ಹಳೆ ಬ್ಲೌಸ್ ಬಿಸಾಡುವ ಮುನ್ನ ಒಮ್ಮೆ ಈ ವಿಡಿಯೋ ಮಿಸ್ ಮಾಡದೆ ನೋಡಿ.. - Karnataka's Best News Portal

ಹಳೆ ಬ್ಲೌಸ್ ನ ಹೀಗೂ ಬಳಸಬಹುದಾ……?

ಎಲ್ಲರ ಮನೆಯಲ್ಲಿಯೂ ಕೂಡ ಹಳೆ ಬ್ಲೌಸ್ ಇದ್ದೇ ಇರುತ್ತದೆ. ಕೆಲವೊಬ್ಬರು ಅಳತೆ ಬ್ಲೌಸ್ ದೊಡ್ಡದಾದರೆ ಅಥವಾ ಚಿಕ್ಕದಾದರೆ ಅದನ್ನು ಆಚೆ ಕಡೆ ಎಸೆಯುತ್ತಾರೆ, ಆದರೆ ಈ ದಿನ ನಾವು ಹೇಳುವಂತಹ ಸೂಪರ್ ಟಿಪ್ಸ್ ಬಳಸಿದರೆ, ಅದನ್ನು ನೀವು ಮತ್ತೆ ಮರುಬಳಕೆ ಮಾಡ ಬಹುದು. ಹಾಗಾದರೆ ಅದನ್ನು ಹೇಗೆ ಮತ್ತೆ ಉಪಯೋಗಿಸುವುದು ಎಂದು ನೋಡುವುದಾದರೆ.

ನಮಗೆಲ್ಲರಿಗೂ ತಿಳಿದಿರುವಂತೆ ಹಳೆ ಸೀರೆ, ಗಂಡು ಮಕ್ಕಳ ಹಳೆ ಪ್ಯಾಂಟ್, ಹೀಗೆ ಹಳೆ ಬಟ್ಟೆಗಳನ್ನು ಹಲವಾರು ಕೆಲಸಗಳಿಗೆ ಉಪಯೋಗಿಸುತ್ತೇವೆ. ಅದರಲ್ಲೂ ಕಾಟನ್ ಬಟ್ಟೆ ಹಳೆಯದಾಗಿದ್ದರೆ ಅದನ್ನು ಮನೆ ಒರೆಸುವುದಕ್ಕೆ, ಹಾಗೆ ಅಡುಗೆ ಮನೆಗಳಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುತ್ತೇವೆ ಹಾಗೆ ಹಳೆ ಸೀರೆ ಏನಾದರೂ ಇದ್ದರೆ ಅದನ್ನು ಹರಿದು ಮ್ಯಾಟ್, ಮಾಡುವುದರ ಮೂಲಕ ಮತ್ತೆ ಉಪಯೋಗಿಸುತ್ತೇವೆ.

ಇನ್ನು ಕೆಲವೊಬ್ಬರು ಹಳೆ ಬಟ್ಟೆಗಳೆಲ್ಲವನ್ನು ಕೂಡ ಸಣ್ಣದಾಗಿ ಕತ್ತರಿಸಿ ಅವುಗಳ ಮೂಲಕ ತಲೆಗೆ ಹಾಕುವ ದಿಂಬನ್ನು ಕೂಡ ತಯಾರಿಸಿಟ್ಟು ಕೊಳ್ಳುತ್ತಾರೆ. ಮನೆಗೆ ಯಾರಾದರೂ ಹೆಚ್ಚಿನ ಜನ ಬಂದಂತಹ ಸಮಯ ದಲ್ಲಿ ಈ ರೀತಿ ದಿಂಬನ್ನು ಮಾಡಿಟ್ಟುಕೊಂಡರೆ ಬಹಳ ಉಪಯೋಗಕ್ಕೆ ಬರುತ್ತದೆ. ಹಾಗೂ ಅದನ್ನು ಸುಲಭವಾಗಿ ತೊಳೆಯಬಹುದು ಏಕೆಂದರೆ ಒಳಗಡೆ ಬಟ್ಟೆ ಇರುವುದರಿಂದ ಅದನ್ನು ಒಗೆದರು ಮತ್ತೆ ಬಿಸಿಲಿನಲ್ಲಿ ಒಣಗಿಸುವುದರ ಮೂಲಕ ಮತ್ತೆ ಉಪಯೋಗಿಸಬಹುದು.

ಹಾಗೆಯೇ ಗಂಡು ಮಕ್ಕಳ ಜೀನ್ಸ್ ಪ್ಯಾಂಟ್ ಉಪಯೋಗಿಸಿಕೊಂಡು ಕೆಲವೊಂದು ಮರುಬಳಕೆಯ ವಸ್ತುವನ್ನಾಗಿ ತಯಾರಿಸುತ್ತಾರೆ. ಈ ವಿಷಯವಾಗಿ ನೀವು ಈಗಾಗಲೇ ಮೊಬೈಲ್ ಗಳಲ್ಲಿ ನೋಡಿಕೊಂಡು ಅದನ್ನು ಹಲವಾರು ವಿಧವಾಗಿ ತಯಾರಿಸಿ ಅದನ್ನು ಮರುಬಳಕೆ ಮಾಡಿಕೊಳ್ಳುತ್ತೀರಿ. ಹಾಗಾದರೆ ಹಳೇ ಬ್ಲೌಸ್ ಅನ್ನು ಹೇಗೆ ಮರುಬಳಕೆ ಮಾಡಿಕೊಳ್ಳಬಹುದು ಅದನ್ನು ಯಾವ ರೀತಿ ಮತ್ತೆ ಉಪಯೋಗಿಸ ಬಹುದು? ಅದನ್ನು ಹೇಗೆ ಮಾಡುವುದು ಎನ್ನುವ ವಿಧಾನದ ಬಗ್ಗೆ ಈ ದಿನ ಚರ್ಚಿಸೋಣ.

ಹಳೆ ಬ್ಲೌಸ್ ತೆಗೆದುಕೊಂಡು ಮೊದಲು ಅದು ನಿಮ್ಮ ಅಳತೆಗೆ ಸರಿ ಇದೆಯಾ ಅಥವಾ ಸರಿ ಇಲ್ಲವಾ ಎನ್ನುವುದನ್ನು ತಿಳಿದು ನಿಮ್ಮ ಅಳತೆಗೆ ಸರಿಯಾಗಿ ಮಾಡಿಕೊಳ್ಳಿ ನಂತರ ಅದರಲ್ಲಿರುವ ಸ್ಲೀವ್ಸ್ ಅಂದರೆ ತೋಳಿನಲ್ಲಿರುವ ಬಟ್ಟೆಯನ್ನು ಕತ್ತರಿಸಿ ಅದನ್ನು ದೊಡ್ಡ ಅಳತೆಯಾಗಿ ಹೊಲಿದುಕೊಂಡರೆ, ಅದನ್ನು ಮಹಿಳೆಯರು ಮನೆಯಲ್ಲಿ ನೈಟಿ ಹಾಕುವಂತಹ ಸಮಯದಲ್ಲಿ.

ಹಾಗೆಯೇ ಮನೆಯಲ್ಲಿ ದೈನಂದಿನ ಬಟ್ಟೆಗಳನ್ನು ಹಾಕುವಂತಹ ಸಮಯದಲ್ಲಿ ಇದನ್ನು ನೀವು ಒಳಉಡುಪಾಗಿ ಬಳಸಬಹುದು ಹಾಗೂ ಇದು ನಿಮಗೆ ಸರಿಯಾದ ಅಳತೆಯಲ್ಲಿಯೇ ಇರುವುದರಿಂದ ಯಾವುದೇ ರೀತಿಯ ಹಿಂಸೆ ಆಗುವುದಿಲ್ಲ. ಬದಲಿಗೆ ದೈನಂದಿನ ಬಳಕೆಗೆ ಇದು ಉಪಯುಕ್ತವಾಗಿರುತ್ತದೆ ಹಾಗೆಯೇ ಹೆಚ್ಚು ದಿನ ಬಾಳಿಕೆ ಬರುತ್ತದೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *