ಸೀನಿಯರ್ ಸಿಟಿಜನ್ ಕಾರ್ಡ್ ಹೊಸ ಯೋಜನೆ ಏನೆಲ್ಲಾ ಸೌಲಭ್ಯ ಸಿಗುತ್ತೆ ಗೊತ್ತಾ ಈ ಕಾರ್ಡಿನಿಂದ. - Karnataka's Best News Portal

ಹಿರಿಯ ನಾಗರಿಕರ ಕಾರ್ಡ್ ಇದ್ದವರಿಗೆ ಸಿಗುವ ಸೌಲಭ್ಯಗಳೇನು..||

ಹಿರಿಯ ನಾಗರೀಕರ ಹಿತರಕ್ಷಣೆಯ ಉದ್ದೇಶದಿಂದ ರಾಜ್ಯ ಸರ್ಕಾರ ಹಿರಿಯ ನಾಗರೀಕರಿಗೆ ಆನ್ಲೈನ್ ಮೂಲಕ ಅರ್ಜಿ ಪಡೆದು ಗುರುತು ಚೀಟಿ ವಿತರಿಸಲಾಗುತ್ತಿದ್ದು. ಪ್ರತಿಯೊಬ್ಬ ಹಿರಿಯರು ಕೂಡ ಈ ಒಂದು ಕಾರ್ಡ್ ಮಾಡಿಸಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಇದರಿಂದ ಅವರು ಹಲವಾರು ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಅದರಲ್ಲೂ ಹಿರಿಯ ನಾಗರಿಕರು ಈ ಕಾರ್ಡ್ ಮಾಡಿಸಿಕೊಂಡರೆ ನೀವು ಎಲ್ಲೇ ಹೋದರು, ಅಂದರೆ ಬಸ್, ಟ್ರೈನ್, ಗಳಲ್ಲಿ ಪ್ರಯಾಣಿಸುವಂತಹ ಸಮಯದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಹೆಚ್ಚಿನ ಹಣ ಪಡೆದು ಕೊಳ್ಳುವುದಿಲ್ಲ. ಬದಲಿಗೆ ನಿಮಗೆ ಇಂತಿಷ್ಟು ಎಂಬಂತೆ ರಿಯಾಯಿತಿ ದರದಲ್ಲಿ ನಿಮ್ಮ ಬಳಿ ಬಸ್ ಟಿಕೆಟ್ ಹಣವನ್ನು ಪಡೆದು ಕೊಳ್ಳುತ್ತಾರೆ. ಹಾಗೂ ಇದರಿಂದ ಅವರಿಗೆ ಹೆಚ್ಚು ಉಪಯೋಗವಾಗು ತ್ತದೆ ಎಂದೇ ಹೇಳಬಹುದು.

ಸರಕಾರವು ಒದಗಿಸುತ್ತಿರುವಂತಹ ಈ ಸೌಲಭ್ಯದ ಬಗ್ಗೆ ಹೆಚ್ಚಿನದಾಗಿ ಹಳ್ಳಿಯಲ್ಲಿ ಇರುವಂತಹ ಜನರಿಗೆ ತಿಳಿದಿರುವುದಿಲ್ಲ ಆದ್ದರಿಂದ ಇಂತಹ ವಿಷಯವನ್ನು ತಿಳಿದವರು ಅಂತವರಿಗೆ ಹೇಳುವುದರ ಮೂಲಕ ಅವರಿಗೆ ಹಲವಾರು ರೀತಿಯ ಪ್ರಯೋಜನಗಳನ್ನು ತಿಳಿಸುವುದು ಉತ್ತಮ. ಅದೇ ರೀತಿಯಾಗಿ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಯಾರೆಲ್ಲ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅರ್ಹರಿದ್ದಾರೆ.

ಹೀಗೇ ಈ ವಿಷಯವಾಗಿ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. 60 ವರ್ಷ ತುಂಬಿದ ಹಿರಿಯ ನಾಗರಿಕರು ಸರ್ಕಾರದಿಂದ ಬರುವಂತಹ ಈ ಸೀನಿಯರ್ ಸಿಟಿಜನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ. ಅರ್ಜಿದಾರರ ಆಧಾರ್ ಕಾರ್ಡ್, ಎರಡು ಪಾಸ್ ಪೋರ್ಟ್ ಅಳತೆಯ ಫೋಟೋ.

ದೂರವಾಣಿ ಸಂಖ್ಯೆ, ಹಾಗೆಯೇ ನಿಮ್ಮ ವಯಸ್ಸಿನ ದಿನಾಂಕ ತಿಳಿದು ಕೊಳ್ಳಲು ಜನನ ದಿನಾಂಕವನ್ನು ದೃಢೀಕರಿಸಲು ಒಂದು ಪತ್ರ, ಹೀಗೆ ಈ ಎಲ್ಲಾ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಈ ಒಂದು ಅರ್ಜಿಯನ್ನು ಹಾಕಬಹುದು. ಆದರೆ ಎಲ್ಲಿ ಈ ಒಂದು ಅರ್ಜಿಯನ್ನು ಹಾಕಬಹುದು ಎಂದರೆ ನಿಮ್ಮ ಹತ್ತಿರದ ಗ್ರಾಮೂನ್ ಕೇಂದ್ರ, ಅಥವಾ ಕರ್ನಾಟಕ 1 ಕೇಂದ್ರ ಅಥವಾ ಬೆಂಗಳೂರು 1 ಕೇಂದ್ರ.

ಇಲ್ಲಿ ನೀವು ಹಿರಿಯ ನಾಗರಿಕರ ಕಾರ್ಡ್ ಅನ್ನು ಮಾಡಿಸಿಕೊಳ್ಳ ಬಹುದಾಗಿರುತ್ತದೆ. ಮೇಲೆ ಹೇಳಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಹೋಗಿ ನೀವು ಅಲ್ಲಿ ಅರ್ಜಿಯನ್ನು ಆನ್ಲೈನ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಮೊದಲೇ ಹೇಳಿದಂತೆ ಬಸ್ ಟಿಕೆಟ್ ದರ, ರೈಲ್ವೆ ಟಿಕೆಟ್ ದರ, ಆದಾಯ ತೆರಿಗೆ ದರ ಇದರಲ್ಲೆಲ್ಲ ನಿಮಗೆ ರಿಯಾಯಿತಿ ಸಿಗುತ್ತದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *