ಈ ದೇವಸ್ಥಾನದಲ್ಲಿ ಹುಂಡಿ‌ ಇಲ್ಲ ಕಾಣಿಕೆ ಹಾಕುವಂತಿಲ್ಲ..ತಿರುಪತಿಗೂ ಇಲ್ಲಿಗೂ ವ್ಯತ್ಯಾಸ ಏನು ನೋಡಿ.. - Karnataka's Best News Portal

ಈ ದೇವಸ್ಥಾನದಲ್ಲಿ ಹುಂಡಿ ಇಲ್ಲ! ಕಾಣಿಕೆ ಹಾಕುವಂತಿಲ್ಲ! ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಾರೆ…!!

ಈ ದಿನ ನಾವು ಹೇಳುಲು ಹೊರಟಿರುವಂತಹ ಈ ದೇವಸ್ಥಾನ ಅತ್ಯಂತ ವಿಶೇಷ ಹಾಗೂ ಅದ್ಭುತ ಎಂದು ಹೇಳಿದರು ತಪ್ಪಿಲ್ಲ. ಪ್ರಪಂಚದಲ್ಲಿ ಎಲ್ಲಿ ಹುಡುಕಿದರು ಈ ರೀತಿಯ ದೇವಸ್ಥಾನ ನೋಡಲು ಎಲ್ಲಿಯೂ ಕೂಡ ಸಾಧ್ಯವಿಲ್ಲ. ಏಕೆಂದರೆ? ಈ ದೇವಸ್ಥಾನದಲ್ಲಿ ಹುಂಡಿ ಇಲ್ಲ!

ಇಲ್ಲಿಗೆ ಬರುವ ಭಕ್ತರು ಕಾಣಿಕೆಯಾಗಿ ಒಂದು ರೂಪಾಯಿ ಕೂಡ ಕೊಡುವಂತಿಲ್ಲ. ಪ್ರತಿದಿನ ತಿರುಪತಿಗಿಂತ ಎರಡು ಪಟ್ಟು ಜನ ಇಲ್ಲಿಗೆ ಬರುತ್ತಾರೆ. ಅದರಂತೆ ಪ್ರಪಂಚದಲ್ಲಿಯೇ ಹುಂಡಿ ಇಲ್ಲದ ಏಕೈಕ ದೇವಸ್ಥಾನ ಎಂದೇ ಹೇಳಬಹುದು. ಹಾಗಾದರೆ ಈ ದೇವಸ್ಥಾನ ಯಾವುದು? ಇದು ಎಲ್ಲಿದೆ? ಹೀಗೆ ಈ ದೇವಸ್ಥಾನದ ವಿಶೇಷತೆಯ ಬಗ್ಗೆ ಈ ದಿನ ಸಂಪೂರ್ಣವಾದ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಈ ದೇವಸ್ಥಾನದ ಹೆಸರು ಚಿಲ್ಕೂರ್ ಬಾಲಾಜಿ ದೇವಸ್ಥಾನ, ಈ ಒಂದು ದೇವಸ್ಥಾನವನ್ನು ಇನ್ನೊಂದು ಹೆಸರಿನಿಂದಲೂ ಕೂಡ ಕರೆಯುತ್ತಾರೆ ಅದೇನೆಂದರೆ ವೀಸಾ ಬಾಲಾಜಿ ದೇವಸ್ಥಾನ. ಪ್ರತಿದಿನ ತಿರುಪತಿಗೆ ಬರುವಂತಹ ಭಕ್ತರ ಸಂಖ್ಯೆ ಸುಮಾರು 70,000 ಆದರೆ ಈ ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ ಪ್ರತಿದಿನ ಬರುವಂತಹ ಭಕ್ತರ ಸಂಖ್ಯೆ ಸುಮಾರು 2 ಲಕ್ಷಕ್ಕೂ ಅಧಿಕ ಜನ.

