ನಿಮಗೆ IAS ಅಧಿಕಾರಿಗಳ ಪವರ್ ಜವಾಬ್ದಾರಿ ಮತ್ತು ಸೌಲಭ್ಯಗಳ ಬಗ್ಗೆ ಗೊತ್ತಾ.... ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಸಹ ಏನು ಮಾಡೊಕಾಗೊಲ್ಲ..ಇವರನ್ನ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಿಮಗೆ IAS ಅಧಿಕಾರಿಗಳ ಪವರ್ ಜವಾಬ್ದಾರಿ ಮತ್ತು ಸೌಲಭ್ಯಗಳ ಬಗ್ಗೆ ಗೊತ್ತಾ……??

ಪ್ರಸಕ್ತ ಈಗಿನ ರಾಜಕೀಯ ವಿದ್ಯಾಮಾನಗಳು ನಿಮ್ಮ ಅರಿವಿಗೂ ಬಂದಿರಬಹುದು ರಾಜ್ಯದಲ್ಲಿ IAS, IPS ಅಧಿಕಾರಿಗಳ ರಂಪಾಟ ನೀವು ನೋಡುತ್ತಿದ್ದೀರಾ. ಇದು ರಾಜಕೀಯ ಸ್ವರೂಪದಿಂದ ಮೆಲ್ಲನೆ ವೈಯಕ್ತಿಕ ರೂಪವನ್ನು ತಾಳುತ್ತಿರುವುದನ್ನು ನೀವು ನೆನ್ನೆ ಮೊನ್ನೆಯಿಂದ ಗಮನಿಸುತ್ತಿದ್ದೀರಿ. IAS, IPS ನಂತಹ ಸಿವಿಲ್ ಹುದ್ದೆಗಳು ನಮ್ಮ ದೇಶದ ಅತ್ಯುನ್ನತ ಪೋಸಿಶನ್ ಗಳಾಗಿವೆ.

ತಾನು IAS, IPS ಆಗಬೇಕು ಎಂದು ಎಷ್ಟೋ ಜನರ ಕನಸು. ಇದಕ್ಕಾಗಿ ತಮ್ಮ ಇಡೀ ಜೀವನವನ್ನು ಪಣಕ್ಕಿಟ್ಟು ಸಾಧನೆಗೆ ಕೂರುವಂತಹ ಎಷ್ಟೋ ಜನ ನಮ್ಮ ನಡುವೆ ಇದ್ದಾರೆ. ವರ್ಷಾನುಗಟ್ಟಲೆ ಇವುಗಳಿಗಾಗಿ ಓದಿ ಒಂದೆರಡು ಅಂಕಿಗಳಲ್ಲಿ ಮಿಸ್ ಮಾಡಿಕೊಂಡಂತಹ ಅದೆಷ್ಟೋ ವಿದ್ಯಾರ್ಥಿಗಳು ಇದ್ದಾರೆ.

ಅದೇ ರೀತಿ ಒಂದೇ ಪ್ರಯತ್ನದಲ್ಲಿ ಒಂದೇ ಸಲ IAS, IPS ಆದವರು ಕೂಡ ಇದ್ದಾರೆ. ಈಗಿನ ಕೆಲವು ಸಿವಿಲ್ ಹುದ್ದೆಯಲ್ಲಿ ಇರುವವರು ತಮ್ಮ ಆಡಳಿತದ ಮಿತಿ ಮರೆತು ವರ್ತಿಸುತ್ತಿದ್ದಾರೆ. ಆದರೆ ಅಸಲಿಗೆ ಈ IAS, IPS ಎಂದರೆ ಏನು ಇವರುಗಳಿಗೆ ಇರುವ ಆಡಳಿತಾತ್ಮಕ ಪವರ್ ಏನು. ಹಾಗೂ ಇವರುಗಳಿಗೆ ಇರುವ ಜವಾಬ್ದಾರಿ ಗಳೇನು ಹಾಗೂ ಮಿತಿಗಳು ಏನು ಎನ್ನುವ ಮುಂತಾದ ಅನೇಕ ಸಂಗತಿಗಳನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಮೊದಲಿಗೆ ಈ IAS ಎಂದರೆ ಏನು ಎನ್ನುವು ದನ್ನು ತಿಳಿಯೋಣ. IAS ಎಂದರೆ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಇದು ಆಲ್ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಗಳ ಅಡಿಯಲ್ಲಿ ಬರುವಂತಹ ಒಂದು ಪ್ರಮುಖವಾದ ಅಂತಹ ಹುದ್ದೆ.

ಇದಲ್ಲದೆ IPS ಅಂದರೆ ಇಂಡಿಯನ್ ಪೊಲೀಸ್ ಸರ್ವಿಸ್ ಹಾಗೂ IFS ಎಂದರೆ ಇಂಡಿಯನ್ ಫಾರೆಸ್ಟ್ ಸರ್ವಿಸ್, ಎಂಬ ವಿಧಗಳು ಇದರಲ್ಲಿ ಇದೆ. ಈ ಪರೀಕ್ಷೆಗಳು ಕೇಂದ್ರ ಸರ್ಕಾರದ ಅಂದರೆ UPSC ಅಂದರೆ ಕೇಂದ್ರ ಲೋಕಸೇವಾ ಆಯೋಗದಿಂದ ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಘೋಷಣೆಯಾಗುತ್ತದೆ. ಪ್ರತಿ ವರ್ಷದ ಇದಕ್ಕಾಗಿ ದೇಶದಾದ್ಯಂತ ಸುಮಾರು 10 ಲಕ್ಷದಷ್ಟು ಆಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗುತ್ತಾರೆ.

ಈ ಪರೀಕ್ಷೆಗಳು ಒಂದೇ ಮಾದರಿಯಲ್ಲಿ ಇದ್ದು ಮೂರು ವಿವಿಧ ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯದು ಆಬ್ಜೆಕ್ಟಿವ್ ಆಯ್ಕೆಗಳಿರುವಂತಹ ಪ್ರಿಲಿಮ್ಸ್ ಪರೀಕ್ಷೆ. ಎರಡನೆಯದು ಮೈನ್ಸ್ ಪರೀಕ್ಷೆ ಹಾಗೂ ಮೂರನೆಯದು ಓರಲ್ ಇಂಟರ್ವ್ಯೂ.ಈ ಪ್ರಿಲಿಮ್ಸ್ ನಲ್ಲಿ ಕೇವಲ ಟಿಕ್ಕಿಂಗ್ ಅಥವಾ ಮಾರ್ಕಿಂಗ್ ಉತ್ತರಗಳಿಗೆ ಅವಕಾಶವಿದ್ದು. ಇದರ ಮೈನ್ಸ್ ಪರೀಕ್ಷೆ ವಿಸ್ತೃತ ರಿಟರ್ನ್ ಎಕ್ಸಾಮ್ ಆಗಿರುತ್ತದೆ. ಇವೆರಡನ್ನು ಕೂಡ ಯಶಸ್ವಿಯಾಗಿ ಮುಗಿಸಿದವರು ಮಾತ್ರನೇ.

By admin

Leave a Reply

Your email address will not be published. Required fields are marked *