ಮೊಬೈಲ್ ಬರುವ ಮುನ್ನ ನಮ್ಮ ಜೀವನ ಹೇಗಿತ್ತು ಗೊತ್ತಾ ಪ್ರತಿಯೊಬ್ಬರು ನೋಡಲೇಬೇಕಾದ ವಿಡಿಯೋ ಎಲ್ಲಿ ಮರೆಯಾದೆವು ಆ ಸುಂದರ ಕ್ಷಣಗಳು. - Karnataka's Best News Portal

ಎಲ್ಲಾ ಮರೆಯಾದವು ಆ ಸುಂದರ ಕ್ಷಣಗಳು.! ಮೊಬೈಲ್ ಬರುವ ಮುನ್ನ ನಮ್ಮ ಜೀವನ ಹೇಗಿತ್ತು ಗೊತ್ತಾ?//
ಈ ಹಳೆ ನೆನಪುಗಳು ಹಾಗೆ ತುಂಬಾ ಮಧುರವಾದ ನೆನಪುಗಳು. ಆ ಕಾಲದ ನೆನಪುಗಳನ್ನ ಸ್ಮರಿಸಿ ಕೊಂಡರೆ ಎಷ್ಟು ಇಷ್ಟ ಅಲ್ವಾ. 90 ರ ದಶಕದ ನಮ್ಮ ಬಾಲ್ಯದ ನೆನಪುಗಳನ್ನು ಬಹುತೇಕ ಕಳೆದುಕೊಂಡಿದ್ದೇವೆ. ಆದರೆ ಈ ದಿನ ನಮ್ಮೆಲ್ಲರ ಬಾಲ್ಯದ ಅದ್ಬುತ ಸ್ಮರಣೆಗಳನ್ನು ಒಮ್ಮೆ ಹಿಂದಿರುಗಿ ನೋಡುತ್ತಾ ಅವಲೋಕಿಸಿ ಕೊಳ್ಳೋಣ.

ಮೊದಲಿಗೆ ಇದು ಲಾಲ್ ದಂತ್ ಮಂಜನ್ ಇದು 90ರ ದಶಕದಲ್ಲಿ ಬಹಳ ಫೇಮಸ್ ಆಗಿತ್ತು. ಇದನ್ನು ಬಹುತೇಕ ನಮ್ಮ ಬಾಲ್ಯದಲ್ಲಿ ಬಳಸಿದ್ದೇವೆ. ಇದು ಆಗ ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಯ ಬಚ್ಚಲು ಮನೆಯಲ್ಲಿ ಜಾಗ ಪಡೆದಿತ್ತು. ಇದು ನೋಡಿ ಇದನ್ನು ಹೆಲಿಕಾಪ್ಟರ್ ಹುಳು ಅಂತ ಕರೀತಾ ಇದ್ವಿ ಇದರ ಬಾಲಕ್ಕೆ ಅಥವಾ ರೆಕ್ಕೆಗೆ ದಾರ ಕಟ್ಟಿ ಹಾರಾಟವನ್ನು ನಡೆಸ್ತಾ ಇದ್ವಿ ಗೊತ್ತಾ.


ಹಾಗೆ ಇದು ಕಣ್ ಟ್ಯುಬ್ ಇದನ್ನು ಕಣ್ಣಿನ ಭಾಗದಲ್ಲಿ ಊದಿಕೊಂಡಾಗ, ಕಣ್ಣಿನ ಸುತ್ತಲೂ ಕೆಂಪಾಗಿ ಇನ್ಫೆಕ್ಷನ್ ಆದಾಗ ಇದನ್ನ ಕಣ್ಣಿಗೆ ಹಾಕಿಕೊಳ್ಳು ತ್ತಿದ್ದೆವು. ಇದು ಆಗ 1 ರೂಪಾಯಿಗೆ 4 ಸಿಕ್ತಾ ಇತ್ತು. ಇದನ್ನ ಬಹುತೇಕ ಅಂಗಡಿಗಳಲ್ಲಿ ಮಾರುತ್ತ ಇದ್ದರೂ. ಬಹಳ ಹಿಂದಿನ ದಿನಗಳಲ್ಲಿ ಹೆಚ್ಚು ಕರೆಂಟ್ ಇರ್ಲಿಲ್ಲ.ನಮ್ಮ ಮನೆಗಳಲ್ಲಿ ಟಿವಿ ಇರುತ್ತಿರಲಿಲ್ಲ.

