ಪಾತ್ರೆ ತೊಳೆಯುವ ಕೆಲಸ ಇನ್ನು ನಿಮಿಷದಲ್ಲಿ ಮುಗಿಯುತ್ತೆ, ಉಜ್ಜಿ ತಿಕ್ಕಿ ತೊಳೆಯುವುದು ಬೇಡ...ಬಾರಿ ಉಳಿತಾಯದ ಟಿಪ್ಸ್.. - Karnataka's Best News Portal

ಪಾತ್ರೆ ತೊಳೆಯುವ ಕೆಲಸ ಇನ್ನು ನಿಮಿಷದಲ್ಲಿ ಮುಗಿಯುತ್ತೆ, ಉಜ್ಜಿ ತಿಕ್ಕಿ ತೊಳೆಯುವುದು ಬೇಡ…..||

ನಮಗೆಲ್ಲರಿಗೂ ಕೂಡ ಮನೆಯಲ್ಲಿ ದೊಡ್ಡ ಕೆಲಸ ಯಾವುದು ಎಂದರೆ ಪಾತ್ರೆ ತೊಳೆಯುವುದು ಅದಕ್ಕಾಗಿ ಹೆಚ್ಚು ಸಮಯ ಬೇಕಾಗಿರುತ್ತದೆ ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ಪಾತ್ರೆ ತೊಳೆಯುವ ಕೆಲಸ ಎಂದ ತಕ್ಷಣ ಅದೊಂದು ದೊಡ್ಡ ಕೆಲಸ ಎಂದೇ ಹೇಳುತ್ತಾರೆ. ಆದರೆ ಪಾತ್ರೆಯನ್ನು ತೊಳೆಯುವುದಕ್ಕೆ ನಾವು ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು

ಸೋಪ್ ಪೌಡರ್, ಲಿಕ್ವಿಡ್, ಗಳು ಹೀಗೆ ಹಲವಾರು ಪದಾರ್ಥಗಳನ್ನು ತಂದು ಉಪಯೋಗಿಸುತ್ತೇವೆ. ಆದರೆ ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೆಮಿಕಲ್ ಬಳಸಿರುತ್ತಾರೆ. ಆದರೆ ಅವು ಕೇವಲ ನೊರೆ ಬರುತ್ತದೆಯೇ ಹೊರತು ಪಾತ್ರೆಯನ್ನು ಶುಚಿಯಾಗಿ ಹಾಗೂ ಕೆಮಿಕಲ್ ಹೋಗುವಂತೆ ಮಾಡುವುದಿಲ್ಲ ಹಾಗೂ ಇದರಿಂದ ಯಾವುದೇ ರೀತಿಯ ಪಾತ್ರ ಹೊಳಪು ಕೂಡ ಬರುವುದಿಲ್ಲ ಅದರಲ್ಲೂ ಕೆಲವೊಬ್ಬರಿಗೆ ಇದನ್ನು ಉಪಯೋಗಿಸಿದ ತಕ್ಷಣ.

ಅವರ ಕೈ ನವೆ ಬರುವುದು, ಹೀಗೆ ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಇವೆಲ್ಲವೂ ಕೂಡ ಅಪಾಯ ಕಾರಿ ಎಂದು ಹೇಳಬಹುದು. ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಪದಾರ್ಥವನ್ನು ನೀವು ಉಪಯೋಗಿಸಿ ಪಾತ್ರೆಯನ್ನು ತೊಳೆಯಬಹುದು ಹಾಗೂ ದೇವರ ಮನೆಯ ಪಾತ್ರಗಳನ್ನು ಕೂಡ ತೊಳೆಯಬಹುದು ಯಾವುದೇ ರೀತಿಯ ಪಾತ್ರೆಯಾದರೂ ಕೂಡ.

ಈ ಒಂದು ವಿಧಾನದಲ್ಲಿ ನೀವು ತೊಳೆದಿದ್ದೆ ಆದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಹಾಗೂ ಪಾತ್ರೆ ಶುಚಿಯಾಗಿ ಫಳ ಫಳ ಹೊಳೆಯುತ್ತಿರುತ್ತದೆ. ಹಾಗಾದರೆ ಇದನ್ನು ತಯಾರಿಸಲು ಯಾವುದೆಲ್ಲ ಪದಾರ್ಥಗಳು ಬೇಕು ಎಷ್ಟು ಪ್ರಮಾಣದಲ್ಲಿ ಇದನ್ನು ತಯಾರಿಸಿ ಇದನ್ನು ಪಾತ್ರೆ ತೊಳೆಯುವುದಕ್ಕೆ ಉಪಯೋಗಿಸಬಹುದು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿದುಕೊಳ್ಳೋಣ.

ಇದಕ್ಕೆ ಬೇಕಾಗುವ ಬಹಳ ಮುಖ್ಯವಾದ ಪದಾರ್ಥ ಯಾವುದು ಎಂದರೆ ನೀವು ಸಾಮಾನ್ಯವಾಗಿ ಕಳಸಕ್ಕೆ ಎಸೆಯುವಂತಹ ತೆಂಗಿನ ಕಾಯಿ ಮಟ್ಟೆ ಅಂದರೆ ತೆಂಗಿನಕಾಯಿಯ ಜುಟ್ಟು, ಇದನ್ನು ಚೆನ್ನಾಗಿ ಸುಟ್ಟು ಇದರ ಬೂದಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಒಂದು ಕಪ್ ಸೋಪ್ ಪೌಡರ್, ಹಾಗೆಯೇ ಒಂದು ಕಪ್ ಅಡುಗೆ ಸೋಡಾ, ಕಾಲ ಕಪ್ ಲೆಮನ್ ಸಾಲ್ಟ್, ಇಷ್ಟನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು.

ನಂತರ ಇದನ್ನು ಯಾವುದಾದರೂ ಡಬ್ಬಿಯಲ್ಲಿಟ್ಟು ಸ್ಟೋರ್ ಮಾಡಿಕೊಳ್ಳಬೇಕು. ನಂತರ ನಿಮಗೆ ಉಪಯೋಗಿಸುವ ಸಮಯದಲ್ಲಿ ಒಂದು ತಟ್ಟೆಗೆ ಹಾಕಿ ಸ್ವಲ್ಪ ನೀರನ್ನು ಹಾಕಿ ಉಪಯೋಗಿಸುವುದರಿಂದ ನಿಮ್ಮ ಪಾತ್ರ ಪಳಪಳನೆ ಹೊಳೆಯುತ್ತದೆ. ಹಾಗೂ ದೇವರ ಮನೆಯ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ಸುಲಭವಾಗಿ ಶುಚಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *