ಶಿವ ಜನಿಸಿದ್ದು ಹೇಗೆ ಸೃಷ್ಟಿಯ ಮೂಲ ಪುರುಷ ಶಿವನ ಜನನ ಹೇಗಾಯಿತು ನೋಡಿ.. - Karnataka's Best News Portal

ಶಿವ ಜನಿಸಿದ್ದು ಹೇಗೆ ಸೃಷ್ಟಿಯ ಮೂಲ ಪುರುಷ ಶಿವನ ಜನನ ಹೇಗಾಯಿತು ನೋಡಿ..

ಶಿವ ದೇವರು ಜನಿಸಿದ್ದು ಹೇಗೆ? ಶಿವನ ತಾಯಿ ತಂದೆ ಯಾರು…?

WhatsApp Group Join Now
Telegram Group Join Now

ಶಿವನ ಜನನಕ್ಕೆ ಸಂಬಂಧಿಸಿದ ಕಥೆಗಳು ಶಿವ ಪುರಾಣದಲ್ಲಿ ಬರುತ್ತದೆ. ಈ ಪುರಾಣದ ಪ್ರಕಾರ ಶಿವನನ್ನು ಸ್ವಯಂ ಭೂ ಎನ್ನುತ್ತಾರೆ. ಅಂದರೆ ಈತ ಉದ್ಭವ ಮೂರ್ತಿ. ಈತ ಸ್ವತಃ ತನಗೆ ತಾನೇ ರೂಪುಗೊಂಡ ದೇವ. ಈ ಮೂಲಕವಾಗಿ ಶಿವನಿಗೆ ತಾಯಿ ತಂದೆ ಇಲ್ಲ ಎನ್ನುವುದನ್ನು ನಾವಿಲ್ಲಿ ಅರ್ಥೈಸಿಕೊಳ್ಳಬೇಕು.

ಆದ್ದರಿಂದ ಶಿವನನ್ನು ನಾಶಪಡಿಸುವಂತಹ ಯಾವ ಒಂದು ವಸ್ತು ಸಹ ಇಲ್ಲಿ ಬ್ರಹ್ಮಾಂಡದಲ್ಲಿಯೇ ಯಾವುದು ಇಲ್ಲ. ಶಿವನು ಸೃಷ್ಟಿಯ ಪಂಚ ಭೂತಗಳನ್ನು ಸಹ ತನಗೆ ಸ್ವತಹ ಹೇಗೆ ಬೇಕೋ ಹಾಗೆ ನಿಯಂತ್ರಿಸಿ ಇಟ್ಟುಕೊಳ್ಳಬಲ್ಲ. ಶಿವನಿಗೆ ಇದೇ ಕಾರಣಕ್ಕೆ ಮೃತ್ಯುವಿನ ಭಯವೇ ಇಲ್ಲ ಆದ್ದರಿಂದಲೇ ಆತನನ್ನು ಮೃತ್ಯುಂಜಯ ಎಂದು ಕರೆಯುತ್ತಾರೆ. ಶಿವನಿಗೆ ಸಾವೇ ಇಲ್ಲ ಇದಿಷ್ಟು ಸಹ ಶಿವ ಪುರಾಣದ ವಿವರವಾದರೆ.

ಇನ್ನೊಂದು ಕೃತಿಯಾದ ವಿಷ್ಣು ಮಹಾಪುರಾಣದಲ್ಲಿ ಶಿವನ ಜನನದ ಕುರಿತು ಬೇರೆಯದ್ದೆ ಕಥೆ ಇದೆ. ಅದರ ಪ್ರಕಾರ ಬ್ರಹ್ಮಾಂಡದ ಒಡೆಯ ನಾದ ಶ್ರೀ ಮಹಾ ವಿಷ್ಣುವಿನ ಮಹಾ ದಿವ್ಯ ಪ್ರಭಿಯಿಂದ ಶಿವನ ಜನನವಾಗುತ್ತದೆ. ಇದರ ಪ್ರಕಾರ ಬ್ರಹ್ಮದೇವ ಸೃಷ್ಟಿಯಾದ ನಂತೆ ಆದರೆ ಶಿವ ಪುರಾಣದಲ್ಲಿ ವಿಷ್ಣುವಿನ ಜನನದ ಕುರಿತು ಬೇರೆಯದ್ದೆ ಕಥೆ ಇದೆ.