ಈ ದೇವಸ್ಥಾನಕ್ಕೆ ಹೋಗುವ ವಿಳಾಸ ಯಾವುದೆಂದರೆ ತೆಲಂಗಾಣ ರಾಜ್ಯದಲ್ಲಿರುವ ರಂಗರೆಡ್ಡಿ ಜಿಲ್ಲೆಗೆ ಮೊದಲು ಹೋಗಬೇಕು ನಂತರ ಅಲ್ಲಿಂದ 50 ಕಿಲೋಮೀಟರ್ ಪ್ರಯಾಣ ಮಾಡಿದರೆ ಚಿಲ್ಕೂರು ಗ್ರಾಮ ಸಿಗುತ್ತದೆ. ಇದೇ ಗ್ರಾಮದಲ್ಲಿ ನೆಲೆಸಿರುವುದು ಚಿಲ್ಕೂರು ಬಾಲಾಜಿ. ತಿರುಪತಿಯಲ್ಲಿರುವ ಬಾಲಾಜಿ ದೇವಸ್ಥಾನಕ್ಕೆ ವರ್ಷಕ್ಕೆ 2 ರಿಂದ 3000 ಕೋಟಿ ಹುಂಡಿ ದುಡ್ಡು ಸಂಗ್ರಹವಾಗುತ್ತದೆ, ಆದರೆ ಈ ಚಿಲ್ಕೂರು ಬಾಲಾಜಿ ದೇವಸ್ಥಾನಕ್ಕೆ ಯಾವುದೇ ರೀತಿಯ ಹುಂಡಿ ದುಡ್ಡು ಸೇರುವುದಿಲ್ಲ.

ಈ ದೇವಸ್ಥಾನದ ವಿಶೇಷತೆ ಬಗ್ಗೆ ಗಿನ್ನಿಸ್ ಓಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೂ ಸೇರ್ಪಡೆಯಾಗಿದೆ. ಇಲ್ಲಿ ನೆಲೆಸಿರುವ ಬಾಲಾಜಿಯನ್ನು ವೀಸಾ ಬಾಲಾಜಿ ಎಂದು ಕರೆಯುತ್ತಾರೆ! ಏಕೆಂದರೆ ನಮ್ಮಲ್ಲಿ ಹಲವಾರು ಜನ ಉದ್ಯೋಗ, ವಿದ್ಯಾಭ್ಯಾಸ, ಹಾಗೂ ಹಲವು ಕಾರಣಗಳಿಗಾಗಿ ವಿದೇಶಕ್ಕೆ ತೆರಳಲು ಬಯಸುತ್ತಾರೆ. ವಿದೇಶಕ್ಕೆ ಹೋಗಲು ವೀಸಾ ಪರವಾನಗಿ ಯನ್ನು ಪಡೆಯಲು ಅಷ್ಟು ಸುಲಭವಲ್ಲ.

ವೀಸ ಪರವಾನಗಿಯನ್ನು ಮಾಡಿಸಲು ಮುಂದಾದರೆ ಆ ಕೆಲಸ ಬೇಗ ಮುಗಿಯುವುದೇ ಇಲ್ಲ, ಕೆಲವೊಂದು ಕಾರಣಾಂತರಗಳಿಂದ ನಮ್ಮ ವೀಸಾ ಪರವಾನಗಿ ರದ್ದುಗೊಳ್ಳುತ್ತದೆ, ಏನೇ ಪ್ರಯತ್ನ ಪಟ್ಟರು ವೀಸಾ ಪರವಾನಗಿ ದೊರೆಯುತ್ತಿಲ್ಲ ಎನ್ನುವಂತಹ ಭಕ್ತರು ಈ ದೇವಸ್ಥಾನಕ್ಕೆ ಬಂದು ವೀಸಾ ಪೂಜೆ ಮಾಡಿಸಿದರೆ ಕೇವಲ 30 ದಿನದಲ್ಲಿ ವೀಸಾ ದೊರೆಯುತ್ತದೆ, ಎನ್ನುವುದು ಇಲ್ಲಿಯ ಭಕ್ತರ ನಂಬಿಕೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *