ಮರಣ ಹೊಂದಿದವರ ಈ ಮೂರು ವಸ್ತುಗಳನ್ನು ಎಂದಿಗೂ ಉಪಯೋಗಿಸಬಾರದು... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮರಣ ಹೊಂದಿದವರ ಈ ಮೂರು ವಸ್ತುಗಳನ್ನು ಎಂದಿಗೂ ಉಪಯೋಗಿಸಬಾರದು…..||

ಸಾಮಾನ್ಯವಾಗಿ ಕುಟುಂಬದ ಸದಸ್ಯರ ಮರಣದ ನಂತರ ಜನರು ತಮ್ಮ ವಸ್ತುಗಳನ್ನು ಸ್ಮರಣಾರ್ಥವಾಗಿ ಅಥವಾ ಟೋಕನ್ ಆಗಿ ಬಳಸುತ್ತಾರೆ. ಆದರೆ ಕೆಲವರು ಸತ್ತವರಿಗೆ ಸಂಬಂಧಿಸಿದ ವಸ್ತುಗಳನ್ನು ನಾಶಪಡಿಸು ತ್ತಾರೆ. ಗರುಡ ಪುರಾಣದಲ್ಲಿ ಸತ್ತ ವ್ಯಕ್ತಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಹೇಳಲಾಗಿದೆ. ಅವುಗಳನ್ನು ತಪ್ಪಿಯು ನಾವು ಬಳಸಬಾರದು.

ಇದು ಸತ್ತ ಆತ್ಮವನ್ನು ಆಕರ್ಷಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ಹರಡುತ್ತದೆ ಎನ್ನುವ ನಂಬಿಕೆ ಇದೆ. ಸತ್ತವರ ಈ ವಸ್ತುಗಳನ್ನು ತಪ್ಪಿಯು ಬಳಸಬೇಡಿ ಸತ್ತ ವ್ಯಕ್ತಿಗೆ ತಾನು ಹಾಕಿಕೊಳ್ಳುತ್ತಿದ್ದಂತಹ ಆಭರಣದ ಮೇಲೆ ಹೆಚ್ಚು ಬಾಂಧವ್ಯ ಇರುತ್ತದೆ ಎಂದು ಹೇಳಲಾಗುತ್ತದೆ. ಇದು ಸತ್ತ ವ್ಯಕ್ತಿಯ ಆತ್ಮಕ್ಕೂ ಕೂಡ ಅನ್ವಯಿಸುತ್ತದೆ. ಗರುಡ ಪುರಾಣದ ಪ್ರಕಾರ ಮರಣ ಹೊಂದಿದ ವ್ಯಕ್ತಿಯ ಆಭರಣಗಳನ್ನು ಬಳಸಬಾರದು.

ಯಾಕೆ ಎಂದರೆ ಸತ್ತವರ ಶಕ್ತಿ ಅಥವಾ ಅವರ ಆತ್ಮವೂ ತನ್ನ ಆಭರಣವನ್ನು ಧರಿಸಿದಂತಹ ವ್ಯಕ್ತಿಯೊಂದಿಗೆ ಸಂಪರ್ಕಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಆ ರೀತಿ ಆಭರಣಗಳನ್ನು ನೀವು ಬಳಸಬೇಕು ಎಂದೆನಿಸಿದರೆ ಅವುಗಳನ್ನು ಕರಗಿಸಿ ಹೊಸ ವಿನ್ಯಾಸದಲ್ಲಿ ಅವುಗಳನ್ನು ಬಳಸಬಹುದು. ಆಭರಣವನ್ನು ಹೊಸ ವಿನ್ಯಾಸದಲ್ಲಿ ತಯಾರಿಸುವುದರ ಮೂಲಕ ನೀವು ಅದನ್ನು ಬಳಸಬಹುದು. ಆದರೆ ಇದ್ದ ಸ್ಥಿತಿಯಲ್ಲಿಯೇ ಆ ಆಭರಣಗಳನ್ನು ಬಳಸುವುದನ್ನು ತಪ್ಪಿಸಬೇಕು.

ಒಂದು ವೇಳೆ ಸತ್ತ ವ್ಯಕ್ತಿಯು ಅವನ ಮರಣದ ಮೊದಲು ಅವನ ಆಭರಣಗಳನ್ನು ನಿಮಗೆ ಉಡುಗೊರೆಯಾಗಿ ನೀಡಿದ್ದರೆ ನೀವು ಅದನ್ನು ಬಳಸಬಹುದು ಮತ್ತು ಅದನ್ನು ಶುಭವಾಗಿ ಇಟ್ಟುಕೊಳ್ಳಬಹುದು. ಆದರೆ ವಿಶೇಷವಾಗಿ ಮರಣ ಹೊಂದಿದ ವ್ಯಕ್ತಿಯ ಆಭರಣವನ್ನು ಧರಿಸುವಲ್ಲಿ ಯಾವುದೇ ತಪ್ಪನ್ನು ಮಾಡಬೇಡಿ. ಒಬ್ಬ ವ್ಯಕ್ತಿಯು ಆಭರಣವನ್ನು ಹೊರೆತುಪಡಿಸಿ ತಾನು ಧರಿಸುವ ಬಟ್ಟೆಯನ್ನು ಹೆಚ್ಚು ಇಷ್ಟಪಡುತ್ತಾನೆ.

ಗರುಡ ಪುರಾಣದ ಪ್ರಕಾರ ಮರಣದ ನಂತರವೂ ಸತ್ತವರ ಆತ್ಮವು ಲೌಕಿಕ ಬಾಂಧವ್ಯವನ್ನು ಬಿಡುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ನೀವು ಅವರ ಬಟ್ಟೆಗಳನ್ನು ಧರಿಸುವುದರಿಂದ ಅವರ ಆತ್ಮವೂ ಬಟ್ಟೆಯ ಕಡೆ ಆಕರ್ಷಿತವಾಗಬಹುದು. ಅದಕ್ಕಾಗಿ ಸತ್ತವರ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಒಬ್ಬ ವ್ಯಕ್ತಿಯ ಮರಣದ ನಂತರ ಅವರ ಬಟ್ಟೆಗಳನ್ನು ದಾನ ಮಾಡಬೇಕು ಇದು ಅವರ ಆತ್ಮಕ್ಕೆ ಶಾಂತಿ ಮತ್ತು ಮೋಕ್ಷವನ್ನು ನೀಡುತ್ತದೆ.

ವಾಚ್ ಅಥವಾ ಕೈಗಡಿಯಾರ. ಗರುಡ ಪುರಾಣದ ಪ್ರಕಾರ ಕುಟುಂಬದ ಸದಸ್ಯರ ಮರಣದ ನಂತರ ಅವರ ಕೈಗಡಿಯಾರವನ್ನು ಸಹ ಎಂದಿಗೂ ಬಳಸಬಾರದು. ಸತ್ತವರ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ಗಡಿಯಾರದಲ್ಲೂ ನೆಲೆಸಿರುತ್ತದೆ ಎನ್ನುವ ನಂಬಿಕೆ ಇದೆ. ಸತ್ತವರ ವಾಚ್ ಧರಿಸಿದವರ ಮೇಲೆ ನಕಾರಾತ್ಮಕ ಶಕ್ತಿ ಪರಿಣಾಮ ಬೀರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *