ನರಗಳ ಬಲಹೀನತೆ ವಿಕ್ ನೆಸ್ ನರಗಳಲ್ಲಿ ನೋವು ಸೊಂಟದ ಹಿಂದಿನ ನರದ ನೋವು ಕೀಲಗಳಲ್ಲಿ ನೋವು ಕೈಕಾಲು ಪಾದದನೋವು.ತಲೆಯಿಂದ ಹಿಡಿದು ಕಾಲಿನ ನರಗಳ ಸಮಸ್ಯೆ ನರಗಳಲ್ಲಿ ಶಕ್ತಿ ಹೆಚ್ಚಿಸುತ್ತದೆ….||
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗು ಕೂಡ ತಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ನರ ದೌರ್ಬಲ್ಯದ ಸಮಸ್ಯೆಗಳು ಕಾಣಿಸುತ್ತಿರುತ್ತದೆ. ಹಲವಾರು ನೋವುಗಳನ್ನು ಅವರು ಅನುಭವಿಸುತ್ತಿರುತ್ತಾರೆ ಅದಕ್ಕಾಗಿ ಅವರು ಹೆಚ್ಚಾಗಿ ಮಾತ್ರೆಗಳನ್ನು ನುಂಗುವುದರಿಂದ ಆಸ್ಪತ್ರೆಗಳಿಗೆ ತೋರಿಸಿಕೊಳ್ಳುವುದರಿಂದ ತಮ್ಮ ನೋವನ್ನು ಕಡಿಮೆ ಮಾಡಿಕೊಳ್ಳುತ್ತಿರುತ್ತಾರೆ.
ಆದರೆ ಅವೆಲ್ಲವೂ ಕೂಡ ನಮ್ಮ ದೇಹಕ್ಕೆ ಅನಾರೋಗ್ಯವನ್ನು ಹೆಚ್ಚಿಸು ತ್ತದೆ ಎಂದು ಹೇಳಬಹುದು. ಆದ್ದರಿಂದ ಅವುಗಳನ್ನು ಉಪಯೋಗಿಸು ವುದರ ಬದಲು ಈ ದಿನ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ಅಂದರೆ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ತಿನ್ನುವುದರಿಂದ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು. ಜೊತೆಗೆ ನಿಮ್ಮ ದೇಹಕ್ಕೆ ನಿಮ್ಮ ನರಗಳಿಗೆ ಒಳ್ಳೆಯ ಶಕ್ತಿಯನ್ನು ಕೊಡುವುದಕ್ಕೆ ಇದು ಸಹಾಯ ಮಾಡುತ್ತದೆ ಎಂದು ಹೇಳಬಹುದು.
ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನದಲ್ಲಿ ಸಕ್ಕರೆಯನ್ನು ಉಪಯೋಗಿಸುತ್ತಿದ್ದಾರೆ. ಆದರೆ ಅದು ನಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡಿ ಡಯಾಬಿಟೀಸ್ ಸಮಸ್ಯೆ ಬರುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅವುಗಳನ್ನು ಉಪಯೋಗಿಸುವುದರ ಬದಲು ಆರ್ಗಾನಿಕ್ ಬೆಲ್ಲ, ತಾಟಿ ಬೆಲ್ಲ, ಇವುಗಳನ್ನು ಉಪಯೋಗಿಸು ವುದು ಬಹಳ ಅತ್ಯುತ್ತಮವಾಗಿರುತ್ತದೆ ಇದರಲ್ಲಿ ಯಾವುದೇ ರೀತಿಯಾದ ಕೆಮಿಕಲ್ ಪದಾರ್ಥ ಉಪಯೋಗಿಸಿರುವುದಿಲ್ಲ. ಹಾಗಾಗಿ ಬೆಲ್ಲವನ್ನು ತಿನ್ನುವುದರಿಂದ ನಿಮ್ಮ ಮೂಳೆಗಳು ಹೆಚ್ಚು ಬಲಿಷ್ಠವಾಗುತ್ತದೆ.
ಹಾಗೂ ಮೂಳೆಗಳು ಶಕ್ತಿಯುತವಾಗುತ್ತದೆ ಹಾಗೂ ಇದರ ಜೊತೆ ಹಸಿ ಕಡಲೆಯನ್ನು ನೆನೆ ಹಾಕಿ ಅದನ್ನು ಮೊಳಕೆ ಬರಿಸಿ ಇದರ ಜೊತೆ ನೀವು ಬೆಲ್ಲವನ್ನು ತಿನ್ನುತ್ತಾ ಬಂದರೆ ನಿಮ್ಮ ಮೂಳೆಗಳಿಗೆ ಒಳ್ಳೆಯ ಶಕ್ತಿ ಸಿಗುತ್ತದೆ. ಇದರಿಂದ ಯಾವುದೇ ರೀತಿಯ ನೋವುಗಳು ಕೂಡ ನಿಮಗೆ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು.
ಇನ್ನು ಎರಡನೆಯದಾಗಿ ಪಚ್ಚ ಬಾಳೆಹಣ್ಣನ್ನು ಮಧ್ಯಾಹ್ನದ ಸಮಯ ನೀವು ಊಟ ಮಾಡುವುದಕ್ಕೂ ಅರ್ಧ ಗಂಟೆ ಮುಂಚೆ ತಿನ್ನಬೇಕು. ಈ ರೀತಿ ನೀವು ಒಂದು ವಾರ ತಿನ್ನುತ್ತಾ ಬನ್ನಿ ನಿಮಗೆ ಇದರ ವ್ಯತ್ಯಾಸ ತಿಳಿಯುತ್ತದೆ ಇದರಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಷಿಯಂ, ನಮ್ಮ ಮೂಳೆಗಳಿಗೆ ಒಳ್ಳೆಯ ಶಕ್ತಿಯನ್ನು ಒದಗಿಸುತ್ತದೆ.
ಜೊತೆಗೆ ಬೆಟ್ಟದ ನೆಲ್ಲಿಕಾಯಿ ಪುಡಿಗೆ ಕಲ್ಲು ಸಕ್ಕರೆ ಪುಡಿಯನ್ನು ಹಾಕಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನೀವು ಸೇವನೆ ಮಾಡುತ್ತಾ ಇರುವುದರಿಂದ. ನಿಮ್ಮ ನರಗಳಲ್ಲಿರುವಂತಹ ನಿಶಕ್ತಿ ದೌರ್ಬಲ್ಯ ಇವೆಲ್ಲವೂ ಕೂಡ ಕಡಿಮೆಯಾಗುತ್ತದೆ. ನರಗಳಿಗೆ ಒಳ್ಳೆಯ ಶಕ್ತಿ ಬರುತ್ತದೆ. ಇದರಲ್ಲಿರುವಂತಹ ವಿಟಮಿನ್ ಇ, ವಿಟಮಿನ್ ಸಿ, ನಮ್ಮ ಮೂಳೆಗಳಿಗೆ ನಮ್ಮ ನರಗಳಿಗೆ ಒಳ್ಳೆಯ ಶಕ್ತಿಯನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.