ಆಗ ರಾತ್ರಿ ಟೆರೆಸಿನ ಮೇಲೆ ಅಥವಾ ಮನೆಯ ಅಂಗಳದ ಮುಂದೆ ಸಾಮೂಹಿಕವಾಗಿ ನಿದ್ರೆ ಮಾಡುತ್ತಾ ಇದ್ದೆವು ಹಾಗೂ ಎಲ್ಲರ ಜೊತೆ ಮಾತನಾಡುತ್ತಾ ಕಥೆ ಹೇಳುತ್ತಾ ನಿದ್ರೆ ಮಾಡಿಬಿಡುತ್ತಿದ್ದೆವು, ಆ ಸಮಯ ದಲ್ಲಿ ಆಗ ಗೊತ್ತಾಗುತ್ತಾ ಇರಲಿಲ್ಲ. ಅವತ್ತಿನ ಆ ನಿದ್ರೆಯ ಮಜಾ ಇವತ್ತಿನ ನಿದ್ರೆಯಲ್ಲಿಲ್ಲ. ಇದು ಶಕ್ತಿಮನ್ ಚಿತ್ರ ಇರುವ ನೋಟ್ ಬುಕ್ ಇದು ಎಲ್ಲರ ಬಳಿ ಕೂಡ ಇರ್ತಾ ಇತ್ತು .

ನಮ್ಮನೆಚ್ಚಿನ ಶಕ್ತಿಮಾನ್ ಎಂಬ ಸೂಪರ್ ಹೀರೋ ಮುಖದ ಫೋಟೋ ಇದ್ದಂತಹ ಇದನ್ನು ನಾವು ನಮ್ಮ ಬಳಿ ಇಟ್ಟುಕೊಳ್ಳುತ್ತಿದ್ದೆವು. ಆಗ ಶಕ್ತಿಮಾನ್ ಪುಸ್ತಕ ಸಕ್ಕತ್ ಪಾಪುಲರ್ ಆಗಿದ್ದ. ಆತನ ಚಿತ್ರ ಇದ್ದ ಎಷ್ಟೋ ಮುದ್ರೆಯ ವಸ್ತುಗಳನ್ನ ನಾವು ಆಸೆ ಇಂದ ಖರೀದಿ ಮಾಡಿ ನಮ್ಮ ಬಳಿ ಇಟ್ಟುಕೊಳ್ಳುತ್ತಿದ್ದೆವು. ಇನ್ನು ಈ ಲ್ಯಾಟಿನ್ ನೋಡಿ ಇದು ಅನೇಕರ ಮನೆಯಲ್ಲಿ ಇರ್ತಾ ಇತ್ತು ಕರೆಂಟ್ ಹೋದ ಸಮಯದಲ್ಲಿ ಅನೇಕರ ಮನೆಯ ಬೆಳಕು ಇದಾಗಿತ್ತು.

ಇದರ ಬೆಳಕಿನಲ್ಲಿ ಆಗ ಮಕ್ಕಳ ಓದು, ಅಡುಗೆ ಎಷ್ಟೆಲ್ಲಾ ರೀತಿಯ ಕೆಲಸಗಳು ನಡೀತಾ ಇತ್ತು. ಇದು ಕೆಟ್ಟೋಗುತ್ತಾ ಇದ್ದರೂ ಕೂಡ ಇದನ್ನೇ ನಾವು ಇಷ್ಟ ಪಟ್ಟು ಬಳಸುತ್ತಾ ಇದ್ದೆವು. ಆವಾಗೆಲ್ಲ ಎಷ್ಟೋ ಸಭೆ ಉತ್ಸವಗಳಲ್ಲಿ ಇದೆ ನಮ್ಮ ಲೈಟ್ ಆಗಿರುತ್ತಿತ್ತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *