ದಂಪತಿಗಳು ಸೇರಿದ ನಂತರ ತಲೆ ಸ್ನಾನ ಮಾಡಬೇಕಾ ? ನಿತ್ಯ ಪೂಜೆ ಹೇಗೆ ಮಾಡಬೇಕು ದಂಪತಿಗಳು ಈ ತಪ್ಪನ್ನು ಮಾತ್ರ ಮಾಡದಿರಿ - Karnataka's Best News Portal

ದಂಪತಿಗಳು ಸೇರಿದ ನಂತರ ತಲೆ ಸ್ನಾನ ಮಾಡಬೇಕಾ ? ನಿತ್ಯ ಪೂಜೆ ಹೇಗೆ ಮಾಡಬೇಕು ದಂಪತಿಗಳು ಈ ತಪ್ಪನ್ನು ಮಾತ್ರ ಮಾಡದಿರಿ

ದಂಪತಿಗಳು ಸೇರಿದ ನಂತರ ತಲೆ ಸ್ನಾನ ಮಾಡಬೇಕಾ? ನಿತ್ಯ ಪೂಜೆ ಹೇಗೆ ಮಾಡಬೇಕು…?ಸಾಮಾನ್ಯವಾಗಿ ಮನೆಯಲ್ಲಿರುವಂತಹ ಎಲ್ಲಾ ಹೆಣ್ಣು ಮಕ್ಕಳು ಕೂಡ ಪ್ರತಿನಿತ್ಯ ಶುಭವಾಗಿ ಸ್ನಾನ ಮಾಡಿ ಪ್ರತಿನಿತ್ಯ ದೇವರ ಆರಾಧನೆಯನ್ನು ಅಂದರೆ ನಿತ್ಯ ಪೂಜೆಯನ್ನು ಮಾಡುತ್ತಿರುತ್ತಾರೆ. ಆದರೆ ಮದುವೆಯಾದ ನಂತರ ದಂಪತಿಗಳು ಸೇರಿದ ನಂತರ ನಿತ್ಯ ಪೂಜೆಯನ್ನು ಹೇಗೆ ಮಾಡಬೇಕು? ಪ್ರತಿನಿತ್ಯ ಸ್ನಾನ ಮಾಡಿಯೇ ಅಂದರೆ ತಲೆ ಸ್ನಾನ ಮಾಡಿ ಪೂಜೆ ಮಾಡಬೇಕಾ?

ಅಥವಾ ತಲೆ ಸ್ನಾನ ಮಾಡದೆ ನಿತ್ಯ ಪೂಜೆಯನ್ನು ಮಾಡಬಹುದಾ? ಹೀಗೆ ಹಲವಾರು ಪ್ರಶ್ನೆಗಳು ಎಲ್ಲರಲ್ಲಿಯೂ ಕೂಡ ಇದೆ ಆದರೆ ಈ ದಿನ ಅಂತಹ ಎಲ್ಲ ಪ್ರಶ್ನೆಗಳಿಗೆ ಸೂಕ್ತವಾದಂತಹ ಉತ್ತರಗಳನ್ನು ಈ ದಿನ ಒಂದೊಂದಾಗಿ ತಿಳಿದು ಕೊಳ್ಳುತ್ತಾ ಹೋಗೋಣ. ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನಿತ್ಯ ಕುಲದೇವರ ಆರಾಧನೆಯನ್ನು ಮಾಡಿ ಪೂಜೆಯನ್ನು ಮಾಡುತ್ತೇವೆ.


ಅದೇ ರೀತಿಯಾಗಿ ಪ್ರತಿಯೊಬ್ಬರ ಮನೆಗೂ ಕೂಡ ಅವರ ಮನೆಯ ದೇವರ ಇಷ್ಟವಾದಂತಹ ವಾರ ಅಂದರೆ ಕುರದೇವರನ್ನು ಆರಾಧನೆ ಮಾಡಲು ಇರುವಂತಹ ಒಳ್ಳೆಯ ದಿನ ಇರುತ್ತದೆ, ಅಂತಹ ಸಮಯದಲ್ಲಿ ಮನೆಯಲ್ಲಿರುವoತಹ ಮಹಿಳೆಯರು ನಿಮ್ಮ ಕುಲದೇವರ ಆರಾಧನೆ ಮಾಡುವ ದಿನ ತಲೆಯಿಂದ ಸ್ನಾನವನ್ನು ಮಾಡಿಯೇ ಪೂಜೆಯನ್ನು ಮಾಡಬೇಕು. ಬದಲಿಗೆ ಬೇರೆ ದಿನಗಳಲ್ಲಿ ಮೈ ಸ್ನಾನ ಮಾಡಿ ಪೂಜೆ ಮಾಡುವುದು ಉತ್ತಮ.

ಆದರೆ ನಿಮ್ಮ ಮನೆಯ ದೇವರ ವಾರ ಅದರಲ್ಲೂ ಸೋಮವಾರ ಶುಕ್ರವಾರ ಹಾಗೂ ಅಮಾವಾಸ್ಯೆ, ಪೌರ್ಣಮಿ, ಹೀಗೆ ವಿಶೇಷವಾದಂತಹ ದಿನಗಳಿರುವಂತಹ ಆ ಸಮಯದಲ್ಲಿ ಮನೆಯಲ್ಲಿರುವಂತಹ ಮಹಿಳೆಯರು ತಲೆ ಸ್ನಾನವನ್ನು ಮಾಡಿ ದೇವರಿಗೆ ಪೂಜೆಯನ್ನು ಮಾಡಿ ದೂಪ ಹಾಕಿ ಆರಾಧನೆಯನ್ನು ಮಾಡುವುದು ಬಹಳ ಉತ್ತಮ. ಅದೇ ರೀತಿಯಾಗಿ ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕಾದಂತ ಮುಖ್ಯ ಅಂಶ ಏನು ಎಂದರೆ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ನಮ್ಮ ಪುರಾಣಗಳಲ್ಲಿ ಹೆಣ್ಣು ಮಕ್ಕಳ ಬೈತಲೆಯಲ್ಲಿ ತಾಯಿ ಗಂಗಾದೇವಿ ನೆಲೆಸಿರುತ್ತಾಳೆ ಎಂದೇ ಹೇಳುತ್ತಾರೆ.ಆದ್ದರಿಂದ ಪ್ರತಿದಿನ ಹೆಣ್ಣು ಮಕ್ಕಳು ಸ್ನಾನ ಆದ ನಂತರ ಬೈತಲೆಗೆ ಕುಂಕುಮವನ್ನು ಹಚ್ಚಿ ನಿತ್ಯ ಪೂಜೆಯನ್ನು ಮಾಡುವುದರಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಇಲ್ಲ. ಅದರಲ್ಲೂ ಹಿಂದಿನ ದಿನ ನೀವೇನಾದರೂ ದಾಂಪತ್ಯ ನಡೆಸಿದ್ದರೆ ಅದರ ಮಾರನೇ ದಿನ ಕಡ್ಡಾಯವಾಗಿ ತಲೆ ಸ್ನಾನ ಮಾಡಲೇ ಬೇಕು ಎನ್ನುವ ಅಗತ್ಯ ಇಲ್ಲ.

ಆದರೆ ದಾಂಪತ್ಯ ನಡೆಸಿದ ನಾಳೆ ಯಾವುದಾದರೂ ನೀವು ಪೂಜೆಯನ್ನು ಮಾಡುವುದಾಗಿ ಸಂಕಲ್ಪವನ್ನು ಮಾಡಿಕೊಂಡಿದ್ದರೆ, ಆ ಸಮಯದಲ್ಲಿ ನೀವು ಕಡ್ಡಾಯವಾಗಿ ತಲೆ ಸ್ನಾನವನ್ನು ಮಾಡಿ ದೇವರಿಗೆ ಪೂಜೆಯನ್ನು ಮಾಡುವುದು ಅಗತ್ಯವಾಗಿರುತ್ತದೆ. ಆದ್ದರಿಂದ ಈ ವಿಷಯಗಳನ್ನು ತಿಳಿದು ಕೊಂಡಿರುವುದು ಬಹಳ ಉತ್ತಮವಾಗಿರುತ್ತದೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]