ಈ‌ ಒಂದು ಪೋನ್ ಕಾಲ್ ನಿಮ್ಮ ಜೀವನವನ್ನೇ ಸರ್ವನಾಶ ಮಾಡಬಹುದು ಹುಷಾರ್ ಹುಡುಗರೆ..! - Karnataka's Best News Portal

ಈ ವಿಡಿಯೋ ನೋಡಿ ಹುಷಾರಾಗಿರಿ ಇಲ್ಲ ಅಂದ್ರೆ ನಿಮಗೂ ಬರಬಹುದು ವಿಡಿಯೋ ಕಾಲ್ ಗುಮ್ಮ…….||

ಇವತ್ತು ಸಮಾಜದಲ್ಲಿ ಹೆಣ್ಣಿಗೆ ಏನೇ ಅವಮಾನವಾದರೂ ಕೂಡ ಅದರ ಪರವಾಗಿ ಇಡೀ ಸಮಾಜ ಅಥವಾ ಸಮಾಜದ ಬಹುತೇಕರು ಅಂದರೆ ಈ ಹೆಣ್ಣಿಗೆ ಸಂಬಂಧ ಇಲ್ಲದೆ ಇರುವವರು ಕೂಡ ತಕ್ಷಣವೇ ಪ್ರವೇಶ ಮಾಡಿ ನ್ಯಾಯಕ್ಕೆ ಪ್ರತಿಭಟಿಸಿ ನಿಲ್ಲುತ್ತಾರೆ. ಅದೇ ಒಬ್ಬ ಪುರುಷನಿಗೆ ಈ ಅನ್ಯಾಯ ನಡೆದಾಗ

ಬೇರೆಯವರಿರಲಿ ಅವನ ಬಂಧು ಮಿತ್ರರೇ ಅವನ ಬೆಂಬಲಕ್ಕೆ ಬರುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಅಥವಾ ಅವನ ತಪ್ಪನ್ನು ಅವನ ಮೇಲೆ ಹೊರೆಸಿ ಅವನನ್ನೇ ತಪ್ಪಿದಸ್ತನನ್ನಾಗಿಸಿ ಸಮಾಜ ಕೈಕಟ್ಟಿ ಕೂರುತ್ತದೆ. ಅನ್ಯಾಯ ಕೇವಲ ಹೆಣ್ಣಿಗಷ್ಟೇ ನಡೆಯುತ್ತ ಅದೇ ಅನ್ಯಾಯ ಗಂಡಿಗೆ ಆದರೆ ಯಾಕೆ ಸಮಾಜ ಮರುಗುವುದಿಲ್ಲ. ಇವತ್ತಿನ ಈ ಒಂದು ಅಸಮಾನತೆ ಯಾಕೆ.

ಇವತ್ತಿನ ಈ ಸಮಾಜದ ಈ ಇಬ್ಬಗೆಯ ಸ್ಥಿತಿಯ ಬಗ್ಗೆ ಇತ್ತೀಚೆಗೆ ನಮ್ಮ ಸುತ್ತಮುತ್ತ ಹಾಗೂ ನಡೆಯುತ್ತಿರುವ ಕೆಲವು ಆಘಾತಕಾರಿ ಘಟನೆಗಳೆ ಈ ಒಂದು ವಿಷಯವನ್ನು ಚರ್ಚೆ ಮಾಡುವುದಕ್ಕೆ ಪ್ರಚೋದನೆ ಎಂದು ಹೇಳಬಹುದು. ಉದಾಹರಣೆಗೆ ಒಬ್ಬ ಯುವತಿಯ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿ, ಆಕೆಯ ತೇಜೋವಧೆಗೆ ಮುಂದಾಗುವ ಅಥವಾ

ಆಕೆಯ ಸಾವಿಗೂ ಕಾರಣವಾಗುವ ಅನೇಕ ಉದಾಹರಣೆಗಳನ್ನು ನೀವೆಲ್ಲ ಬಹಳಷ್ಟು ಸಲ ಕೇಳಿರುತ್ತೀರಾ. ಇಂತಹ ಸಂದರ್ಭಗಳಲ್ಲಿ ಆಕೆಯ ಪರವಾಗಿ ಅನೇಕರು ದನಿ ಎತ್ತುತ್ತಾರೆ. ಆದರೆ ಇದೇ ಸ್ಥಿತಿ ಒಬ್ಬ ಪುರುಷನಿಗೆ ಒದಗಿದರೆ? ಹೌದು ನಿಮ್ಮಲ್ಲಿ ಬಹಳಷ್ಟು ಜನಕ್ಕೆ ಈ ಒಂದು ವಿಷಯ ಅಚ್ಚರಿ ಎನಿಸಬಹುದು. ವಿಶೇಷವಾಗಿ ಈ ಕೋವಿಡ್ ಬಳಿಕ ದೇಶದಾದ್ಯಂತ ಇಂತಹ ಆನ್ಲೈನ್ ಹನಿ ಟ್ರಾಪ್ ನಂತಹ.

ದಂಧೆಗಳು ಮೇಲಿಂದ ಮೇಲೆ ಕೇಳಿ ಬರುತ್ತಿದೆ. ಯಾವುದೋ ಒಬ್ಬ ಯುವತಿ ಅತ್ತ ಕಡೆಯಿಂದ ಯಾವುದೋ ಒಬ್ಬ ಪುರುಷನಿಗೆ ವಾಟ್ಸಪ್ ನಲ್ಲಿ ಅನಾಮತ್ತಾಗಿ ಚಾಟಿಂಗ್ ಮೂಲಕ ಪರಿಚಯವಾಗುತ್ತಾಳೆ. ಶುರುವಿನಲ್ಲಿ ಆತ್ಮೀಯವಾಗಿ ಮಾತನಾಡಿ ಆ ಹುಡುಗನನ್ನು ಮರಳು ಮಾಡಿ ವಾಟ್ಸಪ್ ವಿಡಿಯೋ ಕಾಲ್ ಗೆ ಬರುವಂತೆ ಅವನನ್ನು, ಎಲ್ಲಾ ಬಗೆಯಲ್ಲೂ ಕೂಡ ತಾನೇ ಖುದ್ದು ಪ್ರಚೋದಿಸುವಂತಹ ಆಕೆ.

ವಿಡಿಯೋದಲ್ಲಿ ತನ್ನ ಖಾಸಗಿ ದೇಹವನ್ನು ಪ್ರದರ್ಶಿಸುವುದು ಮಾತ್ರವಲ್ಲದೆ ಅವನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಕೂಡ ಅವನಿಗೆ ತಿಳಿಯದ ಹಾಗೆ ಚಿತ್ರೀಕರಿಸಿ ಅದನ್ನು ತನ್ನ ಬಳಿ ಇಟ್ಟುಕೊಂಡು. ಕೆಲವು ದಿನಗಳ ಬಳಿಕ ಅವನಿಗೆ ಆ ವಿಡಿಯೋವನ್ನು ಕಳುಹಿಸಿ ಹಣವನ್ನು ಕೊಡದೆ ಹೋದರೆ ಆ ವಿಡಿಯೋಗಳನ್ನು ಅವನ ಆತ್ಮೀಯರಿಗೆ ಹಾಗೂ ಕುಟುಂಬದವರಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *