ತವರಿನ ಆಸ್ತಿಯಲ್ಲಿ ಹೆಣ್ಣು ಮಕ್ಕಳು ತಿಳಿದುಕೊಳ್ಳಬೇಕಾದ ಕೆಲವು ಮುಖ್ಯ ಅಂಶಗಳು…..||
ಈಗಾಗಲೇ ಈ ವಿಷಯದ ಬಗ್ಗೆ ಹಲವಾರು ಚರ್ಚೆಗಳನ್ನು ನಡೆಸಿದ್ದು 2005ರ ನಂತರ ಕೋರ್ಟ್ ಒಂದು ಆದೇಶವನ್ನು ಹೊರಡಿಸುತ್ತದೆ. ಅದೇನೆಂದರೆ ತಂದೆಯ ಆಸ್ತಿಯಲ್ಲಿ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೂ ಕೂಡ ಸಮನಾದ ಆಸ್ತಿ ಹಂಚಿಕೆಯಾಗಬೇಕು ಎಂಬ ಆದೇಶವನ್ನು ಹೊರಡಿಸುತ್ತದೆ.
ಆದರೆ 2005ರ ಹಿಂದೆಯೇ ತಂದೆಯ ಆಸ್ತಿ ಅವರ ಮಕ್ಕಳಿಗೆ ಅಂದರೆ ಗಂಡು ಮಕ್ಕಳಿಗೆ ಭಾಗವಾಗಿ ಅವರ ಹೆಸರಿನಲ್ಲಿ ಇದ್ದರೆ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಕ್ಕನ್ನು ಪಡೆದುಕೊಳ್ಳಲು ಯಾವುದೇ ರೀತಿಯಲ್ಲೂ ಬರುವುದಿಲ್ಲ. ಕೇವಲ ಅವರ ಪಿತ್ರಾರ್ಜಿತ ಆಸ್ತಿ ಏನಾದರೂ ಭಾಗವಾಗಿ ಲ್ಲದೆ ಹಾಗೆಯೇ ಇದ್ದರೆ ಆ ಆಸ್ತಿ ಮಾತ್ರ ಹೆಣ್ಣು ಮಕ್ಕಳಿಗೆ ಸೇರುತ್ತದೆ. ಈಗಾಗಲೇ ಆಸ್ತಿ ಹಂಚಿಕೆಯಾಗಿದ್ದರೆ ಅದರಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಾದಂತಹ ಪಾಲು ಬರುವುದಿಲ್ಲ.
ಅದೇ ರೀತಿಯಾಗಿ ಹೆಣ್ಣು ಮಕ್ಕಳು ತನ್ನ ತವರು ಮನೆ ಆಸ್ತಿಯಲ್ಲಿ ಯಾವುದೇ ರೀತಿಯ ಪಾಲು ಬೇಡ ಎಂದಿದ್ದರೆ ಮನೆಯಲ್ಲಿರುವ ಅವರ ಅಣ್ಣ ತಮ್ಮಂದಿರು ಅವಳಿಂದ ಹಕ್ಕು ಬಿಡುಗಡೆ ಪತ್ರವನ್ನು ಮಾಡಿಸುವು ದರ ಮುಖಾಂತರ ಅದನ್ನು ರಿಜಿಸ್ಟರ್ ಮಾಡಿಸಿ ಆ ಹೆಣ್ಣು ಮಗಳ ಕೈಯಲ್ಲಿ ಸಹಿಯನ್ನು ಹಾಕಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ನೀವು ಸಹಿ ಹಾಕಿಸಿಕೊಂಡಿಲ್ಲ ಎಂದರೆ ಅವಳು ಮುಂದಿನ ದಿನಗಳಲ್ಲಿ ಆ ಹಕ್ಕನ್ನು ಮತ್ತೆ ಕೇಳಬಹುದು.
ಆದ್ದರಿಂದ ಈ ವಿಷಯವಾಗಿ ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಹೆಣ್ಣು ಮಕ್ಕಳು 2005ರ ನಂತರ ತಂದೆಯ ಆಸ್ತಿಯಲ್ಲಿ ಸಮಾನವಾದ ಪಾಲು ಬರಬೇಕು ಎಂದು ಕೇಳುತ್ತಾರೆ ಆದರೆ ಅವಳು ಕೇವಲ ಪಿತ್ರಾರ್ಜಿತ ಆಸ್ತಿಯನ್ನು ಮಾತ್ರ ಪಡೆದುಕೊಳ್ಳಬಹುದೇ ಹೊರತು ತನ್ನ ತಂದೆ ಸ್ವಂತವಾಗಿ ಅಂದರೆ ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದಂತಹ ಆಸ್ತಿಯಾಗಿದ್ದರೆ.
ಆ ಆಸ್ತಿಯಲ್ಲಿ ಆ ಹೆಣ್ಣು ಮಗಳು ಯಾವುದೇ ರೀತಿಯ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದರೆ ಅವರ ತಂದೆ ತನ್ನ ಹೆಸರಿನಲ್ಲಿಯೇ ಇಟ್ಟುಕೊಳ್ಳಬಹುದು ಅಥವಾ ತನಗೆ ಇಷ್ಟ ಬಂದ ಯಾರಿಗಾದರೂ ಕೂಡ ಮಾರುವಂತ ಹಕ್ಕನ್ನು ಕೇವಲ ಅವನೊಬ್ಬನೇ ಹೊಂದಿರುತ್ತಾನೆ. ಆದ್ದರಿಂದ ಈ ವಿಷಯವಾಗಿ ಹೆಣ್ಣು ಮಕ್ಕಳಾಗಲಿ ಅಥವಾ ಗಂಡು ಮಕ್ಕಳಾಗಲಿ ಯಾವುದೇ ರೀತಿಯ ಕಾನೂನು ಬದ್ಧ ಆಕ್ಷೇಪವನ್ನು ಹೊರಡಿಸುವಂತಿಲ್ಲ.
ಆದರೆ ಹೆಣ್ಣು ಮಕ್ಕಳು ಈ ವಿಚಾರವಾಗಿ ಮಾಹಿತಿಗಳು ತಿಳಿದುಕೊಳ್ಳದೆ ಕೋರ್ಟ್ ಮೆಟ್ಟಿಲನ್ನು ಏರುತ್ತಾರೆ ಇದರಿಂದ ಅವರ ಹಣವು ಕೂಡ ವ್ಯರ್ಥವಾಗುತ್ತದೆ ಹಾಗೂ ಅವರ ಸಮಯವೂ ಕೂಡ ವ್ಯರ್ಥವಾಗು ತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ಈ ವಿಷಯವಾಗಿ ಅಂದರೆ ತಂದೆಯ ಆಸ್ತಿಗೆ ಸಂಬಂಧಿಸಿದ ವಿಚಾರವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.