ಶಿವನು ತನ್ನ ರುದ್ರಾಕ್ಷಿ ಮಾಲೆ ಜಪಿಸುತ್ತಾ ಧ್ಯಾನಸ್ತನಾಗಿದ್ದಾಗ ಆ ಸರ ದಿಂದ ಉದುರಿದಂತಹ ರುದ್ರಾಕ್ಷಿ ಒಂದರಿಂದ ಶ್ರೀ ವಿಷ್ಣುವಿನ ಜನನ ವಾಯಿತು ಇವೆಲ್ಲವನ್ನೂ ಕೂಡ ನೀವು ಗಮನಿಸಿದ್ದೆ ಆದರೆ. ಇಲ್ಲಿ ವಿಷ್ಣು ಪುರಾಣ ಹಾಗೂ ಶಿವಪುರಾಣ ಇವೆರಡು ಸಹ ಭಿನ್ನವಾಗಿಯೂ ಪರಸ್ಪರ ವ್ಯತಿರಿಕ್ತವಾಗಿಯೂ ಇರುವುದು ನಿಮ್ಮ ಅರಿವಿಗೆ ಬರುತ್ತದೆ. ಇದಲ್ಲದೆ ನಮ್ಮಲ್ಲಿ ಶಿವನ ಜನನದ ಕುರಿತು ಅನೇಕ ಕಥೆಗಳು ಇದೆ. ಅದರಲ್ಲಿ ತೀರ ಸಾಮಾನ್ಯವಾದoತಹ ಕಥೆ ಇದೆ.

See also  ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ

ಇದನ್ನು ನೀವು ಬಹುಪಾಲು ನೀವೆಲ್ಲರೂ ಕೂಡ ನಿಮ್ಮ ಮನೆಗಳಲ್ಲಿ ಹಿರಿಯರಿಂದ ಕೇಳಲ್ಪಟ್ಟಿರುತ್ತೀರಿ. ಅದೇನೆಂದರೆ ಅದೆಷ್ಟೋ ಕಾಲದ ಮುನ್ನ ಒಮ್ಮೆ ವಿಷ್ಣುವಿಗೂ ಹಾಗೂ ಬ್ರಹ್ಮನಿಗೂ ನಡುವೆ ಇಡೀ ಬ್ರಹ್ಮಾಂಡದಲ್ಲಿ ಯಾರು ದೊಡ್ಡವರು ಹಾಗೂ ಯಾರು ಬಲಶಾಲಿ ಎಂಬ ವಿಸ್ತೃತ ವಾಗ್ವಾದ ಏರ್ಪಟ್ಟಿತ್ತು. ಅವರಿಬ್ಬರೂ ಕೂಡ ತಮಗೆ ತಾವೇ ಬಲಶಾಲಿಗಳು ಎಂದು ಪೈಪೋಟಿಗೆ ಬಿದ್ದರು.

ಆಗ ಅವರ ನಡುವೆ ಒಂದು ತೇಜೋವಂತ ಸ್ಥಂಭ ಒಂದು ಪ್ರತ್ಯಕ್ಷವಾಗು ತ್ತದೆ. ಅದರ ಪ್ರಭೆಯಲ್ಲಿ ಸುತ್ತಲಿನದ್ದು ಏನು ಅವರಿಗೆ ಕಾಣಿಸುವುದಿಲ್ಲ. ವಿಷ್ಣು ಹಾಗೂ ಬ್ರಹ್ಮದೇವ ಇಬ್ಬರಿಗೂ ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗುವುದಿಲ್ಲ. ಹೀಗಿರುವಾಗ ಅಲ್ಲಿ ಹೊಳೆಯುತ್ತಿದ್ದ ಸ್ತಂಭದಿಂದ ಅಶರೀರವಾಣಿಯೊಂದು ಹೀಗೆ ಕೇಳಿಸುತ್ತದೆ. ಈ ಕಂಬದ ಅಂತ್ಯವನ್ನು ಮೊದಲು ಯಾರು ತಲುಪುತ್ತಾರೋ ಅವರೇ ಶಕ್ತಿವಂತರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">