾಡಿದ ಬಳಿಕ ಗಣಪತಿ ದೇವರು ಬೆಳೆಯುವುದು ನಿಲ್ಲಿಸಿದೆ ಎಂದು ಹೇಳಲಾಗಿದೆ.

ದೇವಸ್ಥಾನ ನಿರ್ಮಾಣ ಮಾಡಿದ ಬಳಿಕ ಗಣಪತಿ ದೇವರ ಹೊಟ್ಟೆ ಬೆಳೆಯುತ್ತಿದೆ ಪ್ರತಿ ವರ್ಷ ಒಂದು ಇಂಚು ದಪ್ಪವಾಗುತ್ತಿದೆ ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ ಗಣಪತಿ ದೇವರ ಬೆನ್ನಿಗೆ ಬೆಣ್ಣೆ ಸವರಿದರೆ ತುಪ್ಪ ಆಗುತ್ತದೆ. ಭಕ್ತರು ಬೇಡಿದ ಕಷ್ಟಗಳು ಈಡೇರಿದರೆ ದೇವರಿಗೆ ಬೆಣ್ಣೆ ಅಲಂಕಾರ ಮತ್ತು ಕಡುಬು ಅಲಂಕಾರ ಮಾಡಿಸುತ್ತಾರೆ ಜಡೆ ಗಣಪತಿಗೆ ಬೆಣ್ಣೆ ಅಲಂಕಾರ ಎಂದರೆ ತುಂಬಾ ಇಷ್ಟ.

Leave a Reply

Your email address will not be published. Required fields are marked *