ಗೃಹಿಣಿ ಈ ಕೆಲಸಗಳಿಂದ ಮನೆಯಲ್ಲಿ ಸದಾ ಪಾಸಿಟಿವಿಟಿ ಹೆಚ್ಚುತ್ತೆ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ...ಮನೆಯಲ್ಲಿ ತಪ್ಪದೇ ಈ‌‌ ಕೆಲಸ ಆಗಬೇಕು - Karnataka's Best News Portal

ಗೃಹಿಣಿ ಮಾಡುವ ಈ ಕೆಲಸಗಳಿಂದ, ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಇದರಿಂದ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ…!!ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪ್ರತಿಯೊಬ್ಬರು ದೇವರಲ್ಲಿ ಕೇಳಿಕೊಳ್ಳುವುದು ಒಂದೇ, ಅದೇನೆಂದರೆ ನಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲರಲ್ಲಿಯೂ ಕೂಡ ಉತ್ತಮವಾದಂತಹ ಆರೋಗ್ಯ ಕೊಡಲಿ, ಹಾಗೆಯೇ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಎದುರಾಗದೆ ಎಲ್ಲರೂ ಸುಖವಾಗಿ ಶಾಂತಿಯಾಗಿ ನೆಮ್ಮದಿಯಿಂದ ಇರಲಿ ಎಂದು ಪ್ರತಿನಿತ್ಯ ದೇವರಲ್ಲಿ ಪ್ರಾರ್ಥಿಸುತ್ತಿರುತ್ತಾರೆ.

ಹಾಗೆಯೇ ಮನೆಯಲ್ಲಿ ಯಾವಾಗಲೂ ಕೂಡ ಸಕಾರಾತ್ಮಕ ಶಕ್ತಿ ಹೆಚ್ಚಾಗಲಿ ಎಂದು ಕೆಲವೊಂದು ವಿಧಾನಗಳನ್ನು ಕೂಡ ಅನುಸರಿಸು ತ್ತಿರುತ್ತಾರೆ. ಆದರೆ ಕೆಲವೊಬ್ಬರಿಗೆ ಈ ರೀತಿಯಾದಂತಹ ಯಾವುದೇ ಅಭ್ಯಾಸ ಇರುವುದಿಲ್ಲ, ಆದರೆ ಪ್ರತಿಯೊಬ್ಬರೂ ಕೂಡ ಇಂತಹ ಒಳ್ಳೆಯ ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಎದುರಾಗುವುದಿಲ್ಲ.


ಜೊತೆಗೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಲ್ಲದರ ಲ್ಲಿಯೂ ಅಭಿವೃದ್ಧಿ, ಮನೆಯಲ್ಲಿ ಏಳಿಗೆ ಎನ್ನುವುದು ಹೆಚ್ಚಾಗುತ್ತದೆ. ಹಾಗಾದರೆ ಮನೆಯಲ್ಲಿರುವಂತಹ ಮಹಿಳೆಯರು ಮನೆಯಲ್ಲಿ ಯಾವ ವಿಧಾನಗಳನ್ನು ಅನುಸರಿಸಬೇಕು? ಹೀಗೆ ಯಾವ ವಿಧಾನವನ್ನು ಅನುಸರಿಸುವುದರಿಂದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.ಮೊದಲನೆಯದಾಗಿ ಮನೆಯಲ್ಲಿರುವಂತಹ ಮಹಿಳೆಯರು ಬೆಳಗ್ಗಿನ ಸಮಯ ಬೇಗ ಎದ್ದು ಮೊದಲು ಸ್ನಾನವನ್ನು ಮಾಡಬೇಕು.

ನಂತರ ಬೇರೆ ಎಲ್ಲಾ ಕೆಲಸಗಳನ್ನು ಮಾಡುವುದು ಉತ್ತಮ ಈ ರೀತಿ ಯಾಗಿ ಮನೆಯಲ್ಲಿ ಮಹಿಳೆಯರು ಬೇಗ ಎದ್ದು ಸ್ನಾನವನ್ನು ಮುಗಿಸಿ ನಂತರ ಬೇರೆ ಕೆಲಸವನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಒಂದು ಲಕ್ಷ್ಮಿ ದೇವಿಯ ಆಶೀರ್ವಾದ ನೆಲೆಸಿರುತ್ತದೆ ಎಂದೇ ಹೇಳಬಹುದು. ಜೊತೆಗೆ ಪ್ರತಿನಿತ್ಯ ಹೊಸ್ತಿಲಿನ ಪೂಜೆಯನ್ನು ಮಾಡಬೇಕು ಅದರಲ್ಲೂ ಹೊಸ್ತಿಲಿನಲ್ಲಿ ಅರಿಶಿಣ ಕುಂಕುಮವನ್ನು ಹಾಕಿ ರಂಗೋಲಿಯನ್ನು ಬಿಟ್ಟು ಪೂಜೆಯನ್ನು ಮಾಡುವುದರಿಂದ.

ನಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ಶಕ್ತಿ ಬರುವುದಿಲ್ಲ, ಬದಲಿಗೆ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಇದರಿಂದ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಆ ಮನೆಯ ಮೇಲೆ ಇರುತ್ತದೆ. ಈ ರೀತಿ ಪೂಜೆ ಮಾಡಿ ಬಂದು ನಂತರ ಮೊದಲನೆಯದಾಗಿ ಅಡುಗೆ ಮನೆಯಲ್ಲಿ ನೀವು ಹಾಲನ್ನು ಕಾಯಿಸುವುದರ ಮುಖಾಂತರ ನಿಮ್ಮ ಅಡುಗೆಯ ಕೆಲಸವನ್ನು ಮಾಡುವುದು ಬಹಳ ಶುಭ ಶಕುನ ಎಂದೇ ಹೇಳುತ್ತಾರೆ.

ಏಕೆಂದರೆ ಮನೆಯಲ್ಲಿ ಅಗ್ನಿ ದೇವನ ಆಶೀರ್ವಾದ ಇರಲೇಬೇಕು ಆದ್ದರಿಂದ ಮೊದಲನೆಯದಾಗಿ ಹಾಲನ್ನು ಕಾಯಿಸುವುದರ ಮುಖಾಂತರ ಅಗ್ನಿ ದೇವರನ್ನು ಪ್ರಾರ್ಥಿಸಿ ಹಾಲನ್ನು ಕಾಯಿಸುವುದು ಉತ್ತಮ. ಜೊತೆಗೆ ಮನೆಯಲ್ಲಿ ಯಾವುದೇ ರೀತಿಯಾದಂತಹ ಧೂಳು, ಕಸ ಇರದಂತೆ ನೋಡಿಕೊಳ್ಳುವುದು ಉತ್ತಮ. ಈ ರೀತಿ ಇದ್ದರೆ ಮನೆಯಲ್ಲಿ ನಕಾರತ್ಮಕ ಶಕ್ತಿ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *