ನಾಲ್ಕು ಹಂತದಲ್ಲಿ ಬೊಜ್ಜು ಕರಗಿಸಿ ಹೊಟ್ಟೆ ಬೊಜ್ಜು ಕರಗಿಸುವ ವ್ಯಾಯಾಮಗಳು..ಇಲ್ಲಿವೆ ನೋಡಿ. - Karnataka's Best News Portal

ನಾಲ್ಕು ಹಂತದಲ್ಲಿ ಬೊಜ್ಜು ಕರಗಿಸಿ ಹೊಟ್ಟೆ ಬೊಜ್ಜು ಕರಗಿಸುವ ವ್ಯಾಯಾಮಗಳು..ಇಲ್ಲಿವೆ ನೋಡಿ.

ಹೊಟ್ಟೆ ಬೊಜ್ಜು ಕರಗಿಸುವ ವಿಧಾನ….||

ಹೊಟ್ಟೆ ಬೊಜ್ಜನ್ನು ಕರಗಿಸುವಂತಹ ಕೆಲವೊಂದಷ್ಟು ಯೋಗಸನ ಪ್ರಾಣಾಯಾಮ ಹಾಗೂ ಮುದ್ರೆಗಳು ಹಾಗೂ ಆಹಾರ ಕ್ರಮದಲ್ಲಿ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸಲೇಬೇಕು ಆಗ ಮಾತ್ರ ಹೊಟ್ಟೆ ಬೊಜ್ಜನ್ನು ಸಂಪೂರ್ಣವಾಗಿ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಆದರೆ ಯಾವುದೇ ರೀತಿಯ ವಿಧಾನವನ್ನು ನೀವು ಅನುಸರಿಸದೇ ಇದ್ದಲ್ಲಿ ಯಾವುದೇ ಕಾರಣಕ್ಕೂ ಹೊಟ್ಟೆ ಬೊಜ್ಜನ್ನು ಕರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಹಾಗಾದರೆ ಈ ದಿನ ಹೊಟ್ಟೆ ಬೊಜ್ಜು ಬರುವುದಕ್ಕೆ ಮೊದಲು ಕಾರಣ ಗಳೇನು ಎನ್ನುವುದನ್ನು ತಿಳಿದುಕೊಳ್ಳೋಣ. ನಂತರ ಅದನ್ನು ಹೇಗೆ ಸರಿಪಡಿಸುವುದು ಹಾಗೂ ಅದಕ್ಕೆ ಯಾವ ಒಂದು ಮನೆಮದ್ದನ್ನು ಮಾಡಿ ಸೇವನೆ ಮಾಡುತ್ತಾ ಬರುವುದರಿಂದ ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಚರ್ಚಿಸೋಣ. ಮೊದಲನೆಯದಾಗಿ ಹೊಟ್ಟೆಬೊಜ್ಜು ಬರುವುದಕ್ಕೆ ಕಾರಣಗಳು ಯಾವುದು ಎಂದರೆ. ಹೆಚ್ಚಿನ ಸಮಯ ಕುಳಿತುಕೊಂಡು ಕೆಲಸ ಮಾಡುವುದು ಇದಕ್ಕೆ ಪ್ರಧಾನವಾದ ಕಾರಣ.

ಜೊತೆಗೆ ರಸ್ತೆ ಬದಿಯ ಆಹಾರ ಪದಾರ್ಥ ತಿನ್ನುವುದು, ಧೂಮಪಾನ, ಮದ್ಯಪಾನ, ಮಾಡುವುದು ಇದರಿಂದ ಲಿವರ್ ಗೆ ತೊಂದರೆ ಉಂಟಾಗಿ ಹೊಟ್ಟೆ ಬೊಜ್ಜು ಹೆಚ್ಚಾಗುವುದು. ಹಾಗೂ ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡದೆ ಇರುವುದು ಜೊತೆಗೆ ಸರಿಯಾದ ಸಮಯ ದಲ್ಲಿ ನಿದ್ರೆ ಮಾಡದೇ ಇರುವುದು ಕೂಡ ಹೊಟ್ಟೆ ಬೊಜ್ಜು ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಎಂದೇ ಹೇಳಬಹುದು.

See also  ಇದರಿಂದ ಹಾರ್ಟ್ ಚೆನ್ನಾಗಿ ಇದೆಯಾ ಇಲ್ಲವೇ ಎಂದು ಸುಲಭವಾಗಿ ತಿಳಿಯಬಹುದು..ಹೃದಯದ ಆರೋಗ್ಯ ಚೆನ್ನಾಗಿರಲು ಇದನ್ನು ಮಾಡಿ ಸಾಕು

ಇದರ ಜೊತೆ ಕಾಫಿ, ಟೀ ಎಣ್ಣೆಯಲ್ಲಿ ಕರಿದ ಪದಾರ್ಥ ಇವೆಲ್ಲವನ್ನೂ ಕೂಡ ಸಂಪೂರ್ಣವಾಗಿ ಬಿಡಬೇಕು, ಆಗ ಮಾತ್ರ ನೀವು ಹೊಟ್ಟೆ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಹಾಗಾದರೆ ಹೊಟ್ಟೆ ಬೊಜ್ಜನ್ನು ಕರಗಿಸುವುದಕ್ಕೆ ಯಾವ ಪ್ರಾಣಾಯಾಮವನ್ನು ಮಾಡಬೇಕು ಎಂದರೆ ಸೂರ್ಯ ಮುದ್ರೆಯಲ್ಲಿ ನಂತರ ಅಪಾನ ಮುದ್ರೆ ಮತ್ತು ಸಮಾನ ಮುದ್ರೆಯಲ್ಲಿ ಪ್ರತಿನಿತ್ಯ ಬೆಳಗಿನ ಸಮಯ ಮತ್ತು ಸಂಜೆಯ ಸಮಯ ಕಪಾಲಭಾತಿಯನ್ನು ಮಾಡಬೇಕು.

ಈ ರೀತಿ ಮಾಡುವುದರಿಂದ ದೇಹದಲ್ಲಿರುವ ಎಲ್ಲಾ ಪಿತ್ತದ ಅಂಶ ದೂರವಾಗಿ ಹೊಟ್ಟೆ ಬೊಜ್ಜು ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಇದರ ಜೊತೆ ನಾಡಿಶೋಧನ, ಉಜ್ಜಾಯಿ ಪ್ರಾಣಾಯಾಮ, ಬ್ರಾಮರಿ ಪ್ರಾಣಾಯಾಮ ಹೀಗೆ ಇವೆಲ್ಲವನ್ನೂ ಕೂಡ ಮಾಡಬೇಕು. ಜೊತೆಗೆ ಒಂದು ಅದ್ಭುತವಾದ ಜ್ಯೂಸ್ ಕುಡಿಯಬೇಕು ಅದು ಯಾವುದೆಂದರೆ ಕಡ್ಡಾಯವಾಗಿ ಮೂರು ತಿಂಗಳು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡಲೇಬೇಕು.

ನಂತರ ಜೀರಿಗೆ ಕಷಾಯವನ್ನು ರಾತ್ರಿ ಸಮಯ ಕುಡಿಯಬೇಕು ಹಾಗೆ ಪ್ರತಿದಿನ ಮಧ್ಯಾಹ್ನ ಒಂದು ಲೋಟ ಬೂದುಗುಂಬಳಕಾಯಿ ಜ್ಯೂಸ್ ಕುಡಿಯಬೇಕು ಮತ್ತು ಜೊತೆಗೆ ಒಂದು ತಿಂಗಳು ಕಡ್ಡಾಯವಾಗಿ ಸೊಪ್ಪು ತರಕಾರಿ ಹಣ್ಣುಗಳನ್ನು ತಿನ್ನಬೇಕು. ಈ ರೀತಿ ನೀವು ಈ ವಿಧಾನ ಅನುಸರಿಸಿದರೆ ಹೊಟ್ಟೆ ಬೊಜ್ಜು ಮಂಜಿನಂತೆ ಕರಗಿ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.