ಸಿಂಹ ರಾಶಿಗೆ ಮಾರ್ಚ್ ನಲ್ಲಿ ಬಹು ನಿರೀಕ್ಷಿತ ಕನಸೊಂದು ನನಸಾಗಲಿದೆ..

ಮಾರ್ಚ್ ತಿಂಗಳ ಸಿಂಹ ರಾಶಿ ಭವಿಷ್ಯ 2023…||

WhatsApp Group Join Now
Telegram Group Join Now

ಮೊದಲನೆಯದಾಗಿ ಮಾರ್ಚ್ ತಿಂಗಳ ಗ್ರಹ ಸ್ಥಿತಿಗಳ ಬದಲಾವಣೆ ಯನ್ನು ನೋಡುವುದಾದರೆ ಕುಜ ಮಿಥುನ ರಾಶಿಗೆ ಪ್ರವೇಶ ಮಾಡುತ್ತಿ ದ್ದಾರೆ 12ನೇ ತಾರೀಖು. ಹಾಗೆಯೇ ಶುಕ್ರನು ಕೂಡ 12ನೇ ತಾರೀಕು ಮೇಷ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. 14ನೇ ತಾರೀಕು ರವಿ ಅಂದರೆ ಸೂರ್ಯ ಮೀನ ರಾಶಿಗೆ ಪ್ರವೇಶ ಮಾಡುತ್ತಿದ್ದಾರೆ. ಅಂದರೆ ಶತ್ರು ಮನೆಯಿಂದ ಮಿತ್ರನ ಮನೆಗೆ ಹೋಗುತ್ತಿದ್ದಾರೆ.

ಇನ್ನು 16ನೇ ತಾರೀಖು ಬುಧ ಮೀನ ರಾಶಿಗೆ ನೀಚ ಸ್ಥಿತಿಯಲ್ಲಿ ಪ್ರವೇಶ ಮಾಡುತ್ತಿದ್ದಾರೆ. ಇದು ಗ್ರಹ ಸ್ಥಿತಿಗಳ ಬದಲಾವಣೆಯಾದರೆ. ಹಾಗಾದರೆ ಮಾರ್ಚ್ ತಿಂಗಳಲ್ಲಿ ಸಿಂಹ ರಾಶಿಯವರ ಭವಿಷ್ಯ ಯಾವ ರೀತಿ ಇರುತ್ತದೆ ಮಾರ್ಚ್ ತಿಂಗಳಲ್ಲಿ ಯಾವುದೆಲ್ಲ ಶುಭಫಲಗಳನ್ನು ಪಡೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ.

ಹಣಕಾಸಿಗೆ ಸಂಬಂಧಿಸಿದಂತೆ ಅನುಕೂಲಗಳು ನಿಮಗೆ ಮಾರ್ಚ್ ತಿಂಗಳಲ್ಲಿ ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದು. ಹಾಗೂ ಮಾರ್ಚ್ ತಿಂಗಳಲ್ಲಿ ಏನಾದರೂ ನಿಮಗೆ ಯಾವುದೇ ರೀತಿಯ ಸಂಕಷ್ಟ ಬಂದರೂ ಇಂತಹ ಸನ್ನಿವೇಶ ಬಂದರೂ ಕೂಡ ಅದನ್ನು ಬಹಳ ಚೆನ್ನಾಗಿ ನಿಭಾಯಿಸುತ್ತೀರಾ. ಅದರಲ್ಲೂ 14ನೇ ತಾರೀಖಿನ ನಂತರ ಅದ್ಭುತವಾಗಿ ಯಾವುದೇ ಸನ್ನಿವೇಶವನ್ನು ಕೂಡ ನಿಭಾಯಿಸುತ್ತೀರಾ ಅದಕ್ಕೆ ಕಾರಣ ಏನು ಎಂದರೆ ನಿಮ್ಮ ರಾಶಿಯ ಅಧಿಪತಿ ಮಿತ್ರನ ಮನೆಗೆ ಬರುತ್ತಿದ್ದಾರೆ.

See also  ಮುಕೇಶ್ ಅಂಬಾನಿ ಯವರ ಜಾತಕ ವಿಶ್ಲೇಷಣೆ ಈ ರೀತಿ ನಿಮ್ಮ ಜಾತಕ ಇದ್ದಲ್ಲಿ ನೀವು ಅತ್ಯಂತ ಶ್ರೀಮಂತರಾಗುವಿರಿ

ಅದರಲ್ಲೂ ನೀವು ಅಂದುಕೊಂಡಂತೆ ನಿಮ್ಮ ಎಲ್ಲಾ ಕೆಲಸಕಾರ್ಯಗಳಲ್ಲಿ ಆದಷ್ಟು ನಿಷ್ಠೆಯಿಂದ ಎಚ್ಚರಿಕೆಯಿಂದ ಮಾಡುತ್ತೀರಾ ಜೊತೆಗೆ ಯಾವುದೇ ರೀತಿಯಾದಂತಹ ಸಾಲದ ಮಾತುಗಳನ್ನು ನಿಮ್ಮ ತಲೆಗೆ ಹಾಕಿಕೊಳ್ಳುವುದಿಲ್ಲ. ಬದಲಿಗೆ ಅವೆಲ್ಲವನ್ನು ಹೊರತುಪಡಿಸಿ ನಿಮ್ಮ ಗುರಿಯತ್ತ ನೀವು ಹೆಚ್ಚು ಆಲೋಚನೆಯನ್ನು ಮಾಡಿ ನಿಮ್ಮ ಸಾಧನೆಯನ್ನು ಮಾಡುತ್ತೀರಾ. ಜೊತೆಗೆ ಈ ಸಮಯದಲ್ಲಿ ನಿಮಗೆ ಹೆಚ್ಚು ಒತ್ತಡ ಇರುತ್ತದೆ.

ಬೇರೆ ಸ್ಥಳಗಳಿಗೆ ಪ್ರಯಾಣ ಮಾಡುವುದರಿಂದ ಹೆಚ್ಚು ಸಂತೋಷ ಉಂಟಾಗುತ್ತದೆ. ಅದರಲ್ಲೂ ಸಂತಾನ ಅಪೇಕ್ಷಿತ ದಂಪತಿಗಳಿಗೆ ಅತ್ಯಂತ ಶುಭಫಲ ಶುಭವಾದ ಮಾಸವಾಗಿರುತ್ತದೆ. ಆಭರಣಗಳನ್ನು ಕೊಳ್ಳು ವಂತದ್ದು, ನೂತನ ವಸ್ತ್ರಗಳನ್ನು ಹಾಗೂ ವಸ್ತುಗಳನ್ನು ಕೊಳ್ಳುವಂತಹ ಜನರಿಗೆ ಬಹಳ ಅದ್ಭುತವಾದಂತಹ ತಿಂಗಳು ಎಂದೇ ಹೇಳಬಹುದು. ಪರಸ್ಪರ ನೀವು ಎಲ್ಲರೊಟ್ಟಿಗೂ ಕೂಡ ಉತ್ತಮವಾದಂತಹ ಬಾಂಧವ್ಯ ವನ್ನು ಹೊಂದಿರುತ್ತೀರಿ.

ನಿಮ್ಮ ಕಷ್ಟಗಳನ್ನು ಬೇರೆಯವರಿಗೆ ಹೇಳಿಕೊಳ್ಳುವುದರ ಮೂಲಕ ಹಾಗೂ ಬೇರೆಯವರು ನಿಮ್ಮ ಜೊತೆ ಕಷ್ಟವನ್ನು ಹೇಳುವುದರ ಮೂಲಕ ನೀವು ನಿಮ್ಮ ಮನಸ್ಸಿಗೆ ಸಮಾಧಾನವನ್ನು ಪಡೆದು ಕೊಳ್ಳುತ್ತೀರಿ. ಮನೆಗೆ ಹೊಸ ವಸ್ತುಗಳನ್ನು ಖರೀದಿಸುವಂತಹ ಆಲೋಚನೆಯನ್ನು ಮಾಡುತ್ತೀರಿ ಅಥವಾ ಹೊಸ ಮನೆಯನ್ನು ಹುಡುಕುವಂತಹ ಯೋಚನೆ ಮಾಡುತ್ತೀರಿ. ಹಾಗೂ ಹೊಸ ಹೊಸ ವಸ್ತುಗಳನ್ನು ಕೂಡ ಖರೀದಿ ಮಾಡುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">