ಹಳೆ ಕಾರ್ ಗಳಲ್ಲಿ ಬರುವ ದೊಡ್ಡ ಸಮಸ್ಯೆಗಳಿವು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಈ ವಿಡಿಯೋ ಮಿಸ್ ಮಾಡದೆ ನೋಡಿ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ರೀತಿಯ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತೆಗೆದುಕೊಂಡರೆ ನಿಮ್ಮ ಕಥೆ ಮುಗಿಯಿತು….!! ಕಷ್ಟಪಟ್ಟು ದುಡಿದ ಕಾಸು ಹರೋ ಹರ…!!

ಇತ್ತೀಚಿನ ದಿನಗಳಲ್ಲಿ ಹೊಸ ಕಾರುಗಳನ್ನು ತೆಗೆದುಕೊಳ್ಳುವುದಕ್ಕೆ ಎಷ್ಟು ಯೋಚನೆಯನ್ನು ಮಾಡುತ್ತಾರೋ. ಅದೇ ರೀತಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತೆಗೆದುಕೊಳ್ಳುವುದಕ್ಕೂ ಕೂಡ ಅಷ್ಟೇ ಯೋಚನೆಯನ್ನು ಮಾಡುತ್ತಾರೆ ಎಂದೇ ಹೇಳಬಹುದು. ಏಕೆಂದರೆ ಈ ಕಾರು ಎಷ್ಟನೇ ಇಸವಿಯಲ್ಲಿ ತೆಗೆದುಕೊಂಡಿದ್ದು ಎಲ್ಲಿಯ ತನಕ ಇದನ್ನು ಉಪಯೋಗಿಸಿದ್ದಾರೆ.

ಹಾಗೂ ಕಾರ್ ನಲ್ಲಿರುವಂತಹ ಎಲ್ಲಾ ವಸ್ತುಗಳು ಕೂಡ ಚೆನ್ನಾಗಿದೆಯಾ ಅಥವಾ ಹಾಳಾಗಿದೆಯಾ, ಹಾಗೆಯೇ ಕಾರ್ ಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳು ಅಂದರೆ ಕಾರ್ ತೆಗೆದುಕೊಳ್ಳುವಂತಹ ಸಮಯದಲ್ಲಿ ಮಾಡಿಸಿರುವಂತಹ ದಾಖಲಾತಿಗಳು, ಅವರ ಹೆಸರಿನಲ್ಲಿ ಇದೆಯಾ ಎಲ್ಲಾ ಗಮನಿಸಿ ನಂತರ ಕಾರ್ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಕೆಲವೊಮ್ಮೆ ಕೆಲವೊಬ್ಬರು ಅವರ ದಾಖಲಾತಿಗಳು ಸರಿ ಇಲ್ಲ ಎಂದರೆ ಅವರ ಕಾರ್ ತೆಗೆದುಕೊಳ್ಳುವುದಕ್ಕೂ ಕೂಡ ಇಷ್ಟಪಡುವುದಿಲ್ಲ.

ಕಾರ್ ಎಷ್ಟೇ ಒಳ್ಳೆಯ ಸ್ಥಿತಿಯಲ್ಲಿ ಇದ್ದರೂ ಕೂಡ ಅವರ ದಾಖಲಾತಿ ಗಳು ಅಂದರೆ ಅವರ ಡಾಕುಮೆಂಟ್ಸ್ ಸರಿ ಇಲ್ಲ ಎಂದರೆ ಅದನ್ನು ಯಾರು ಕೂಡ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಏಕೆ ಎಂದರೆ ಮುಂದಿನ ದಿನದಲ್ಲಿ ಅದಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆ ಎದುರಾಗ ಬಹುದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಯಾರೂ ಕೂಡ ಆ ಕಾರ್ ಖರೀದಿ ಮಾಡುವುದಿಲ್ಲ. ಇದರಿಂದ ಕಾರ್ ಮಾರುವವರಿಗೆ ಹಲವಾರು ಸಮಸ್ಯೆ ಎದುರಾಗುತ್ತದೆ.

ಆದ್ದರಿಂದ ಕಾರ್ ಹೊಂದಿರುವಂತಹ ಪ್ರತಿಯೊಬ್ಬರೂ ಕೂಡ ಕೇವಲ ಕಾರ್ ಅಷ್ಟೇ ಅಲ್ಲ ಪ್ರತಿಯೊಂದು ವಾಹನವನ್ನು ಇಟ್ಟುಕೊಂಡಿರುವವರು ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿ ಪತ್ರಗಳನ್ನು ಇಟ್ಟುಕೊಂಡಿರು ವುದು ಬಹಳ ಮುಖ್ಯ. ಯಾಕೆಂದರೆ ಕೆಲವೊಮ್ಮೆ ಏನಾದರೂ ಅಪಘಾತ ವಾದಂತಹ ಸಮಯದಲ್ಲಿ ಅದಕ್ಕೆ ಇನ್ಸೂರೆನ್ಸ್ ಹಣ ಹೀಗೆ ಕೆಲವೊಂದು ಉಪಯೋಗಕ್ಕೆ ಬರುತ್ತದೆ. ಆದ್ದರಿಂದ ಅವೆಲ್ಲವನ್ನು ಇಟ್ಟುಕೊಂಡಿರುವುದು ಬಹಳ ಮುಖ್ಯ.

ಅದೇ ರೀತಿ ಮೇಲೆ ಹೇಳಿದಂತೆ ನೀವೇನಾದರೂ ಅದನ್ನು ಮಾರಬೇಕು ಎಂದರೆ ತೆಗೆದುಕೊಳ್ಳುವವರು ಈ ಎಲ್ಲಾ ವಿಷಯಗಳನ್ನು ತಿಳಿದು ಕೊಂಡು ನಂತರ ಅದನ್ನು ಪಡೆದುಕೊಳ್ಳುತ್ತಾರೆ. ಆದ್ದರಿಂದ ಮಾರಾಟ ಮಾಡುವವರು ಈ ವಿಷಯದ ಬಗ್ಗೆ ಮೊದಲು ಎಚ್ಚರಿಕೆ ವಹಿಸುವುದು ಉತ್ತಮ. ಇಲ್ಲವಾದಲ್ಲಿ ನೀವು ಸಮಯಕ್ಕೆ ಆ ಕಾರನ್ನು ಮಾರುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ನಿಮಗೆ ಸರಿಯಾದ ಹಣವು ಕೂಡ ಸಿಗುವುದಿಲ್ಲ.

ಆದ್ದರಿಂದ ನೀವು ಎಲ್ಲ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಂಡಿದ್ದರೆ ಈಗ ನಾವು ಹೇಳುವಂತಹ ಈ ಒಂದು ಆಪ್ ಮೂಲಕ ನಿಮ್ಮ ಕಾರನ್ನು ಸರಿಯಾದ ಬೆಲೆಗೆ ಮಾರಾಟ ಮಾಡಬಹುದು ಅದು ಯಾವುದೆಂದರೆ ಕಾರ್ 24. ಹೌದು ಇದರಲ್ಲಿ ನಿಮ್ಮ ಕಾರ್ ಬಗ್ಗೆ ಹಲವಾರು ಮಾಹಿತಿ ಗಳನ್ನು ಹಾಕುವುದರ ಮೂಲಕ ಎಲ್ಲರೂ ಇದನ್ನು ನೋಡಿ ತೆಗೆದು ಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *