ಮಹಿಳಾ ರಾಜಕಾರಣಿಗಳು ಎಷ್ಟು ಓದಿದ್ದಾರೆ ಆಸ್ತಿ ಎಷ್ಟು ಯಾವ ಪಕ್ಷದಲ್ಲಿ ಯಾರಿದ್ದಾರೆ ನೋಡಿ.. - Karnataka's Best News Portal

ಮಹಿಳಾ ರಾಜಕಾರಣಿಗಳು ಎಷ್ಟು ಓದಿದ್ದಾರೆ ಆಸ್ತಿ ಎಷ್ಟು ಯಾವ ಪಕ್ಷದಲ್ಲಿ ಯಾರಿದ್ದಾರೆ ನೋಡಿ..

ಯಾವ ಪಕ್ಷದಲ್ಲಿ ಹೆಚ್ಚು ಮಹಿಳೆಯರಿದ್ದಾರೆ….||

WhatsApp Group Join Now
Telegram Group Join Now

ಕರ್ನಾಟಕ ಮಹಿಳಾ ರಾಜಕಾರಣಿಗಳ ಬಗ್ಗೆ ನಿಮಗೆಷ್ಟು ಗೊತ್ತು? ಹಾಗೂ ಯಾವ ಪಕ್ಷದಲ್ಲಿ ಹೆಚ್ಚು ಮಹಿಳಾ ರಾಜಕಾರಣಿಗಳು ಇದ್ದಾರೆ? ಇವರಲ್ಲಿ ಯಾರೆಲ್ಲ ಗೆದ್ದು ಸಂಸದೆ ಹಾಗೂ ಶಾಸಕಿಯಾಗಿದ್ದಾರೆ? ಇವರಲ್ಲಿ ಯಾರು ಎಷ್ಟು ಆಸ್ತಿ ಹೊಂದಿದ್ದಾರೆ? ಇವರು ಎಷ್ಟು ಓದಿದ್ದಾರೆ? ಇವರ ರಾಜಕೀಯ ಅನುಭವವೇನು? ಸಿನಿಮಾ ಹಿನ್ನೆಲೆ ಇರುವಂತಹ ನಾಯಕಿಯರು ಎಷ್ಟು ಜನ ಇದ್ದಾರೆ?

ಹೀಗೆ ಈ ಎಲ್ಲ ಮಾಹಿತಿಗಳ ಬಗ್ಗೆ ಈ ದಿನ ಚರ್ಚಿಸೋಣ. ಮೊದಲನೆಯ ದಾಗಿ ಶೋಭಾ ಕರಂದ್ಲಾಜೆ ರಾಜ್ಯ ಬಿಜೆಪಿಯ ಆರಂಭಿಕ ಲೀಡರ್ ಗಳಲ್ಲಿ ಇವರು ಕೂಡ ಮೊದಲ ಸಾಲಿನಲ್ಲಿ ಬರುತ್ತಾರೆ. ಇವರು ಬಿಜೆಪಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಮೊದಲ ಬಾರಿಗೆ MLC ಆಗಿ ಆಯ್ಕೆಯಾದರು. 2008ರಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಸಚಿವೆಯಾದರೂ.

ನಂತರ ಯಡಿಯೂರಪ್ಪ ಅವರ ಕೆಜೆಪಿ ಗೆ ಸೇರಿದ ಇವರು 2014ರಲ್ಲಿ ಮತ್ತೆ ಬಿಜೆಪಿಗೆ ಬಂದರು. 2014 ಮತ್ತು 2019ರ ಲೋಕಸಭೆಯ ಚುನಾವಣೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪರ್ಧಿಸಿ ಸಂಸದೆಯಾದರೂ. ಸದ್ಯ ಕೇಂದ್ರದಲ್ಲಿ ರಾಜ್ಯ ಖಾತೆ ಸಚಿವೆ. ಅಂದರೆ ಜೂನಿಯರ್ ಮಿನಿಸ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು MA, MSW, ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಇವರು 7.2 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದು.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

3.8 ಕೋಟಿ ಸಾಲ ಇದೆ ಎಂದು ಘೋಷಿಸಿದ್ದಾರೆ. ಸುಮಲತಾ ಸದ್ಯದಲ್ಲಿ ಮಂಡ್ಯ ಸಚಿವೆಯಾಗಿರುವಂತಹ ಸುಮಲತಾ ಅವರು ಧೀರ್ಗವಾದ ರಾಜಕೀಯ ಹಿನ್ನೆಲೆಯನ್ನು ಹೊಂದಿಲ್ಲ. ಇವರ ಪತಿ ಅಂಬರೀಶ್ ಅವರು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಅವರ ನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಲತಾ ಅವರಿಗೆ ಟಿಕೆಟ್ ಕೊಡಲಿಲ್ಲ, ಹೀಗಾಗಿ ಇವರು ಪಕ್ಷೇತರವಾಗಿ ಮಂಡ್ಯದಲ್ಲಿ ಸ್ಪರ್ಧಿಸಿ ಗೆದ್ದರು.

ಎದುರಾಳಿಯಾಗಿ ನಿಂತಿದ್ದಂತಹ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು. ಇವರು 23 ಕೋಟಿ 40 ಲಕ್ಷ ಆಸ್ತಿಯನ್ನು ಹೊಂದಿದ್ದು 1 ಕೋಟಿ 60 ಲಕ್ಷ ರೂಪಾಯಿ ಸಾಲ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಇವರು ಸಿನಿಮಾ ಬ್ಯಾಗ್ರೌಂಡ್ ಹೊಂದಿದ್ದು 100 ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. 15ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಪ್ರವೇಶಿಸಿದ ಇವರು SSLC ಶಿಕ್ಷಣ ಪಡೆದಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿ ಕೊಂಡು ಬಂದಿದ್ದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೂಡ ಆಗಿದ್ದರು. 2013ರಲ್ಲಿ ಬೆಳಗಾವಿಯ ಗ್ರಾಮೀಣ ಭಾಗದಿಂದ ಸ್ಪರ್ಧಿಸಿ ಸೋತರು. ಆದರೂ 2014ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಇವರಿಗೆ ಟಿಕೆಟ್ ನೀಡಲಾಯಿತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">