ನಾನು ಯಾರಿಗು ಮೋಸ ಮಾಡಿಲ್ಲ ಇಂದು ಸೋತಿರಬಹುದು ಗೆದ್ದೇ ಗೆಲ್ತೀನಿ..ನೊಡ್ತಾ ಇರಿ ರವಿಚಂದ್ರನ್ ಬದುಕಲ್ಲಿ ಹೀಗಾಗಿದ್ಯಾಕೆ...! - Karnataka's Best News Portal

ನಾನು ಯಾರಿಗು ಮೋಸ ಮಾಡಿಲ್ಲ ಇಂದು ಸೋತಿರಬಹುದು ಗೆದ್ದೇ ಗೆಲ್ತೀನಿ..ನೊಡ್ತಾ ಇರಿ ರವಿಚಂದ್ರನ್ ಬದುಕಲ್ಲಿ ಹೀಗಾಗಿದ್ಯಾಕೆ…!

ನಾನು ಯಾರಿಗೂ ಮೋಸ ಮಾಡಿಲ್ಲ ಇಂದು ಸೋತಿರಬಹುದು ಆದರೆ ಗೆದ್ದೇ ಗೆಲ್ತೀನಿ.ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪನ್ನು ನೀಡಿದ ಪ್ರಳಯಾಂತಕ ಇವರು ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ರಸಿಕರಿಗೆ ಪಿತಾಮಹನಾಗಿ ಪ್ರೇಮಿಗಳಿಗೆ ಸವಾಲು ಹಾಕಿ ಪ್ರೇಮಲೋಕ ಸೃಷ್ಟಿಸಿದವರು ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆಯೊಂದಿಗೆ ಬೆಳ್ಳಿ ಪರದೆಗೆ ಹೊಸ ರಂಗು ತಂದ ಹಳ್ಳಿ ಮೇಷ್ಟ್ರು. ತಮ್ಮ ತಂದೆ ಸ್ಥಾಪಿಸಿದ ಈಶ್ವರಿ ಪ್ರೊಡಕ್ಷನ್ ನ ಮೂಲಕ ಹಲವಾರು ಚಿತ್ರಗಳನ್ನು ಮಾಡಿ ರವಿಚಂದ್ರನ್ ನಟಿಸಿ ನಿರ್ದೇಶಿಸಿ ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತದೆ

ನಿರ್ದೇಶಕನ ರೂಪದಲ್ಲಿ ರವಿಚಂದ್ರನ್ ಅವರು ಬಹು ಮೌಲಿಕ ಕೊಡುಗೆ ತಾಂತ್ರಿಕ ಪರಿಪೂರ್ಣ ಜ್ಞಾನ ಹೊಂದಿರುವ ಇವರು ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು ಇನ್ನೊಂದು ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶ ಎಂದರೆ ಪ್ರತಿಯೊಂದು ಚಿತ್ರದಲ್ಲಿ ಸಂಗೀತ ಹೊಸತನದಿಂದ ಕೂಡಿರುತ್ತದೆ ರಾಮಾಚಾರಿ ಮತ್ತು ಪ್ರೇಮಲೋಕದ ಹಾಡುಗಳು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ತುಂಬಿದೇ ಅವರ ಪ್ರತಿಭೆ ಎಂತಹದ್ದು ಎಂದು ತಿಳಿಸುತ್ತದೆ.


ಒಂದು ಕಾಲದಲ್ಲಿ ಕೋಟಿ ಕೋಟಿ ಹಣವನ್ನು ಸುರಿದು ಸಿನಿಮಾ ಮಾಡಿ ಸಕ್ಸಸ್ ಆಗುತ್ತಿದ್ದ ಸಾಹುಕಾರ ಇಂದು ಇವರ ಮೇಲೆ ಅದು ಯಾವ ಕೆಟ್ಟ ಕಣ್ಣು ಬಿದ್ದಿದೆಯೋ ಗೊತ್ತಿಲ್ಲ ಇಷ್ಟೆಲ್ಲಾ ಸಾಧನೆ ಮಾಡಿದ ಅಂಜದಗಂಡು ಪ್ರಸ್ತುತ ತಾವು ನಟಿಸುತ್ತಿರುವ ಯಾವ ಸಿನಿಮಾ ಕೂಡ ಹಿಟ್ ಆಗುತ್ತಿಲ್ಲ ಇದರಿಂದ ಸ್ವಲ್ಪ ಆರ್ಥಿಕ ಹೊಡೆತ ಅನುಭವಿಸುತ್ತಿದ್ದಾರೆ ಆದರೆ ಆ ಒಂದು ಪ್ರೋಗ್ರಾಮ್ ನಲ್ಲಿ ಹೇಳಿದ ಅವರ ಮಾತುಗಳನ್ನು ಕೇಳುತ್ತಿದ್ದರೆ ಯುವ ಪೀಳಿಗೆಯನ್ನು ಬಡಿದೆಬ್ಬಿಸುವಂತಿದೆ.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಸಮಯ ಸಂದರ್ಭ ಪರಿಸ್ಥಿತಿಯಿಂದ ನಾನು ಸೋತಿರಬಹುದು ಆದರೆ ಸತ್ತಿಲ್ಲ ನನ್ನ ಸಿನಿಮಾಗೆ ನಿಮಗೆ ನುಗ್ಗಿ ಅಭ್ಯಾಸ ಮುಂದೊಂದು ದಿನ ಉತ್ತಮ ಸಿನಿಮಾ ತೆಗೆದು ನೀವು ನುಗ್ಗುವಂತೆ ಮಾಡೇ ಮಾಡುತ್ತೇನೆ ನಾನು ಯಾರು ಎಂದು ತೋರಿಸುತ್ತೇನೆ ಎಂದು ಹಠವಾದಿ ನಮ್ಮೆಲ್ಲರಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ ಇವರ ಮಾತುಗಳನ್ನು ಕೇಳಿದ ಅಭಿಮಾನಿಗಳು ಅಣ್ಣ ನೀವು ಕಳೆದುಕೊಂಡಿರುವ ಎಲ್ಲಾ ವಸ್ತುಗಳು ಮತ್ತೆ ಎದುರಿಗೆ ಬರುತ್ತವೆ.

ಆ ಸಮಯ ಬಂದೇ ಬರುತ್ತದೆ ನಿಮಗೆ ಕನ್ನಡಿಗರ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳುತ್ತಿದ್ದಾರೆ. ನಮ್ಮೆಲ್ಲರ ಪ್ರೀತಿಯ ಕ್ರೇಜಿಸ್ಟಾರ್ ಪ್ರೇಮಲೋಕದ ವಾರಸುದಾರ ಕನ್ನಡ ಸಿನಿಮಾ ರಂಗದಲ್ಲಿ ಮತ್ತೆ ಒಳ್ಳೆಯ ಸಿನಿಮಾಗಳನ್ನು ಮಾಡಿ ಮಿಂಚಲಿ ನಮ್ಮೆಲ್ಲರನ್ನು ರಂಜಿಸಲಿ ಹೀಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿಮಾನಿಗಳು ಅವರ ಮೇಲಿನ ಪ್ರೀತಿಯನ್ನು ಇಂತಹ ಮಾತುಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

[irp]